ತುಮಕೂರು: ಮುಖ್ಯಮಂತ್ರಿಯಾದ ಬಳಿಕ ಡಿಕೆ ಶಿವಕುಮಾರ್ (D.K.Shivakumar) ಇಂದು ತಮ್ಮ ಆರಾಧ್ಯದೈವ ಅಜ್ಜಯ್ಯ ಅವರ ತಿಪಟೂರಿನ ನೊಣವಿನಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರು. ವೀರ ಗಂಗಾಧರ ಅಜ್ಜಯ್ಯನ ಗದ್ದಿಗೆಗೆ (Gangadhara Ajjayya) ವಿಶೇಷ ಪೂಜೆ ಮಾಡಿ, ಅಷ್ಟೋತ್ತರ ಪಾರಾಯಣ, ಸಂಕಲ್ಪ ನೆರವೇರಿಸಿದರು.
ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಸಿಕೇಂದ್ರ ಶಿವಯೋಗೀಶ್ವರರು ಸಿಎಂಗೆ ಸಾಥ್ ನೀಡಿದರು. ಈ ವೇಳೆ, ಕಾರ್ಯಕರ್ತರು 101 ಈಡುಗಾಯಿ ಒಡೆದರು. ಪೂಜೆ ಬಳಿಕ ಮಾತಾಡಿದ ಸಿಎಂ, 24 ವರ್ಷದಿಂದ ನಾನು ಕಾಡಸಿದ್ದೇಶ್ವರ ಮಠಕ್ಕೆ ಬರುತಿದ್ದೇನೆ. ಮಾರ್ಗದರ್ಶನ ಪಡೆದು ದರ್ಶನವನ್ನೂ ಪಡೆದುಕೊಂಡಿದ್ದೇನೆ. ನನಗೂ ಸೇರಿದಂತೆ ರಾಜ್ಯಕ್ಕೆ ಒಳ್ಳೆದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರು | ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಇಂದು ಡಿಕೆಶಿ ಭೇಟಿ
ಪುಣ್ಯಕ್ಷೇತ್ರ ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಅಜ್ಜಯ್ಯನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ನನ್ನ ಜೀವನದ ಏಳು-ಬೀಳುಗಳಲ್ಲಿ ಸದಾ ದಾರಿದೀಪವಾಗಿ, ನನ್ನ ಅಚಲ ನಂಬಿಕೆಯ ಶಕ್ತಿಯಾಗಿ ನಿಂತಿರುವ ಆರಾಧ್ಯ ದೈವ ಶ್ರೀ ಅಜ್ಜಯ್ಯನವರು.
ಈ ಸಂದರ್ಭದಲ್ಲಿ ನಾಡಿನ ಸಮಸ್ತ ಜನರ ಸುಭೀಕ್ಷೆ ಹಾಗೂ… pic.twitter.com/uqV5dJue2h
— DK Shivakumar (@DKShivakumar) June 6, 2026
ನಾನು ಸಿಎಂ ಆಗಿ ಇಲ್ಲಿಗೆ ಬಂದಿಲ್ಲ. ಮೊದಲು ಭಕ್ತನಾಗಿ ಬಂದು ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದಕ್ಕೂ ಮುನ್ನ ಮಲ್ಲಘಟ್ಟ ಕೆರೆ ಕಾಮಗಾರಿಗೆ ಸಿಎಂ ಚಾಲನೆ ಕೊಟ್ಟಿದ್ದರು. ಈ ಕರೆಗೆ ಐತಿಹಾಸಿಕ ಮತ್ತು ಪವಿತ್ರವಾದ ಸ್ಥಳ. ದೇವರನ್ನು ಇಲ್ಲಿ ಸ್ನಾನ ಮಾಡಿಸಿ ಪೂಜೆ ಮಾಡ್ತಾರೆ. ಇಲ್ಲಿನ ನೀರನ್ನು ನಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದೆ ಎಂದು ಸಿಎಂ ಹೇಳಿದರು. ಯಾವಾಗಲೂ ಕೂಡಾ ಈ ಭಾಗದ ಕೆರೆ ತುಂಬಿ ತುಳುಕಲಿ ಎಂದು ಆಶಿಸಿದರು.
