Connect with us

Crime

ಮಗ ಕೊಲೆಯಾದ ಸುದ್ದಿ ಕೇಳಿ ತಾಯಿಗೆ ಹೃದಯಾಘಾತ

Published

on

ಕಲಬುರಗಿ: ಮಗನ ಕೊಲೆ ಸುದ್ದಿ ಕೇಳಿ ತಾಯಿಯೂ ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.

ಕೆಇಬಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಮೊನಪ್ಪ (42) ಕೊಲೆಯಾದ ದುರ್ದೈವಿ. ಲಲಿತಾಬಾಯಿ (70) ಹೃದಯಾಘಾತದಿಂದ ಸಾವನ್ನಪ್ಪಿರುವ ತಾಯಿ.

ಅಕ್ಟೋಬರ್ 7 ರಂದು ಹಣಕ್ಕಾಗಿ ಮೊನಪ್ಪನನ್ನ ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಕುಟುಂಬಸ್ಥರಿಂದ 6 ಲಕ್ಷ ರೂ. ಹಣ ಕೇಳಿ ಕೊಡದಿದ್ದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಕುಟುಂಬದವರು ಹಣವನ್ನು ನೀಡಿದ್ದಾರೆ. ಆದರೆ ಪಾಪಿ ದುಷ್ಕರ್ಮಿಗಳು ಹಣ ಪಡೆದರೂ ಸಹ ಮೊನಪ್ಪನನ್ನು ಬಿಡದೇ ಕೊಲೆ ಮಾಡಿ ಜಿಲ್ಲೆಯ ಸೈಯದ್ ಚಿಂಚೋಳಿ-ನರೋಣ ಮಾರ್ಗ ಮಧ್ಯೆ ಶವವನ್ನು ಬಿಸಾಕಿದ್ದಾರೆ.

ಮೊನ್ನಪ್ಪನ ಶವ ಪತ್ತೆಯಾದ ತಕ್ಷಣ ಕುಟುಂಬಕ್ಕೆ ಬಂದು ವಿಷಯ ತಿಳಿಸಿದ್ದಾರೆ. ಆದರೆ ತಾಯಿ ಈ ಸುದ್ದಿಯನ್ನು ಕೇಳಿದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಚಯಸ್ಥರಿಂದಲೇ ಈ ಕೃತ್ಯ ನಡೆದಿದೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *