– ಇಂಡಿ ಕೂಟದ ಎಸ್‌ಪಿ, ಆರ್‌ಜೆಡಿ ಮೇಲೂ ಕಣ್ಣು!
ನವದೆಹಲಿ: ದೇಶದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತಿರುವ ಹೊತ್ತಲ್ಲೇ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಹೇಗಾದರೂ ಮಾಡಿ ಮೂರನೇ ಎರಡರಷ್ಟು ಮತಕ್ಕೆ ಬಿಜೆಪಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿದೆ.
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲು ಬಿಜೆಪಿ ಸಿದ್ಧವಾಗಿದ್ದು, ಬದಲಾದ ರಾಜಕೀಯ ಸನ್ನಿವೇಶಗಳ ಲಾಭ ಪಡೆಯಲು ಸರ್ಕಾರ ಮುಂದಾಗಿದೆ.
ಟಿಎಂಸಿ, ಉದ್ಧವ್ ಬಣದ ಜೊತೆಗೆ ಡಿಎಂಕೆ ಸಂಸದರ ಬೆಂಬಲ ಪಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆಯಲ್ಲಿ ತೊಡಗಿದ್ದಾರೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಇಬ್ಭಾಗವಾಗಲಿದ್ದು, 37 ಸಂಸದರಲ್ಲಿ 25ಕ್ಕೂ ಹೆಚ್ಚು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಅಂತ ಉತ್ತರಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಂಸತ್ತಲ್ಲಿ 3ನೇ 2ರಷ್ಟು ಬಹುಮತಕ್ಕೆ ಪ್ಲ್ಯಾನ್
* ಎನ್‌ಡಿಎ ಮೈತ್ರಿಕೂಟದ ಬಲ- 293
* ಟಿಎಂಸಿ ಬಂಡಾಯ ಬೆಂಬಲಿಸಿದ್ರೆ- 313
(20 ಸಂಸದರು ಬೆಂಬಲಿಸೋ ಸಾಧ್ಯತೆ)
* ಉದ್ಧವ್ ಶಿವಸೇನೆ ಬೆಂಬಲಿಸಿದ್ರೆ- 319
(6 ಸಂಸದರು ಬೆಂಬಲ ನಿರೀಕ್ಷೆ)
* ಎನ್‌ಡಿಎಗೆ ಡಿಎಂಕೆ ಬೆಂಬಲಿಸಿದ್ರೆ- 341
(ಡಿಎಂಕೆ 22 ಸಂಸದರ ಬಲ)
* ಡಿಎಂಕೆ ಬೆಂಬಲಿಸಿದ್ರೂ ಇನ್ನೂ 11 ಮತಗಳ ಕೊರತೆ
(ವೈಎಸ್‌ಆರ್‌ಪಿ-4 ಸಂಸದರ ಬೆಂಬಲ ಸಾಧ್ಯತೆ)
* ಇನ್ನೂ 6 ಸಂಸದರ ಕೊರತೆ
(ಎಸ್ಪಿ ಇಬ್ಭಾಗವಾದ್ರೆ ಎನ್‌ಡಿಎ ಹಾದಿ ಸಲೀಸು)
