`ಝೀಬ್ರಾ’ಗಾಗಿ ಸತ್ಯದೇವ್‌ಗೆ ಸಾಥ್ ಕೊಟ್ಟ ಧನಂಜಯ್

ಸ್ಯಾಂಡಲ್‌ವುಡ್ (Sandalwood) ನಟ ರಾಕ್ಷಸ ಧನಂಜಯ್ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳುನಲ್ಲಿಯೂ ಬೇಡಿಕೆ ಕ್ರಿಯೆಟ್ ಮಾಡಿಕೊಂಡಿದ್ದಾರೆ. ಕನ್ನಡದ ನಟನೊಬ್ಬ ಪಕ್ಕದ ರಾಜ್ಯದಲ್ಲೂ ಮಿಂಚ್ತಿದ್ದಾರೆ. ಸದ್ಯ `ಝೀಬ್ರಾ’ಗಾಗಿ (Zebra) ತೆಲುಗು ನಟ ಸತ್ಯದೇವ್ (Sathyadev) ಜೊತೆ ಡಾಲಿ (Dhananjay) ಕೈಜೋಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್, ಕೀರ್ತಿ ಸುರೇಶ್ ಜೊತೆ 2ನೇ ಮದುವೆ?
ಕನ್ನಡದ ಡಾಲಿ ಪರಭಾಷೆಗಳಲ್ಲೂ ಛಾಪೂ ಮೂಡಿಸಿದ್ದಾರೆ. ಪುಷ್ಪ ಚಿತ್ರದ ನಂತರ ಡಾಲಿ ಖದರ್ ಬೇರೆಯದ್ದೇ ಲೆವೆಲ್‌ಗೆ ಹೋಗಿದೆ. ಹೀಗಿರುವಾಗ `ಹೊಯ್ಸಳ’ (Hoysala Film) ಚಿತ್ರದ ನಂತರ ಇದೀಗ ತೆಲುಗಿನ ಹೊಸ ಸಿನಿಮಾಗೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
`ಝೀಬ್ರಾ’ (Zebra) ಎಂಬ ಮಾಸ್ ಎಂಟರ್‌ಟೇನರ್ ಚಿತ್ರಕ್ಕೆ ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಈಗಾಗಲೇ 50 ದಿನದ ಶೂಟಿಂಗ್ ಆಗಿದೆ. ಇನ್ನೂ ಉಳಿದ ಚಿತ್ರೀಕರಣವನ್ನು ಕೋಲ್ಕತ್ತಾ, ಮುಂಬೈನಲ್ಲಿ ಶೂಟಿಂಗ್ ಮಾಡಲು ಸಿನಿಮಾ ತಂಡ ಪ್ಲ್ಯಾನ್ ಮಾಡಿದೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.
View this post on Instagram
ಇನ್ನೂ ಝೀಬ್ರಾ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಇನ್ನೂ ಇದೇ ಮೊದಲ ಬಾರಿಗೆ ಸತ್ಯದೇವ್ ಮತ್ತು ಡಾಲಿ ಒಟ್ಟಿಗೆ ನಟಿಸಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k