ಲಕ್ನೋ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi Birthday) ಅವರ 56ನೇ ಜನ್ಮದಿನವನ್ನು ಉತ್ತರ ಪ್ರದೇಶದ(Uttara Pradesh) ವಾರಾಣಸಿಯಲ್ಲಿ(Varanasi) ಯುವ ಕಾಂಗ್ರೆಸ್ ಕಾರ್ಯಕರ್ತರು ವಿಶೇಷವಾಗಿ ಆಚರಿಸಿದರು. ಗಂಗಾ ನದಿಯ ದಡದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಶುಭ ಹಾರೈಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿಕಾಶ್ ಸಿಂಗ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಗಂಗಾ ತಾಯಿಯ ಸನ್ನಿಧಾನದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಹಾಲು ಹಾಗೂ ಗಂಗಾಜಲ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಸ್ಥಳೀಯ ಪುರೋಹಿತರು ವೇದ ಮಂತ್ರಗಳನ್ನು ಪಠಿಸಿ ಆಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಪರಶುರಾಮನ ಅವತಾರದ ಮಾದರಿಯಲ್ಲಿ ಚಿತ್ರಿಸಿರುವ ವಿಶೇಷ ಕಟೌಟ್ ಗಮನ ಸೆಳೆಯಿತು. ಪೋಸ್ಟರ್‌ನಲ್ಲಿ ಒಂದು ಕೈಯಲ್ಲಿ ಪರಶು (ಕೊಡಲಿ) ಹಾಗೂ ಮತ್ತೊಂದು ಕೈಯಲ್ಲಿ ಭಾರತದ ಸಂವಿಧಾನ ಹಿಡಿದಿರುವ ರೀತಿಯಲ್ಲಿ ಅವರ ಚಿತ್ರಣ ಮಾಡಲಾಗಿತ್ತು. ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆ ಬಿಲ್ ಪಾಸ್‌ಗೆ ಬಿಜೆಪಿ ಮೆಗಾ ಪ್ಲ್ಯಾನ್ – 3ನೇ 2ರಷ್ಟು ಬಹುಮತಕ್ಕೆ ಭಾರಿ ತಂತ್ರ
ಈ ಕುರಿತು ವಿಕಾಶ್ ಸಿಂಗ್ ಮಾತನಾಡಿ, ನಮ್ಮ ಗೌರವಾನ್ವಿತ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ಯುವ ಕಾಂಗ್ರೆಸ್ ವತಿಯಿಂದ ಆಚರಿಸಿದ್ದೇವೆ. ಬ್ರಾಹ್ಮಣ ಸಮುದಾಯದವರು ವೇದ ಮಂತ್ರಗಳ ಮೂಲಕ ಅವರಿಗೆ ಆಶೀರ್ವಾದ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಪ್ರಧಾನಿಯಾಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
VIDEO | Varanasi: Youth Congress workers celebrate Lok Sabha Leader of Opposition Rahul Gandhi’s birthday with symbolic rituals, including pouring milk over his photograph in the Ganga River. Vikash Singh, District President, Youth Congress, says, “Today, all of us from the… pic.twitter.com/fPJcZtnAI6
— Press Trust of India (@PTI_News) June 19, 2026
ಈ ವಿಶಿಷ್ಟ ಆಚರಣೆಯ ವಿಡಿಯೋಗಳು ಮತ್ತು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಹುಲ್ ಗಾಂಧಿ ಅವರ ಜನ್ಮದಿನದ ಈ ಆಚರಣೆ ರಾಜಕೀಯ ವಲಯದಲ್ಲೂ ಸಾಕಷ್ಟು ಗಮನ ಸೆಳೆದಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಆಪರೇಷನ್ ಟೈಗರ್ 2.0 – 16 ಶಾಸಕರನ್ನ ಸೆಳೆಯಲು ಶಿಂಧೆ ಗ್ಯಾಂಗ್ ಪ್ರಯತ್ನ
