ಮುಂಬೈ: ಮಹಾರಾಷ್ಟ್ರ (Maharashtra) ರಾಜಕೀಯದಲ್ಲಿ ಶಿವಸೇನೆ (UBT) ಪಕ್ಷದೊಳಗಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
6 ಲೋಕಸಭಾ ಸಂಸದರು ಸ್ಪೀಕರ್‌ಗೆ ಪತ್ರ ಬರೆದು ಪ್ರತ್ಯೇಕ ಬಣವಾಗಿ ಗುರುತಿಸುವಂತೆ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ ಡಿಸಿಎಂ ಏಕನಾಥ್ ಶಿಂಧೆ (Eknath Shinde) ಬಣ, ಉದ್ಧವ್ ಬಣದ ಶಾಸಕರನ್ನ ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಉದ್ಧವ್ ಬಣದ ಶಿವಸೇನೆ (Shiv Sena – UBT) ವಿಧಾನಸಭೆಯಲ್ಲಿ 20 ಮತ್ತು ವಿಧಾನ ಪರಿಷತ್‌ನಲ್ಲಿ 6 ಸದಸ್ಯರನ್ನ ಒಳಗೊಂಡಿದೆ. ವಿಧಾನಸಭೆಯ 20 ಶಾಸಕರ ಪೈಕಿ, 16 ಶಾಸಕರು ಬಂಡಾಯ ಏಳುವ ನಿರೀಕ್ಷೆಯಿದೆ. ಅವರನ್ನ ಸೆಳೆಯುವ ಪ್ರಯತ್ನ ಶಿಂಧೆ ಬಣದಿಂದ ನಡೆಯುತ್ತಿದೆ.
ಒಟ್ಟಿನಲ್ಲಿ, ವಿಧಾನಸಭೆ ಮುಂಗಾರು ಅಧಿವೇಶನದ ಸಮಯದಲ್ಲೇ ರಾಜಕೀಯ ಕ್ಷಿಪ್ರಕ್ರಾಂತಿ ನಡೆಯುತ್ತಿದೆ. ಈಗಾಗಲೇ 9 ಸಂಸದರ ಪೈಕಿ 6 ಮಂದಿಯನ್ನ ಸೆಳೆಯಲಾಗಿದೆ.
