– ಆಸಿಯಾ ಸುಮ್ನಿರ್ಬೇಕು ಅಂದ್ರೆ… ಸುಮ್ನಿರ್ಲೇಬೇಕು!
– ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಜಗಳಕ್ಕೆ ಸಾಕ್ಷಿಯಾದ ಸ್ಪರ್ಧಿಗಳು
ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಸೌಂದರ್ಯ ಶೆಟ್ಟಿ ಹಾಗೂ ಮಂಜು ನಡುವಿನ ಜಗಳದ ಕಾವು ತಣ್ಣಗಾಗುವ ಮುನ್ನವೇ ಮತ್ತೊಂದು ಕಿತ್ತಾಟ ಸದ್ದು ಮಾಡಿದೆ. ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡುವಂತೆ ಕೋ-ಪೈಲಟ್ ಮನವೊಲಿಸುವ ಟಾಸ್ಕ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದ್ದು, ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ.
ಆಸಿಯಾ ಸುಮ್ನಿರ್ಬೇಕು ಅಂದ್ರೆ… ಸುಮ್ನಿರ್ಲೇಬೇಕು!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/GOAe6fKOCG
— Colors Kannada (@ColorsKannada) September 18, 2026
ಟಾಸ್ಕ್ ಹಿನ್ನೆಲೆ ಕಿರಣ್ ಶಾಸ್ತ್ರಿ ವಿರುದ್ಧ ಆಸಿಯಾ ಫಿರ್ದೋಸ್ (Asiya Firdose) ಅಸಮಾಧಾನ ಹೊರಹಾಕಿದ್ದಾರೆ. ʻನೀವೇ ರೂಲ್ಸ್ ಫಾಲೋ ಮಾಡಿಲ್ಲ ಅಂದ್ಮೇಲೆ, ನಿಮಗೆ ಯಾವ ಭರವಸೆ ಮೇಲೆ ನಾನು ಕೊಡಲಿ?ʼ ಎಂದು ಪ್ರಶ್ನಿಸುವ ಮೂಲಕ ಕಿರಣ್ ಮೇಲೆ ತಮ್ಮ ಸಿಟ್ಟನ್ನ ಹೊರಹಾಕಿದ್ದಾರೆ.

ಇದೇ ವೇಳೆ ಜಗ್ಗಮಮ್ಮಿ, ʻನಾನೂ ಕೂಡ ಕ್ಯಾಪ್ಟನ್ ಆಗಿ ನೋಡಬೇಕುʼ ಎಂದು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಆಸಿಯಾ, ಧನುಷ್ ಜೊತೆ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಿರಣ್ ಶಾಸ್ತ್ರಿ, ʻನನ್ನನ್ನ ಮೈಂಡ್ಗೇಮ್ನಲ್ಲಿ ಸೋಲಿಸೋಕೆ ಸಾಧ್ಯವೇ ಇಲ್ಲʼ ಎಂದು ಹೇಳಿದ್ದಾರೆ.

ಕಿರಣ್ ಮಾತಿಗೆ ಯಶಸ್ ಕೃಷ್ಣ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ʻನೀನು ಬಂದಾಗ ಯಾರಾದ್ರೂ ಬಂದ್ರೇನೋʼ ಎಂದು ಟಾಂಗ್ ನೀಡಿದ್ದಾರೆ. ಬಳಿಕ ಮಾತಿನ ಚಕಮಕಿ ಮತ್ತಷ್ಟು ತೀವ್ರವಾಗಿದ್ದು, ಕಿರಣ್ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಕೆರಳಿದ ಆಸಿಯಾ ಫಿರ್ದೋಸ್, ʻನಿನ್ನ ಹತ್ರ ಮಾತಾಡ್ತಾ ಇಲ್ಲ, ಸುಮ್ಮನಿರಬೇಕುʼ ಎಂದು ಕಿರಣ್ಗೆ ಖಡಕ್ ಆಗಿ ಹೇಳಿದ್ದಾರೆ. ಆದರೆ ಇದಕ್ಕೂ ಕಿರಣ್ ಟಾಂಗ್ ನೀಡಿದ್ದು, ʻದೃಢವಾಗಿ ನಿಲ್ಲಬೇಕು ಕ್ಯಾಪ್ಟನ್ʼ ಎಂದಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ಆಸಿಯಾ, ʻಹೇ, ಮುಚ್ಚೋ ಬಾಯಿ… ಎಲ್ಲದಕ್ಕೂ ನಾನು, ನಾನು, ನಾನು… ಸುಮ್ಮನಿರಬೇಕುʼ ಎಂದು ಕೈ ತೋರಿಸುತ್ತಾ ಕಿರಣ್ ಶಾಸ್ತ್ರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಸಿಯಾ ಅವರ ಈ ಆರ್ಭಟಕ್ಕೆ ಕಿರಣ್ ಮಾತ್ರವಲ್ಲದೆ ಸುತ್ತಮುತ್ತ ಇದ್ದ ಇತರ ಸ್ಪರ್ಧಿಗಳೂ ಕೆಲಕಾಲ ಮೌನವಾಗಿರುವ ದೃಶ್ಯ ಕಂಡುಬಂದಿದೆ. ಒಟ್ಟಿನಲ್ಲಿ ಇಂದಿನ ಬಿಗ್ಬಾಸ್ ಎಪಿಸೋಡ್ನಲ್ಲಿ ಟಾಸ್ಕ್ಗಿಂತಲೂ ಸ್ಪರ್ಧಿಗಳ ನಡುವಿನ ಈ ಮಾತಿನ ಚಕಮಕಿ ಹೆಚ್ಚಿನ ಕುತೂಹಲ ಮೂಡಿಸಿದೆ.

