ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ. ಮುಂಗಾರು ಪ್ರವೇಶಿಸಿದ ಮೊದಲ ದಿನವೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ.
ಬೆಳಗಾವಿಯ ಅಥಣಿ ಪಟ್ಟಣದ ಹಲ್ಯಾಲ ರಸ್ತೆಯಲ್ಲಿರುವ ಎರಡಂತಸ್ತಿನ ಕಟ್ಟಡ ನೆಲಕ್ಕುರುಳಿದೆ. ಕಟ್ಟಡ ಬೀಳುವ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಡವಿಬಾವಿ ತಾಂಡದ ಸರ್ಕಾರಿ ಶಾಲೆ ಜಲಾವೃತವಾಗಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಮಳೆರಾಯನ ಅಬ್ಬರ – ಪೊಲೀಸ್ ಠಾಣೆ, ಮನೆಗಳಿಗೆ ನುಗ್ಗಿದ ನೀರು
ಚಿಕ್ಕಮಗಳೂರಿನ ಎನ್.ಆರ್ ಪುರ ತಾಲೂಕು ಆಸ್ಪತ್ರೆ ಸೋರುತ್ತಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕ ಕರಾವಳಿ ದಕ್ಷಿಣ ಕನ್ನಡದಲ್ಲಿ ಮಳೆ ಬಿರುಸುಗೊಂಡಿದ್ದು, ಹಲವು ಕಡೆ ಹಾನಿಯಾಗಿದೆ.
ಮೂಡುಬಿದಿರೆಯ ಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಒಂದು ಬದಿ ಕೊಚ್ಚಿಹೋಗಿದೆ. ಈ ಮಧ್ಯೆ, ಮುಂಗಾರು ಪ್ರವೇಶ ಹಿನ್ನೆಲೆ ಬೀದರ್ ಜಿಲ್ಲೆಯ ರೈತರು ಬಿತ್ತನೆಗೆ ಸಕಲ ಸಿದ್ಧತೆ ನಡೆಸಿದ್ದು, ಸೊಸೈಟಿಗಳಲ್ಲಿ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ.
ಕೇರಳಂ ರಾಜ್ಯದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ನಾಲ್ಕು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು, ಕಾರಸಗೋಡು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಮುಂಗಾರು ಎಂಟ್ರಿ – ಆನೇಕಲ್ ಸುತ್ತಮುತ್ತ ಜೋರು ಮಳೆ

