ವಾಷಿಂಗ್ಟನ್: ಮದುವೆಯಾದ ಕೇವಲ 17 ದಿನಗಳ ಬಳಿಕ ಹೈದರಾಬಾದ್ (Hyderabad) ಮೂಲದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ.
28 ವರ್ಷದ ಮೊಹಮ್ಮದ್ ಜಾಬರ್ ಹುಸೇನ್ ಅವರು ಮ್ಯಾಸಚೂಸೆಟ್ಸ್ನ ಲೋವೆಲ್ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜಾಬರ್ ಹುಸೇನ್ ಅಮೆರಿಕದಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 28ರಂದು ಟೆಕ್ಸಾಸ್ನಲ್ಲಿ ವಿವಾಹವಾಗಿದ್ದರು.
ಜಾಬರ್ ಸೆಪ್ಟೆಂಬರ್ 14ರಂದು ಕೊನೆಯ ಬಾರಿ ಕುಟುಂಬದವರೊಂದಿಗೆ ಮಾತನಾಡಿದ್ದರು. ಇದಾದ ಸುಮಾರು ಎಂಟು ಗಂಟೆಗಳ ಬಳಿಕ, ಅವರ ರೂಮ್ಮೇಟ್ ಕುಟುಂಬಕ್ಕೆ ಕರೆ ಮಾಡಿ ಜಾಬರ್ ಮಲಗಿದ್ದಾಗಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿರುವ ಕುಟುಂಬ
ಘಟನೆಯ ಬಳಿಕ ಜಾಬರ್ ಅವರಿಗೆ ತಕ್ಷಣ ವೈದ್ಯಕೀಯ ನೆರವು ದೊರೆತಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೆಂಡತಿಯ ಸುಳಿವು ಸಿಗದೇ ಇರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ಸಾವಿನ ನಿಖರ ಕಾರಣ ಮತ್ತು ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ತಿಳಿಯಲು ಕುಟುಂಬವು ಮರಣೋತ್ತರ ಪರೀಕ್ಷೆ ಹಾಗೂ ವೈದ್ಯಕೀಯ ವರದಿಗಾಗಿ ಕಾಯುತ್ತಿದೆ. ಇದನ್ನೂ ಓದಿ: ಅಡಿಕೆ ಬೇಯಿಸುವಾಗ ಹಂಡೆಯೊಳಗೆ ಬಿದ್ದು ವ್ಯಕ್ತಿ ಸಾವು
2021ರಲ್ಲಿ ಅಮೆರಿಕಕ್ಕೆ ತೆರಳಿದ್ದ ಜಾಬರ್
ಜಾಬರ್ 2021ರಲ್ಲಿ ಕನೆಕ್ಟಿಕಟ್ನ ನ್ಯೂ ಹೆವನ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. 2023ರಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಎಸ್ಟಿಮೇಟರ್ ಎಂಬ ಸಂಸ್ಥೆಯಲ್ಲಿ ಇಂಟರ್ನ್ ಆಗಿ ಕೆಲಸಕ್ಕೆ ಸೇರಿದ್ದರು ಎಂದು ಅವರ ಲಿಂಕ್ಡ್ಇನ್ ಪ್ರೊಫೈಲ್ನಿಂದ ತಿಳಿದುಬಂದಿದೆ.
ಜಾಬರ್ ಮೂರು ವರ್ಷಗಳ ಕಾಲ ಗ್ರೀನ್ ಇಂಟರ್ನ್ಯಾಷನಲ್ ಅಫಿಲಿಯೇಟ್ಸ್ ಇಂಕ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಈ ವರ್ಷದ ಜೂನ್ನಲ್ಲಿ ಮತ್ತೆ ಕಂಪನಿ ಬದಲಾಯಿಸಿದ್ದರು. ಬಳಿಕ ಮ್ಯಾಸಚೂಸೆಟ್ಸ್ನಲ್ಲಿರುವ ಲೋಚ್ನರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಬೀದಿ ನಾಯಿಗಳ ಕಾಟ – ಅಧಿಕಾರಿಯ ಟೇಬಲ್ ಮೇಲೆ ನಾಯಿ ಮರಿಗಳನ್ನು ಬಿಟ್ಟು ಪ್ರತಿಭಟನೆ

