ಸಂವತ್ಸರ: 1948, ಪರಾಭವ
ಋತು : ಗ್ರೀಷ್ಮ
ಅಯನ : ಉತ್ತರಾಯಣ
ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ
ತಿಥಿ : ಸಪ್ತಮಿ, ನಕ್ಷತ್ರ : ಧನಿಷ್ಠಾ
ರಾಹುಕಾಲ: 05:07 – 06:44
ಗುಳಿಕಕಾಲ: 03:31 – 05:07
ಯಮಗಂಡಕಾಲ: 12:18 – 01:54
ಮೇಷ: ಕಠಿಣ ಪರಿಶ್ರಮಕ್ಕೆ ಪ್ರಶಂಸೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಹಳೆಯ ಒಡನಾಡಿಗಳ ಪುನರ್ಮಿಲನ.
ವೃಷಭ: ಟೈಲರಿಂಗ್ ವೃತ್ತಿಯವರಿಗೆ ಹೆಚ್ಚಿನ ಅನುಕೂಲ. ಬಾಕಿಯಿರುವ ಕೆಲಸ ಪೂರ್ಣಗೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ.
ಮಿಥುನ: ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ.
ಕಟಕ: ಬಂಧು ಬಾಂಧವರ ಸಹಕಾರ. ಹೊಸ ವಾಹನ ಖರೀದಿ. ಹೂಡಿಕೆಯಲ್ಲಿ ಲಾಭ.
ಸಿಂಹ: ಅವಿವಾಹಿತರಿಗೆ ವಿವಾಹ ಯೋಗ. ಪರರ ಮಾತಿಗೆ ಕಿವಿ ಕೊಡಬೇಡಿ. ಉದ್ಯೋಗಸ್ಥರಿಗೆ ಅವಕಾಶಗಳು ಗೋಚರ.
ಕನ್ಯಾ: ಸಂಬಂಧಗಳಲ್ಲಿ ತಾಳ್ಮೆ ಅಗತ್ಯ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಕುಟುಂಬದಲ್ಲಿ ಹೆಚ್ಚಿದ ಜವಾಬ್ದಾರಿ.
ತುಲಾ: ಆರೋಗ್ಯದ ಕಾಳಜಿ ವಹಿಸಿ. ಯಂತ್ರೋಪಕರಣ ಬಿಡಿ ಭಾಗಗಳ ವ್ಯಾಪಾರಸ್ಥರಿಗೆ ಬೇಡಿಕೆ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಪ್ರೀತಿ ವಿಚಾರದಲ್ಲಿ ತಪ್ಪು ನಿರ್ಧಾರ.
ಧನಸ್ಸು: ಆಸ್ತಿ ಖರೀದಿ ಪ್ರಯತ್ನಕ್ಕೆ ಮುನ್ನಡೆ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಅಲಂಕಾರಿಕ ವಸ್ತುಗಳಿಂದ ಲಾಭ.
ಮಕರ: ಸ್ವಂತ ಉದ್ಯಮದಲ್ಲಿ ಅಭಿವೃದ್ಧಿ. ಧ್ಯಾನದಿಂದ ಆರೋಗ್ಯ ವೃದ್ಧಿ. ಗುರುಹಿರಿಯರಿಂದ ಮಾರ್ಗದರ್ಶನ.
ಕುಂಭ: ಉದ್ಯೋಗ, ವ್ಯವಹಾರಗಳಲ್ಲಿ ಸಂತೃಪ್ತಿ. ಪಿತ್ರಾರ್ಜಿತ ಆಸ್ತಿಯಿಂದ ಲಾಭ. ಹಳೇ ಸ್ನೇಹಿತರ ಪುನರ್ಮಿಲನ.
ಮೀನ: ಉದ್ಯೋಗದಲ್ಲಿ ನಿರಾಸಕ್ತಿ. ನಿರೀಕ್ಷಿಸಿದ ಕಾರ್ಯ ಸಿದ್ಧಿ. ಮನೆ ಮಂದಿಯವರೊಂದಿಗೆ ದೇವತಾರಾಧನೆ.
