Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದ ನೆಲ-ಜಲ ವಿಚಾರಗಳಲ್ಲಿ ಅನಂತ್ ಕುಮಾರ್ ಗಟ್ಟಿ ನಿಲುವು ತಳೆದಿದ್ದರು: ಬೊಮ್ಮಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯದ ನೆಲ-ಜಲ ವಿಚಾರಗಳಲ್ಲಿ ಅನಂತ್ ಕುಮಾರ್ ಗಟ್ಟಿ ನಿಲುವು ತಳೆದಿದ್ದರು: ಬೊಮ್ಮಾಯಿ

Bengaluru City

ರಾಜ್ಯದ ನೆಲ-ಜಲ ವಿಚಾರಗಳಲ್ಲಿ ಅನಂತ್ ಕುಮಾರ್ ಗಟ್ಟಿ ನಿಲುವು ತಳೆದಿದ್ದರು: ಬೊಮ್ಮಾಯಿ

Public TV
Last updated: May 6, 2022 6:12 pm
Public TV
Share
3 Min Read
ananth prerana kendra basavaraj bommai 2
SHARE

ಬೆಂಗಳೂರು: ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರು ರಾಜ್ಯದ ನೆಲ ಜಲ ವಿಷಯಗಳಲ್ಲಿ ರಾಜ್ಯ ಹಾಗೂ ಕನ್ನಡ ಜನರ ಪರ ಗಟ್ಟಿ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಬೆಂಗಳೂರಿನ ಜಯನಗರ ಬಡಾವಣೆಯಲ್ಲಿರುವ ಅನಂತ್ ಕುಮಾರ್ ಅವರ ಕಚೇರಿಯಲ್ಲಿ ಅನಂತ ಪ್ರೇರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಮೆಟ್ರೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಜಲ ವಿಷಯದಗಳಲ್ಲಿ ಬಿಗಿ ನಿಲುವಿನಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ಅನಂತ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಕೇಂದ್ರದಿಂದ ಆಗಬೇಕಾದ ಬೆಂಗಳೂರಿನ ಹಾಗೂ ರಾಜ್ಯದ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕಾರ ನೀಡಿದ್ದರು ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಯುವ ನಾಯಕತ್ವ ಬರಲಿದೆ, ಬ್ಯಾಚ್ ವೈಸ್ ಪಕ್ಷಕ್ಕೆ ಸೇರ್ಪಡೆ ಎಂದ ಸಿಎಂ

ananth prerana kendra basavaraj bommai 1

ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದ ಅವರ ಸ್ಥಾನಮಾನಗಳು ನಮ್ಮೊಂದಿಗಿನ ಸ್ನೇಹವನ್ನು ಬದಲಾಯಿಸಿರಲಿಲ್ಲ. ಕೃಷ್ಣಾ ಟ್ರಿಬ್ಯುನಲ್ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಸಮ್ಮತವಾಗಿ ಕರ್ನಾಟಕದ ಪರವಾಗಿ ಹೋರಾಟ ಮಾಡಿ, ಕರ್ನಾಟಕದ ಹಿತ ಕಾಪಾಡಿದ್ದಾರೆ. ಈ ಮೂಲಕ ರಾಜ್ಯದ ಆಪತ್ತನ್ನು ಅವರು ತಪ್ಪಿಸಿದರು ಎಂದು ತಿಳಿಸಿದರು.

ಆತ್ಮೀಯ ಸಂಗಾತಿ:
ನನ್ನ ಸಾರ್ವಜನಿಕ ಹೋರಾಟದ ಅತ್ಯಂತ ಆತ್ಮೀಯ ಸಂಗಾತಿ, ಜನಮೆಚ್ಚಿದ ನಾಯಕರಾದ ಅನಂತ್ ಕುಮಾರ್ ಅವರು ಎಲ್ಲರಿಗೂ ಪ್ರೇರಣೆ. ಕರ್ನಾಟಕ ಎಂದೂ ಅನಂತ್ ಕುಮಾರ್ ಅವರನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಬದುಕಿನಲ್ಲಿ ಅವರು ಅನಂತವಾಗಿದ್ದಾರೆ ಎಂದರು.

ananth prerana kendra basavaraj bommai

ನೈಜ ನಾಯಕ:
ಅನಂತ್ ಕುಮಾರ್ ಒಬ್ಬ ನೈಜ ನಾಯಕ. ಯಾವುದೇ ಸ್ಥಿತಿಯಲ್ಲಿ, ಹಂತದಲ್ಲಿ ನಾಯಕತ್ವವನ್ನು ವಹಿಸುವವರು ನೈಜ ನಾಯಕ ಎನಿಸಿಕೊಳ್ಳುತ್ತಾರೆ. ವಿದ್ಯಾರ್ಥಿ ದೆಸೆಯಿಂದ ವಿದ್ಯಾರ್ಥಿ ಆಂದೋಲನದಲ್ಲಿ, ಮುಂದೆ ಎಬಿವಿಪಿ ಸಂಘಟನೆಗಳಲ್ಲಿ ನಾಯಕತ್ವ ವಹಿಸಿದರು. ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ನಾಯಕತ್ವ ವಹಿಸಿದರು. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ, ಬಲಪಡಿಸುವುದರಲ್ಲಿ ನಾಯಕತ್ವ ವಹಿಸಿದರು. ಹತ್ತು ಜನ ಇದ್ದಾಗಲೂ, ಹತ್ತು ಲಕ್ಷ ಜನ ಇದ್ದಾಗಲೂ ನಾಯಕತ್ವ ವಹಿಸಿದ್ದರು. ಬಹಳ ಅಪರೂಪದ ನಾಯಕತ್ವ ಅವರದ್ದು ಎಂದು ಹೊಗಳಿದರು. ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ನಾಲ್ಕು ದಿನ ಗುಡುಗು ಗಾಳಿ ಸಹಿತ ಮಳೆ: ಹವಾಮಾನ ಇಲಾಖೆ

ananth prerana kendra 4

ಆತ್ಮೀಯ ಒಡನಾಟ:
ಯಾವ ಉದ್ದೇಶಕ್ಕಾಗಿ ಬದುಕು ನಡೆಸಿದರೊ ಅದಕ್ಕಾಗಿ ಅವರು ಹೋರಾಟವನ್ನು ಮಾಡಿದವರು ಅನಂತ್ ಕುಮಾರ್. ಚಿಕ್ಕಂದಿನಿಂದಲೂ ನಮ್ಮಿಬ್ಬರ ಸ್ನೇಹವಿತ್ತು. ಅವರು ನನ್ನ ಸಹಪಾಠಿಯಾಗಿದ್ದರು. ನಮ್ಮ ಮಧ್ಯೆ ಆತ್ಮೀಯ ಒಡನಾಟವಿತ್ತು. ನಮ್ಮ ನಡುವೆ ಯಾರೇ ಕಾಲೇಜಿಗೆ ತಡವಾಗಿ ಹೋದರೂ ಒಬ್ಬರು ಬೆಂಚನ್ನು ಕಾಯ್ದಿರಿಸುತ್ತಿದ್ದೆವು. ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ವಿದ್ಯಾರ್ಥಿ ಕ್ರಿಯಾ ಸಮಿತಿ ರೂಪಿಸಿ ಅನಂತ್ ಕುಮಾರ್ ಅವರನ್ನು ಕಾರ್ಯದರ್ಶಿಗಳನ್ನಾಗಿ ಮಾಡಿದೆವು. ತುರ್ತು ಪರಿಸ್ಥಿತಿ ವಿರುದ್ಧ ದೊಡ್ಡ ಪ್ರಮಾಣದ ಹೋರಾಟ ಮಾಡುವಂತಿರಲಿಲ್ಲ. ಆದರೆ ಅಂಥ ಸಂದರ್ಭದಲ್ಲಿಯೂ ನೂರಾರು ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಹೋರಾಟ ಮಾಡಲಾಯಿತು. ಲಾಠಿ ಚಾರ್ಜ್ ಆಗಿ ಪೊಲೀಸರು ಅನಂತ್ ಕುಮಾರ್ ಅವರನ್ನು ಬಂಧಿಸಿದರು. ಇದರಿಂದಾಗಿ ಒಂದು ವರ್ಷ ವಿದ್ಯಾರ್ಥಿ ಜೀವನ ವ್ಯರ್ಥವಾಯಿತು. ನಂತರ ಕಾನೂನಿನ ವಿದ್ಯಾರ್ಥಿಯಾದರು. ಆ ಸಂದರ್ಭದಲ್ಲಿ ಅವರಲ್ಲಿ ನಾಯಕತ್ವದ ವಿಚಾರ ಹಾಗೂ ಗುಣಗಳನ್ನು ಕಂಡೆ. ದೂರದೃಷ್ಟಿ ಇದ್ದ ನಾಯಕರು ಅನಂತ್ ಕುಮಾರ್ ಎಂದರು.

ananth prerana kendra 3

ಪ್ರೀತಿಯ ಗಾಳ:
ಗಂಭೀರ ರಾಜಕಾರಣದ ಜೊತೆಗೆ ಹಾಸ್ಯ ಪ್ರಜ್ಞೆಯೂ ಅವರಲ್ಲಿತ್ತು. 30-40 ವರ್ಷ ಒಟ್ಟಿಗಿದ್ದರೂ, ಒಂದು ದಿನವೂ ದುಃಖಿತರಾಗಿ ಅಥವಾ ಚಿಂತಾಕ್ರಾಂತರಾಗಿ ಎಂದೂ ಇರಲಿಲ್ಲ. ಎಂಥಾ ಸ್ಥಿತಿ ಎದುರಾದರೂ ಸ್ಥಿತಪ್ರಜ್ಞತೆಯಿಂದ ಎಲ್ಲವನ್ನೂ ಎದುರಿಸುತ್ತಿದ್ದರು. ನಗುನಗುತ್ತಾ ಇರುತ್ತಿದ್ದರು. ಸಮಸ್ಯೆಗಳನ್ನು ಬಗೆಹರಿಸಲು ಏನು ಮಾಡಬೇಕೋ ಅದನ್ನು ಮಾಡಬೇಕು ಎನ್ನುತ್ತಿದ್ದರು. ಇನ್ನೊಬ್ಬರಿಗೆ ಊಟ ಹಾಕಿಸುವುದರಲ್ಲಿ ಅವರಿಗೆ ಬಹಳ ಆಸಕ್ತಿ. ನನ್ನ ಬಗ್ಗೆ ಬಹಳ ಪ್ರೀತಿ. ಅವರ ಪ್ರೀತಿಯ ಗಾಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಂತ್ರಿ ಸ್ಥಾನ ನಮ್ಮ ಸಂಬಂಧವನ್ನು ಎಂದೂ ಬದಲಾಯಿಸಲಿಲ್ಲ ಎಂದು ಸ್ಮರಿಸಿದರು.

ತೇಜಸ್ವಿನಿ ಅನಂತ್ ಕುಮಾರ್ ಅವರ ಸಾಮಾಜಿಕ ಚಟುವಟಿಕೆಗಳು, ಅದಮ್ಯಚೇತನದ ಕೆಲಸ, ಸಸ್ಯಾಗ್ರಹ ಕಾರ್ಯಕ್ರಮ ಎಲ್ಲವೂ ಮುಂದುವರಿದಿರುವುದು ಶ್ಲಾಘನೀಯ. ಅನಂತ್ ಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಎಲ್ಲಾ ಸಹಕಾರ ನೀಡುತ್ತದೆ ಎಂದರು.

TAGGED:Ananth Kumarananth prerana kendraBasavaraj Bommaibengaluruಅನಂತ ಪ್ರೇರಣಾ ಕೇಂದ್ರಅನಂತ್ ಕುಮಾರ್ಬಸವರಾಜ ಬೊಮ್ಮಾಯಿಬೆಂಗಳೂರು
Share This Article
Facebook Whatsapp Whatsapp Telegram

Cinema news

actor mayur patel car accident
ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ; ನಟ ಮಯೂರ್ ಪಟೇಲ್ ವಿರುದ್ಧ FIR
Cinema Crime Latest Main Post Sandalwood
Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ʻಹೆಣ್ಣು ದೆವ್ವʼ ಅಂತ ಅಪಮಾನ – ರಣವೀರ್ ಸಿಂಗ್‌ ವಿರುದ್ಧ FIR
Bengaluru City Cinema Crime Latest Main Post
Suri Anna 2
ಹರೀಶ್ ರಾಯ್ ನಟಿಸಿದ ಕೊನೆ ಚಿತ್ರ ಸೂರಿ ಅಣ್ಣ ಟ್ರೈಲರ್ ಬಿಡುಗಡೆ
Cinema Latest Main Post Sandalwood
Arijith Singh
ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಅರಿಜಿತ್ ಸಿಂಗ್
Bollywood Cinema Latest Main Post

You Might Also Like

ajit pawar plane crash flight attendant
Latest

ಅಪ್ಪ.. ನಾನು ಅಜಿತ್‌ ಪವಾರ್‌ ಅವ್ರ ವಿಮಾನದಲ್ಲಿ ಹೋಗ್ತಿದ್ದೇನೆ, ನಾಳೆ ಊರಿಗೆ ಬರ್ತೀನಿ: ತಂದೆ ಜೊತೆ ಫ್ಲೈಟ್‌ ಅಟೆಂಡೆಂಟ್‌ ಕೊನೆ ಮಾತು

Public TV
By Public TV
36 minutes ago
Tumakuru Siddaganga Mutt Drinking Water
Districts

ಸಿದ್ದಗಂಗಾ ಮಠಕ್ಕೆ ಎದುರಾಗುತ್ತಾ ನೀರಿನ ಹಾಹಾಕಾರ? – 10 ಸಾವಿರ ಮಕ್ಕಳು, ಭಕ್ತಾದಿಗಳಿಗೆ ನೀರು ನೀಡಲು ಲೆಕ್ಕಾಚಾರ

Public TV
By Public TV
1 hour ago
Colombian Lawmaker
Latest

ಕೊಲಂಬಿಯಾದ ಗಡಿಯಲ್ಲಿ ವಿಮಾನ ಪತನ; ಸಂಸದ ಸೇರಿ 15 ಮಂದಿ ದುರ್ಮರಣ

Public TV
By Public TV
2 hours ago
Bengaluru Poster Removed From BMTC KSRTC
Bengaluru City

ತಂಬಾಕು ಜಾಹೀರಾತುಗಳ ವಿರುದ್ಧ ಕನ್ನಡಿಗರ ಸಮರ – ಸಾರಿಗೆ ಬಸ್‌ಗಳ ಮೇಲೆ ಅಂಟಿಸಿದ್ದ ಪೋಸ್ಟರ್ ತೆರವು

Public TV
By Public TV
2 hours ago
siddaramaiah 1 3
Bengaluru City

Video | ನರೇಗಾ ಬಗ್ಗೆ ಚರ್ಚೆಗಾಗಿ ವಿಧಾನಮಂಡಲ ಅಧಿವೇಶನ 2 ದಿನ ವಿಸ್ತರಣೆ – ಸಿಎಂ

Public TV
By Public TV
10 hours ago
KN RAJANNA
Bengaluru City

ಅಪೆಕ್ಸ್‌ ಬ್ಯಾಂಕ್‌ ಚುನಾವಣಾ ಸಭೆ; ಸಿಎಂ ಎದುರೇ ಕೆ.ಎನ್‌ ರಾಜಣ್ಣ – ಸಚಿವ ಸುಧಾಕರ್ ನಡ್ವೆ ಜಟಾಪಟಿ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?