– 22 ಜನರ ಸ್ಥಿತಿ ಗಂಭೀರ
ಬ್ಯಾಂಕಾಕ್: ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನಲ್ಲಿರುವ (Bangkok) ಪಬ್ (Pub) ಒಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 27 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 63 ಜನರು ಗಾಯಗೊಂಡಿದ್ದಾರೆ. ಇದರಲ್ಲಿ 22 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಉತ್ತರ ಭಾಗದ ಚತುಚಕ್ ಜಿಲ್ಲೆಯ ʻರೋಂಗ್ ಬೀರ್ ನಾ ಲಾಟ್ ಫ್ರಾವೊʼ ಪಬ್‌ನಲ್ಲಿ ಮಧ್ಯರಾತ್ರಿಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಭಯಭೀತರಾದ ಗ್ರಾಹಕರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು, ದಟ್ಟವಾದ ಕಪ್ಪು ಹೊಗೆ ಏಳುವುದು ದಾಖಲಾಗಿದೆ. ಇದನ್ನೂ ಓದಿ: ಹಾರ್ಮುಜ್ ಮತ್ತೆ ಬಂದ್; ಇರಾನ್‌ನ 140 ಗುರಿಗಳ ಮೇಲೆ ಅಮೆರಿಕ ದಾಳಿ
ಥೈಲ್ಯಾಂಡ್ ಪ್ರಧಾನಿ ಅನುತಿನ್ ಚಾರ್ನ್‌ವಿರಕುಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಪ್ಪತ್ತೇಳು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ತತ್ತರಿಸಿದ ಜನ
ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಜನರು ಕಟ್ಟಡದಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಂತೆ ದಟ್ಟವಾದ ಕಪ್ಪು ಹೊಗೆ ಆವರಿಸಿರುವುದು ಕಾಣಬಹುದು. ಅಲ್ಲದೇ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಅಲ್ಲಿಂದ ಪಿಠೋಪಕರಣಗಳು ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿವೆ.
ಥೈಲ್ಯಾಂಡ್ ನೈಟ್‌ಕ್ಲಬ್ ಅಗ್ನಿ ಅವಘಡ
2022 ರಲ್ಲಿ, ಪೂರ್ವ ಥೈಲ್ಯಾಂಡ್‌ನ ಮ್ಯೂಸಿಕ್ ಪಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಜನರು ಸಾವನ್ನಪ್ಪಿದ್ದರು. 2009 ರಲ್ಲಿ ಬ್ಯಾಂಕಾಕ್‌ನ ಸಂತಿಕಾ ನೈಟ್‌ಕ್ಲಬ್‌ನಲ್ಲಿ ಹೊಸ ವರ್ಷದ ಮುನ್ನಾದಿನ ಸಂಭ್ರಮಾಚರಣೆ ವೇಳೆ 66 ಜನರು ಸಾವನ್ನಪ್ಪಿದ್ದರು. ಈ ಅವಘಡದಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ʻಗ್ಯಾಲಕ್ಸಿʼ ಮೇಲೆ ದಾಳಿ – ಓರ್ವ ಭಾರತೀಯ ಮಿಸ್ಸಿಂಗ್, 10 ಜನರ ರಕ್ಷಣೆ
