ಬೆಂಗಳೂರು: ಗುರುವಾರದಿಂದ (ಜು.23) ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆಯಾಗಿದೆ. ಈಗಾಗಲೇ ಚಿನ್ನ, ಬೆಳ್ಳಿ, ತರಕಾರಿ, ಹಣ್ಣು, ತುಪ್ಪ, ಬೆಣ್ಣೆ ಏರಿಕೆಯಿಂದ ಕಂಗೆಟ್ಟಿರೋ ಜನಸಾಮಾನ್ಯರಿಗೆ, ಇದೀಗ ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರೋದು (Price Hike) ಮತ್ತೊಂದು ಬರೆ ಎಳೆದಂತಾಗಿದೆ.
ಅಕ್ಕಿ, ಬೇಳೆ ಕಾಳುಗಳು, ಮಸಾಲೆ, ಕೆಲ ಡ್ರೈ ಪ್ರೂಟ್ಸ್ ಬೆಲೆಯಲ್ಲಿ ಏರಿಕೆಯಾಗಿದೆ. ಮಸಾಲೆ ಪದಾರ್ಥಗಳು, ಬೇಳೆ ಕಾಳುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಸಾಲೆ ಪದಾರ್ಥಗಳಲ್ಲಿ ಅದ್ರಲ್ಲೂ ಏಲಕ್ಕಿ ಕೆ.ಜಿಗೆ 4 ಸಾವಿರ ರೂ. ತಲುಪಿದೆ. ಹಾಗೆಯೇ ದನಿಯಾ, ಜೀರಿಗೆ, ಸಾಸಿವೆ ಬೆಲೆಯೂ ಏರಿಕೆಯಾಗಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್ – ಪೆನ್‌ಡ್ರೈವ್ ಹಂಚಿದ್ದ 8 ಆರೋಪಿಗಳಿಗೆ ಸಮನ್ಸ್
ಡ್ರೈಫ್ರೂಟ್ಸ್‌ಗಳಲ್ಲಿ ಬಾದಾಮಿ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ವ್ಯಾಪಾರಿಗಳು ಯಾವ ರೀತಿ ವ್ಯಾಪಾರ ಮಾಡೋದು ಅಂತಾ ಕಂಗಾಲಾಗಿದ್ದಾರೆ. ಇದರ ಜೊತೆಗೆ ಉದ್ದಿನ ಬೇಳೆ, ತೊಗರೆ ಬೇಳೆ, ಬೆಲ್ಲ, ಸಕ್ಕರೆ, ಕಡಲೆಬೀಜ, ಕಡಲೆಕಾಳು, ಹುಣಸೆಹಣ್ಣು, ಎಲ್ಲಾ ರೀತಿಯ ಮೆಣಸಿನಕಾಯಿಗಳ ಬೆಲೆ ಏರಿಕೆಯಾಗಿದೆ. ಮಳೆ ಕೊರತೆ, ಇಳುವರಿ ಕೊರತೆಯಿಂದ ಬೆಲೆಗಳು ಏರಿಕೆಯಾಗಿವೆ.
ಯಾವುದು ಎಷ್ಟು?
ಹಳೇ ದರ ಹೊಸ ದರ
ಏಲಕ್ಕಿ: 2,800 ರೂ. 4,000ರೂ.
ದನಿಯಾ: 250ರೂ. 310ರೂ.
ಸಕ್ಕರೆ: 45ರೂ. 51ರೂ.
ಉದ್ದಿನಬೇಳೆ: 120ರೂ. 145ರೂ.
ತೋಗರಿಬೇಳೆ: 118ರೂ. 130ರೂ.
ಹುಣಸೆಹಣ್ಣು: 210ರೂ. 235ರೂ.
ಬೆಲ್ಲ: 56ರೂ. 65ರೂ.
ಕಡಲೆಕಾಳು: 70ರೂ. 82ರೂ.
ಜೀರಿಗೆ: 260ರೂ. 300ರೂ.
ಸಾಸಿವೆ: 95ರೂ. 120ರೂ.
