Bengaluru CityDistrictsKarnatakaLatestLeading NewsMain Post

ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿ ಅರೆಸ್ಟ್

ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋಗಳನ್ನು ಚಿತ್ರೀಕರಣ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶುಭಂ ಎಂ ಆಜಾದ್ ಎಂದು ಗುರುತಿಸಲಾಗಿದೆ. ಈತ ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ.

ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ ಕೃತ್ಯ ಎಸಗುತ್ತಿದ್ದ. ಹೀಗೆ 1,200 ಕ್ಕೂ ಅಧಿಕ ವೀಡಿಯೋ (Girls Video) ಹಾಗೂ ಫೋಟೋ (Photo) ಚಿತ್ರೀಕರಿಸಿದ್ದಾನೆ. ಸ್ನೇಹಿತೆಯರು ಜೊತೆಯಲ್ಲಿದ್ದಾಗಲೂ ಅವರ ಅರೆನಗ್ನ ಫೋಟೋ ತೆಗೆದಿದ್ದ.

ಇತ್ತೀಚೆಗೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಲು ಹೋದಾಗ ಯುವತಿಯರು ಚೀರಾಡಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದ. ಬಳಿಕ ಸಿಸಿಟಿವಿ (CCTV) ಪರಿಶೀಲನೆ ವೇಳೆ ಶುಭಂ ಕೃತ್ಯ ಬೆಳಕಿಗೆ ಬಂದಿದೆ. ಈ ಹಿಂದೆಯೂ ಇದೇ ರೀತಿ ಮಾಡಿ ಕ್ಷಮೆಯಾಚನೆ ಬರೆದುಕೊಟ್ಟಿದ್ದ. ಇದನ್ನೂ ಓದಿ: ಅತ್ಯಾಚಾರಿ, ಕೊಲೆಗಡುಕರ ತಂದೆ ತಾಯಿಗಳನ್ನು ಒಂದೆರಡು ವರ್ಷ ಶಿಕ್ಷಿಸಿ: ಬಿಜೆಪಿ MLA ಆಕಾಶ್

ಇದೀಗ ಮತ್ತೆ ತನ್ನ ಚಾಳಿ ಮುಂದುವರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನ ಮೊಬೈಲ್ ನಲ್ಲಿ 1,200 ಕ್ಕೂ ಅಧಿಕ ವೀಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ. ಆರೋಪಿ ಬಳಿ ಮತ್ತೊಂದು ಮೊಬೈಲ್ ಇದ್ದು ಅದರಲ್ಲಿ ಮತ್ತಷ್ಟು ವೀಡಿಯೋಗಳು ಪತ್ತೆಯಾಗುವ ಸಾಧ್ಯತೆ ಇದೆ.

ಸದ್ಯ ಗಿರಿನಗರ ಪೊಲೀಸ್ ಠಾಣೆ (Girinagar Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚರಣೆ ನಡೆಸುತ್ತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button