ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwala Revanna) ಕೇಸ್‌ನಲ್ಲಿ ಪೆನ್‌ಡ್ರೈವ್ ಹಂಚಿದ್ದ 8 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ ಬೆಂಗಳೂರಿನ (Bengaluru) 42ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ (Prajwala Revanna) ಸದ್ಯ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಪೆನ್‌ಡ್ರೈವ್ (Pendrive) ಮೂಲಕ ಹಂಚಿದವರಿಗೂ ಸಂಕಷ್ಟ ಎದುರಾಗಿದೆ. 8 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಬೆಂಗಳೂರಿನ (Bengaluru) 42ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ಇಶಾನ್, ತಿಲಕ್ ಶೈನ್; ಜಿಂಬಾಬ್ವೆ ವಿರುದ್ಧ 90 ರನ್‌ಗಳ ಗೆಲುವು – ಶ್ರೇಯಸ್ ಪಡೆಗೆ ಮೊದಲ ಸರಣಿ ಗೆಲುವು
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ಎ, ಐಪಿಸಿ ಸೆಕ್ಷನ್ 509 ಅಡಿ ಕೇಸ್ ದಾಖಲಿಸಿ ಸಮನ್ಸ್ ಜಾರಿಗೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಪೆನ್‌ಡ್ರೈವ್ ಮೂಲಕ ಅಶ್ಲೀಲ ಫೋಟೋ, ವಿಡಿಯೋ ಹಂಚಿಕೆ ಪ್ರಕರಣರದ ಎ2 ನವೀನ್ ಗೌಡ, ಎ3 ಲಿಖಿತ್ ಹೆಚ್.ಪಿ., ಎ4 ನಿಶಾಂತ್ ಎಂ.ಜೆ, ಎ5 ಕಿರಣ್ ಎಸ್.ಕೆ, ಎ6 ಶರತ್ ಎಂ.ಜಿ., ಎ7 ತೇಜಸ್ ಡಿ.ಎನ್. ಎ8 ಗಗನ್ ಕುಮಾರ್. ಎ9 ರೇವಂತ್.ಹೆಚ್‌ಗೆ ಸಮನ್ಸ್ ಜಾರಿ ಮಾಡಲಾಗಿದೆ.ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿ ನೇಮಕ
