ಶಿವಮೊಗ್ಗ: ಅಡಿಕೆ (Areca) ಬೇಯಿಸುವಾಗ ಹಂಡೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಡ್ಡಿನಕೊಪ್ಪದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ನಗರದ ಜೇನು ಕುಮಾರ್ ಮೃತ ದುರ್ದೈವಿ. ಸೆ.8 ರಂದು ಜೇನು ಕುಮಾರ್ ತಮ್ಮ ಮನೆ ಬಳಿ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಬಳಿಕ ಅಡಿಕೆ ಹೊರತೆಗೆದು, ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ ಕಟ್ಟೆ ಏರಿದ್ದರು. ಈ ವೇಳೆ ಕಾಲು ಜಾರಿ ಹಂಡೆಯೊಳಗೆ ಬಿದ್ದಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ, ಆ್ಯಸಿಡ್ ದಾಳಿ
ಕೂಡಲೇ ಪಕ್ಕದಲ್ಲಿಯೇ ಇದ್ದ ಇತರ ಮೂವರು ಅವರನ್ನು ಮೇಲಕ್ಕೆತ್ತಿದ್ದರು. ಬಳಿಕ ಜೇನು ಕುಮಾರ್ ಶೆಡ್‌ನಿಂದ ಹೊರಗೆ ಓಡಿ, ಶರ್ಟ್ ತೆಗೆದು ಪುನಃ ಶೆಡ್ ಒಳಗೆ ಬಂದಿದ್ದರು. ಅಷ್ಟು ಹೊತ್ತಿಗೆ ಅವರ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು.
ತಕ್ಷಣ ಅವರನ್ನು ನಗರದ (Shivamogga) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ವೈದ್ಯರ ಸಲಹೆಯಂತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಹಂಡೆಯೊಳಗೆ ಅವರು ಬಿದ್ದ ದೃಶ್ಯ ಶೆಡ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಯುವತಿಯ ಕಿಡ್ನ್ಯಾಪ್‌ಗೆ ಯತ್ನ – 35 ಕಾರು, 100ಕ್ಕೂ ಹೆಚ್ಚು ಬೈಕ್‌ಗೆ ಡಿಕ್ಕಿ, 6 ಮಂದಿಗೆ ಗಂಭೀರ ಗಾಯ

