ಆಲಿಯಾ ಭಟ್ (Alia Bhatt) ಮತ್ತು ಶಾರ್ವರಿ ನಟನೆಯ ಆಲ್ಫಾ (Alpha) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಟ್ರೇಲರ್ (Trailer) ಮೆಚ್ಚಿಕೊಂಡರೆ, ಇನ್ನೂ ಕೆಲವರು ಆಲಿಯಾ ಆಯ್ಕೆಯ ಬಗ್ಗೆ ಟೀಕೆ ಮಾಡಿದ್ದಾರೆ.
ಟ್ರೇಲರ್‌ನಲ್ಲಿ ಭರ್ಜರಿ ಆ್ಯಕ್ಷನ್, ಸ್ಪೈ ಥ್ರಿಲ್ಲರ್ ಕಥೆ ಮತ್ತು ಸ್ಟೈಲಿಶ್ ದೃಶ್ಯಗಳು ಕಾಣಿಸಿಕೊಂಡಿವೆ. ಆದರೆ ಹಲವಾರು ನೆಟ್ಟಿಗರು ಆಲಿಯಾ ಭಟ್ ಇಂತಹ ಆ್ಯಕ್ಷನ್ ಪಾತ್ರಕ್ಕೆ ಹೊಂದಿಕೆಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಲಿಯಾಗೆ ಆ್ಯಕ್ಷನ್ ಫಿಲ್ಮ್ ಸೂಟ್ ಆಗಲ್ಲ. ಇಂತಹ ಪಾತ್ರಗಳನ್ನು ಅವರು ಮಾಡಬಾರದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಆ್ಯಕ್ಷನ್ ದೃಶ್ಯಗಳು ನೈಜವಾಗಿ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: ಸಿಎಂ ಆದ ಬಳಿಕ ವಿಜಯ್‌ರನ್ನ ಭೇಟಿಯಾದ ಸಮಂತಾ – ದಳಪತಿಯನ್ನ ಹಾಡಿಹೊಗಳಿದ ನಟಿ
ಇನ್ನೊಂದು ಕಡೆ, ಟ್ರೇಲರ್ ಕಥೆಯ ಬಹುತೇಕ ಭಾಗವನ್ನು ಮೊದಲೇ ತೋರಿಸಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದರಿಂದ ಚಿತ್ರದ ಮೇಲಿನ ಕುತೂಹಲ ಕಡಿಮೆಯಾಗಬಹುದು. ಕೆಲವರು ಟ್ರೇಲರ್ ನೋಡಲು ಯಾವುದೋ ಎನರ್ಜಿ ಡ್ರಿಂಕ್ ಆ್ಯಡ್‌ನಂತೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ನಟ ಬಾಬಿ ಡಿಯೋಲ್ ಅವರ ಪಾತ್ರ ಹಾಗೂ ಶಾರ್ವರಿ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಶಾರ್ವರಿ ಅವರ ಎಂಟ್ರಿ ಮತ್ತು ಆ್ಯಕ್ಷನ್ ದೃಶ್ಯಗಳು ಗಮನ ಸೆಳೆದಿವೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಟ್ರೇಲರ್ ಕೊನೆಯಲ್ಲಿ ಹೃತಿಕ್ ರೋಷನ್ ಅವರ ಅತಿಥಿ ಪಾತ್ರದ ಝಲಕ್ ಕೂಡ ಕಾಣಿಸಿದ್ದು, ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ವಾರ್ ಚಿತ್ರದ ಮೇಜರ್ ಕಬೀರ್ ಧಲಿವಾಲ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಆಲ್ಫಾ ಚಿತ್ರದಲ್ಲಿ ಬಾಬಿ ಡಿಯೋಲ್ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಟ್ರೇಲರ್ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದರೂ, ಚಿತ್ರ ಬಿಡುಗಡೆಯ ಬಳಿಕವೇ ಅಂತಿಮ ತೀರ್ಪು ಸಿಗಲಿದೆ ಎಂಬ ಮಾತು ಸಿನಿವಲಯದಲ್ಲಿ ಕೇಳಿಬರುತ್ತಿದೆ. ಆಲ್ಫಾ ಸಿನಿಮಾ ಜುಲೈ 3ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಅನಾರೋಗ್ಯದ ಆತಂಕ ಹೊರಹಾಕಿದ ಗಾಯಕ ಸೋನು ನಿಗಂ
