ಬೆಂಗಳೂರು: ಯಲಹಂಕದಲ್ಲಿ (Yelahanka) ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಬಿಎಂಟಿಸಿ ಬಸ್ (BMTC Bus) ತಡೆದು, ರಸ್ತೆ ಮೇಲೆ ಮಲಗಿ ಹೈಡ್ರಾಮಾ ಮಾಡಿದ್ದಾನೆ. ಇದರಿಂದ ಟ್ರಾಫಿಕ್ ಜಾಮ್ (Traffic Jam) ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ.
ಯಲಹಂಕ ನ್ಯೂಟೌನ್ ಬಸ್ ನಿಲ್ದಾಣದ ಬಳಿ ಕುಡುಕ ಬಿಎಂಟಿಸಿ ಬಸ್ಗಳನ್ನು ತಡೆದಿದ್ದಾನೆ. ಬಳಿಕ ರಸ್ತೆ ಮಧ್ಯೆ ಮಲಗಿ, ಕೂತು ಹೈಡ್ರಾಮಾ ಮಾಡಿದ್ದಾನೆ. ಇದರಿಂದ ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕುಡುಕನ ಕಿರಿಕ್ಗೆ ಪ್ರಯಾಣಿಕರು, ವಾಹನ ಸವಾರರು ಕೆಲಕಾಲ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ, ಆ್ಯಸಿಡ್ ದಾಳಿ
ಬಳಿಕ ಬಸ್ನಲ್ಲಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿ ಆತನನ್ನು ರಸ್ತೆಯಿಂದ ಕಳಿಸಿದ್ದಾರೆ. ಈ ಘಟನೆ ಸೆ.16 ರಂದು ನಡೆದಿದ್ದು, ಕುಡುಕನ ಅವಾಂತರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಯುವತಿಯ ಕಿಡ್ನ್ಯಾಪ್ಗೆ ಯತ್ನ – 35 ಕಾರು, 100ಕ್ಕೂ ಹೆಚ್ಚು ಬೈಕ್ಗೆ ಡಿಕ್ಕಿ, 6 ಮಂದಿಗೆ ಗಂಭೀರ ಗಾಯ

