LatestLeading NewsMain PostNational

ಅತ್ಯಾಚಾರಿ, ಕೊಲೆಗಡುಕರ ತಂದೆ ತಾಯಿಗಳನ್ನು ಒಂದೆರಡು ವರ್ಷ ಶಿಕ್ಷಿಸಿ: ಬಿಜೆಪಿ MLA ಆಕಾಶ್

ಭೋಪಾಲ್: ಮೊದಲು ಅತ್ಯಾಚಾರಿಗಳು ಮತ್ತು ಕೊಲೆಗಡುಗರ ತಂದೆ, ತಾಯಿಯನ್ನು ಒಂದೆರಡು ವರ್ಷ ಶಿಕ್ಷೆಗೆ ಗುರಿಪಡಿಸಬೇಕೆಂದು ಮಧ್ಯಪ್ರದೇಶದ ಬಿಜೆಪಿ (BJP) ಎಮ್‍ಎಲ್‍ಎ ಆಕಾಶ್ ವಿಜಯವರ್ಗಿಯಾ (Akash Vijayvargiya) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೀಗ ಒಬ್ಬ ಅತ್ಯಾಚಾರಿ ಆರೋಪಿ ಇದ್ದರೆ ನನ್ನ ಅಭಿಪ್ರಾಯದ ಪ್ರಕಾರ ಆರೋಪಿಗೆ ಮಾತ್ರ ಶಿಕ್ಷೆಯಲ್ಲ. ಆತನ ತಂದೆ, ತಾಯಿಗೂ (Parents) ಒಂದೆರಡು ವರ್ಷ ಶಿಕ್ಷೆ ನೀಡಬೇಕು. ಯಾಕೆಂದರೆ ತಮ್ಮ ಮಕ್ಕಳನ್ನು ತಂದೆ, ತಾಯಿ ಸರಿಯಾಗಿ ಬೆಳೆಸದ ತಪ್ಪಿಗೆ ಈ ಶಿಕ್ಷೆ ಅನುಭವಿಸಬೇಕೆಂದಿದ್ದಾರೆ. ಇದನ್ನೂ ಓದಿ: ಶೀಲ ಶಂಕಿಸಿ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ ದಟ್ಟ ಕಾಡಲ್ಲಿ ಹೂತಾಕಿದ ಪತಿ – ತಿಂಗಳ ಹಿಂದೆಯೇ ಪ್ಲಾನ್

ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಮಕ್ಕಳು ಉತ್ತಮ ಕೆಲಸ ಮಾಡಿದಾಗ ಪೋಷಕರನ್ನು ಹೊಗಳುತ್ತಾರೆ. ಅದೇ ರೀತಿ ಮಕ್ಕಳು ಕೆಟ್ಟ ಕೆಲಸ ಮಾಡಿದಾಗ ಅದೇ ಪೋಷಕರು ಆ ಕೆಟ್ಟ ಕೆಲಸಕ್ಕೆ ಕಾರಣಕರ್ತರಾಗಿರುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳನ್ನ ಗುಂಡಿಕ್ಕಿ ಕೊಂದು, ಸೂಟ್‌ಕೇಸ್‌ನಲ್ಲಿ ಬಿಸಾಡಿದ ತಂದೆ

ಪೋಷಕರು ಮಕ್ಕಳನ್ನು ಬೆಳೆಸುವ ರೀತಿಯನ್ನು ಗಮನಿಸಬೇಕು. ಮಕ್ಕಳಿಗೆ ಉತ್ತಮ ವ್ಯಕ್ತಿತ್ವ ಮತ್ತು ಸಂಸ್ಕೃತಿಯನ್ನು ಕಲಿಸುವುದು ಪೋಷಕರ ಪಾತ್ರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಅಕಾಶ್ ಮಾತನಾಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕಾಶ್ ಪರ ಮತ್ತು ವಿರೋಧ ಕಾಮೆಂಟ್‍ಗಳ ಮೂಲಕ ಚರ್ಚೆಯಾಗುತ್ತಿದೆ.

Live Tv

Leave a Reply

Your email address will not be published. Required fields are marked *

Back to top button