ಲಾರ್ಡ್ಸ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ʻಲಾರ್ಡ್ʼನಂತೆ ಶತಕ ಸಿಡಿಸಿ ಅಬ್ಬರಿಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.
TEARS FROM WIFE, STATEMENT BY ROHIT, ITS EMOTIONAL AT LORD’S 🥹
– First Indian ever to score a Hundred in Lord’s in ODI history. pic.twitter.com/eKmXOXYDBU
— Johns. (@CricCrazyJohns) July 19, 2026
ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ, ರೋಹಿತ್ ಶರ್ಮಾ ಅವರು ಲಾರ್ಡ್ಸ್ ಮೈದಾನದಲ್ಲಿ ಏಕದಿನ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ 388 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕ ಜೋಡಿ ನಿಧಾನ ಗತಿಯ ಬ್ಯಾಟಿಂಗ್ ಶುರು ಮಾಡಿತು. ಬಳಿಕ ಅಬ್ಬರಿಸಲು ಶುರು ಮಾಡಿದ್ರು. ಬಹುದಿನಗಳ ಬಳಿಕ ಲಯಕ್ಕೆ ಮರಳಿದ ಹಿಟ್ ಮ್ಯಾನ್ ರೋಹಿತ್ 84 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಿತ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಒಟ್ಟು 110 ಎಸೆತಗಳನ್ನು ಎದುರಿಸಿದ ರೋಹಿತ್ 5 ಸಿಕ್ಸರ್, 17 ಬೌಂಡರಿ ಸಹಿತ 138 ರನ್ ಚಚ್ಚಿ ಪೆವಿಲಿಯನ್‌ಗೆ ಮರಳಿದ್ರು.

ಈ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಂಡರು. ಜೊತೆಗೆ ಒಂದೇ ವಿದೇಶಿ ನೆಲದಲ್ಲಿ 8 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಕಿರೀಟವನ್ನೂ ಮುಡಿಗೇರಿಸಿಕೊಂಡರು.
ಒಂದೇ ವಿದೇಶದ ವಿರುದ್ಧ ಅತಿಹೆಚ್ಚು ಶತಕ ಸಿಡಿಸಿದ ಟಾಪ್-5 ಬ್ಯಾಟರ್ಸ್
* ರೋಹಿತ್ ಶರ್ಮಾ – 8 – ಇಂಗ್ಲೆಂಡ್ ವಿರುದ್ಧ
* ಕ್ವಿಂಟನ್ ಡಿ-ಕಾಕ್ – 7 – ಭಾರತದ ವಿರುದ್ಧ
* ಎಬಿಡಿ ವಿಲಿಯರ್ಸ್ – 7 – ಭಾರತದ ವಿರುದ್ಧ
* ಸಾಯೀದ್ ಅನ್ವರ್ – 7 – ಯುಎಇ ವಿರುದ್ಧ
* ಸಚಿನ್ ತೆಂಡೂಲ್ಕರ್ -7 – ಯುಎಇ ವಿರುದ್ಧ
