ಬೆಂಗಳೂರು: ಉಮರ್ ಖಾಲಿದ್ ರಾಷ್ಟ್ರೀಯವಾದಿ ಎಂಬ ತಮ್ಮ ಹೇಳಿಕೆಯನ್ನ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (B K Hariprasad) ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ನಾಯಕರ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದ ಚೌಕಟ್ಟಿನಲ್ಲಿ, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಇರೋ ವಿಚಾರ. ಯಾರು ಸಂವಿಧಾನದ ವಿರೋಧಿಗಳು, ಯಾರು ತ್ರಿವರ್ಣ ಧ್ವಜದ ವಿರೋಧಿಗಳು, ರಾಷ್ಟ್ರಗೀತೆ ವಿರೋಧಿಗಳು, ಯಾರು ಖಾಕಿ ಚಡ್ಡಿ, ಕರಿ ಟೋಪಿ ಹಾಕಿ ದೊಣ್ಣೆ ಹಿಡಿದುಕೊಂಡು ಶಾಖೆಯಲ್ಲಿ ರಾಷ್ಟ್ರಗೀತೆ ಹಾಡೋದಿಲ್ಲ ಅವರು ದೇಶದ್ರೋಹಿಗಳು ಅಂತ ಪರೋಕ್ಷವಾಗಿ RSS ನವರು ದೇಶದ್ರೋಹಿಗಳು ಎಂದರು.
ನಮ್ಮ ಉಮರ್ ಖಾಲಿದ್ ಎಲ್ಲೂ ಸಂವಿಧಾನ ವಿರೋಧವಾಗಿ ಮಾತಾಡಿಲ್ಲ. ತ್ರಿವರ್ಣ ಧ್ವಜದ ವಿರುದ್ದ ಮಾತಾಡಿಲ್ಲ. 6 ವರ್ಷ ಅನೈತಿಕವಾಗಿ ಜೈಲಿನಲ್ಲಿ ಇದ್ದರು ನ್ಯಾಯಾಲಯದ ವಿರುದ್ದ ಮಾತಾಡಿಲ್ಲ. ನ್ಯಾಯಾಲಯದ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಉಮರ್ ಖಾಲಿದ್ ಗೆ ಬಿಜೆಪಿ ಅವರು ಸರ್ಟಿಫಿಕೇಟ್ ಬೇಕಿಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಜನನ–ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ; ಅಕ್ಟೋಬರ್ 1ರಿಂದ ಜಾರಿ
ಬಿಜೆಪಿಯ ಜೆಪಿ ನಡ್ಡಾ, ಮರಿ ಯಡಿಯೂರಪ್ಪ ಆಗಲಿ ಬಿಜೆಪಿ ಅವರಾಗಲಿ ಇವರು ನ್ಯಾಯಾಧೀಶರು ಅಲ್ಲ. ಬಿಜೆಪಿ ಕಚೇರಿ ನ್ಯಾಯಾಲಯ ಅಲ್ಲ. ಉಮರ್ ಖಾಲಿದ್ ದೇಶದ್ರೋಹಿ ಅಂದರೆ ನ್ಯಾಯಾಲಯ ಹೇಳಬೇಕು.ಇವರ ಯೋಗ್ಯತೆಗೆ ಉಮರ್ ಖಾಲಿದ್ ಮೇಕೆ FIR ಮಾಡೋಕೆ ಆಗಿಲ್ಲ. ಜಾರ್ಜ್ ಶೀಟ್ ಹಾಕಿಲ್ಲ.ಬಿಜೆಪಿ ಅವರಿಗೆ ಯೋಗ್ಯತೆ ಇದ್ದರೆ,ಸಂವಿಧಾನದ ಮೇಲೆ ಗೌರವ ಇದ್ದರೆ ಒಬ್ಬ ನಾಗರೀಕನನ್ನ 6 ವರ್ಷಗಳ ಕಾಲ ಅನೈತಿಕವಾಗಿ ಬಂಧನ ಮಾಡಿರೋದು ನಾವು ಖಂಡಿಸುತ್ತೇವೆ ಅಂತ ಕಿಡಿಕಾರಿದರು.
ಹರಿಪ್ರಸಾದ್ ಹೇಳಿಕೆ ರಾಷ್ಟ್ರಘಾತುಕ ಹೇಳಿಕೆ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ರಾಷ್ಟ್ರದ್ರೋಹಿಗಳೆಲ್ಲಾ ಹಾಗೇ ಹೇಳೋದು ಅಂತ ಸಿಟಿ ರವಿರನ್ನ ರಾಷ್ಟ್ರದ್ರೋಹಿ ಎಂದರು.ಇದನ್ನೂ ಓದಿ: ಬೆಂಗ್ಳೂರಲ್ಲಿ ರಸ್ತೆ ಮೇಲೆ ಮಲಗಿ ಕುಡುಕನ ಹೈಡ್ರಾಮಾ – ಸಾಲುಗಟ್ಟಿ ನಿಂತ ವಾಹನಗಳು

