ಸೂಪರ್ ಸ್ಟಾರ್ ರಜನಿಕಾಂತ್, ಈಗಲೂ ಬಹುಬೇಡಿಕೆಯ ಸ್ಟಾರ್. ರಜನಿ (Rajinikanth) ಲೆಗೆಸಿ ಮುಂದುವರೆಸಿಕೊಂಡು ಹೋಗಲು ರಜನಿಕಾಂತ್ ಮೊಮ್ಮಗ ಶೀಘ್ರದಲ್ಲೇ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ಇದೀಗ ಚಿತ್ರರಂಗಕ್ಕೆ ಬರುವ ದಾರಿಯಲ್ಲಿರೋದು ರಜನಿ ಮುದ್ದಿನ ಮೊಮ್ಮಗ ಯಾತ್ರಾ. ಇವರು ರಜನಿಕಾಂತ್ ಪುತ್ರಿ ಐಶ್ವರ್ಯ ಧನುಷ್ ಜೋಡಿಯ ಹಿರಿಯ ಮಗ. ಐಶ್ವರ್ಯ ಜೊತೆ ಧನುಷ್ (Dhanush) ವಿಚ್ಛೇದನದ ಬಳಿಕ ತಾತ ರಜನಿಕಾಂತ್ ಮನೆಯಲ್ಲೇ ಇರುವ ಯಾತ್ರಾ ರಜನಿಯ ಮುದ್ದಿನ ಮೊಮ್ಮಗ. ಇದೀಗ ಯಾತ್ರಾ ಚಿತ್ರರಂಗ ಪ್ರಯಾಣ ಪ್ರಾರಂಭಿಸಲು ತೆರೆ ಹಿಂದಿನ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಸಿಎಂ ಆದ ಬಳಿಕ ವಿಜಯ್‌ರನ್ನ ಭೇಟಿಯಾದ ಸಮಂತಾ – ದಳಪತಿಯನ್ನ ಹಾಡಿಹೊಗಳಿದ ನಟಿ
ಆ ಚಿತ್ರವನ್ನ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಲಿದ್ದಾರೆ ಎಂಬ ವಿಚಾರವೂ ಚರ್ಚೆಯಲ್ಲಿದೆ. ಮಗನ ಸಿನಿಮಾ ಕುರಿತಾಗಿ ಧನುಷ್ ತಯಾರಿ ನಡೆಸಿದ್ದಾರೆ ಅನ್ನೋದು ವಿಶೇಷ. ಧನುಷ್ ಹಾಗೂ ಐಶ್ವರ್ಯ ಜೋಡಿ ವಿಚ್ಛೇದನ ಪಡೆದರೂ ಮಕ್ಕಳ ಜೊತೆ ಸಂಬಂಧ ಉತ್ತಮವಾಗಿದೆ. ಧನುಶ್ ಸಿನಿಮಾಗಳ ಕಾರ್ಯಕ್ರಮದಲ್ಲೂ ಮಕ್ಕಳಿಬ್ಬರು ಕಾಣಿಸಿಕೊಳ್ತಾರೆ. ಇದೀಗ ತಮ್ಮ ಹಿರಿ ಮಗನ ಸಿನಿಮಾ ಎಂಟ್ರಿ ಬಗ್ಗೆ ಖುದ್ದು ಧನುಶ್ ಯೋಚಿಸಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಧನುಷ್ ತಮ್ಮ ಮಗನ ಸಿನಿಮಾ ಬಗ್ಗೆ ಮಾತನಾಡಿದ್ದರು. “ನಾನು 16 ನೇ ವಯಸ್ಸಿಗೆ ನಟನೆಗೆ ಬಂದೆ. ಯಾತ್ರಾಗೆ ಈಗ ಕೇವಲ 19 ವರ್ಷ, ನಾನು ಅವನನ್ನು ಇನ್ನೂ ಚಿಕ್ಕ ಹುಡುಗನಂತೆ ನೋಡುತ್ತೇನೆ. ಅವನು ಏನಾಗುತ್ತಾನೆ ಎಂದು ನನಗೆ ಇನ್ನೂ ತಿಳಿದಿಲ್ಲ, ಈಗ ಹೇಳುವುದು ತೀರಾ ಮುಂಚಿತವಾಗುತ್ತದೆ ಎಂದಿದ್ದರು. ಆದರೆ ಈಗ ಧನುಶ್ ತಮ್ಮ ಮಗನಿಗೆ ಉತ್ತಮ ಕಥೆ ಮಾಡಿಕೊಡಿ ಎಂದು ರಾಜ್‌ಕುಮಾರ್ ಪೆರಿಯಸಾಮಿ ಬಳಿ ಕೇಳಿದ್ದಾರೆ ಎನ್ನಲಾಗುತ್ತಿದೆ. ಅದರೆ ಅವರ ಅಭಿಪ್ರಾಯಕ್ಕೆ ರಜನಿಕಾಂತ್ ಒಪ್ಪಕೊಳ್ತಾರಾ..? ಖುದ್ದು ನಿರ್ದೇಶಕಿ ಆಗಿರುವ ಯಾತ್ರಾ ಅಮ್ಮ ಐಶ್ವರ್ಯ ಅಭಿಪ್ರಾಯವೇನು ಅನ್ನೋದೆಲ್ಲ ನಿಗೂಢ, ಆದರೆ ರಜನಿಕಾಂತ್ ಮೊಮ್ಮಗ ಸಿನಿಮಾ ಲೋಕಕ್ಕೆ ಬರುವುದಂತೂ ನಿಶ್ಚಿತ ಎನ್ನುತ್ತದೆ ಸುದ್ದಿಮೂಲ. ಇದನ್ನೂ ಓದಿ: ಆಲಿಯಾಗೆ ಇಂಥ ಪಾತ್ರ ಸೂಟ್ ಆಗಲ್ಲ: ಆಲ್ಫಾ ಟ್ರೇಲರ್‌ಗೆ ನೆಟ್ಟಿಗರ ಹೆವಿ ಟ್ರೋಲ್
