ನೆಲಮಂಗಲ: ಯುವಕನೊಬ್ಬನನ್ನ ಹೆದರಿಸಲು ಮುಂದಾಗಿದ್ದ ಸ್ನೇಹಿತರು ದೈತ್ಯ ಹೆಬ್ಬಾವಿನ AI ಫೋಟೋವನ್ನ (Giant Python AI Photo) ಹರಿಬಿಟ್ಟು ಜನರು ಕೆಲಕಾಲ ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ನಗರದ (Nelamangala City) ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಯುವಕರು ನೆಲಮಂಗಲದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಬಂದಿರುವುದಾಗಿ ಎಐ ಫೋಟೋ ವೈರಲ್ ಮಾಡಿದ್ದರು. ಇದನ್ನೂ ಓದಿ: ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ

ಫೋಟೋ ನೋಡಿ ನಿಜವಾಗಿಯೂ ಹೆಬ್ಬಾವು ಬಂದಿದೆ ಅಂತ ಉರಗ ರಕ್ಷಕ ಸ್ನೇಕ್ ಅರುಣ್ ಸ್ಥಳಕ್ಕೆ ದೌಡಾಯಿಸಿ 2 ತಾಸು ಹುಡುಕಾಟ ನಡೆಸಿದ್ದರು. 24 ಗಂಟೆಗಳಲ್ಲಿ ಎಲ್ಲರ ಸ್ಟೇಟಸ್ ನಲ್ಲಿ ಹರಿದಾಡಿದ ಫೋಟೋ ನೋಡಿ ಜನರು ಗ್ರಾಮದಲ್ಲಿ ಓಡಾಡೋದಕ್ಕೂ ಭಯಪಡುವಂತಾಗಿತ್ತು.
ಪರಿಶೀಲನೆ ನಡೆಸಿದಾಗ ವಾಟರ್ ಮ್ಯಾನ್ ಪ್ರಸಾದ್ ಎದುರಿಸಲು ಯುವಕರೇ ಎಐ ಬಳಸಿ ಫೋಟೋ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪರಶುರಾಮನ ಅವತಾರದಲ್ಲಿ ರಾಹುಲ್‌ಗಾಂಧಿ ಪೋಸ್ಟರ್ – ಜನ್ಮದಿನಕ್ಕೆ ಹಾಲಿನ ಅಭಿಷೇಕ
ಪ್ರಸಾದ್, ಮನೆಗಳಿಗೆ ಸರಿಯಾಗಿ ನೀರು ಬಿಡ್ತಿರಲಿಲ್ಲ ಎಂಬ ಆರೋಪದಲ್ಲಿ ಈ ಹಿನ್ನೆಲೆ ಮನೆ ಬಳಿ ಬಾರದಂತೆ ಹೆದರಿಸಲು ಹರಿಬಿಟ್ಟಿರುವ ಎಐ ಫೋಟೋ ಅಂತ ಗೊತ್ತಾಗುತ್ತಿದ್ದಂತೆ ಬಿದ್ದು ಬಿದ್ದು ಜನರು ನಕ್ಕಿದ್ದಾರೆ.
