ಮಂಡ್ಯ: ನಿಯಂತ್ರಣ ತಪ್ಪಿದ ಕಾರೊಂದು ಫ್ಲೈಓವರ್ನಿಂದ ಪಲ್ಟಿ ಹೊಡೆದು ಕೆಳಕ್ಕೆ ಬಿದ್ದ ಘಟನೆ ಮಂಡ್ಯದ ಬಳಿಯ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ (Bengaluru Mysuru Expressway) ನಡೆದಿದೆ.
ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಉಮ್ಮಡಹಳ್ಳಿ ಗೇಟ್ ಸಮೀಪ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಕ್ಸ್ಪ್ರೆಸ್ವೇ ಫ್ಲೈ ಓವರ್ನಿಂದ ಹಾರಿದ ಕಾರು ಅಂಡರ್ ಪಾಸ್ಗೆ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಹಿಳೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರೆಸಾರ್ಟ್ನಲ್ಲಿ ಬಾರ್ಬಿಕ್ಯೂ ಮಾಡುವಾಗ ಯಡವಟ್ಟು – ಹನಿಮೂನ್ಗೆ ಬಂದಿದ್ದ ಮಹಿಳೆಗೆ ಹೊತ್ತಿಕೊಂಡ ಬೆಂಕಿ

ಮೃತ ಮಹಿಳೆಯನ್ನ ಅಂಜನಾ (32) ಎಂದು ಗುರುತಿಸಲಾಗಿದೆ. ಅಂಜನಾ ಬೆಂಗಳೂರು, ಮೈಸೂರಿನಲ್ಲಿ (Mysuru) ಸ್ವಂತ ಸಾಫ್ಟ್ವೇರ್ ಕಂಪನಿ ಹೊಂದಿದ್ದ ಹರೀಶ್ ಎಂಬವರ ಪತ್ನಿಯಾಗಿದ್ದು, ಸ್ನೇಹಿತ ನಿತಿನ್ ಜೊತೆಗೆ ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಗಮನಿಸಿ, ಮಕ್ಕಳ ಪಾಸ್ಪೋರ್ಟ್ ಅವಧಿ ಬದಲಾವಣೆ| ಅರ್ಜಿ ಶುಲ್ಕ ಪರಿಷ್ಕರಣೆ – ಏಷ್ಟು ಏರಿಕೆ?

ದುರಂತದಲ್ಲಿ ಆಗಿದ್ದೇನು?
ಅಂಜನಾ ಪತಿ ಹರೀಶ್ ಜೊತೆಗೆ ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ನೇಹಿತ ಹರೀಶ್ ಕೂಡ ಕಾರಿನಲ್ಲಿದ್ದರು. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅಂಜನಾ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿಯಾದ ಪರಿಣಾಮ ಅಂಡರ್ಪಾಸ್ಗೆ ಬಿದ್ದಿದೆ. ಕಾರು ಅಂಡರ್ಪಾಸ್ಗೆ ಬೀಳುವಾಗ ಕಾರಿನ ಕಿಟಕಿ ಓಪನ್ ಆಗಿದೆ, ಇದರಿಂದ ಅಂಜನಾ ಕೆಳಗೆ ಬಿದ್ದು, ತಲೆ ರಸ್ತೆಗೆ ರಪ್ಪನೆ ಬಡಿದಿದೆ.
ತೀವ್ರ ರಕ್ತಸ್ರಾವವಾದ ಪರಿಣಾಮ ಅಂಜನಾರನ್ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು, ಆದ್ರೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಆಕೆ ಸಾವನ್ನಪ್ಪಿದ್ದಾರೆ.

