ಹಾಸನ: ಅಡ್ಡ ಮತದಾನ ಮಾಡಲು 5, 6, 10 ಕೋಟಿ ಕೊಟ್ಟಿದ್ದು, ಇವರೇ ಅಡ್ಡಮತದಾನ ಮಾಡಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು (Cement Manju) ವಿರುದ್ಧ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ (H.M.Vishwanath) ಗಂಭೀರ ಆರೋಪ ಮಾಡಿದ್ದಾರೆ.
ದೊಡ್ಡ ದುಡ್ಡು ಸಿಕ್ತಲ್ಲಾ ಅದು ಸಾಕಾಗಲ್ವಾ.? ಕಾಮಗಾರಿಗಳಲ್ಲಿ 10 ಪರ್ಸೆಂಟ್ ಕಮಿಷನ್ ತಗೊತ್ತಿದ್ದಾರೆ. ಆ ಎಂಜಲು ಕಾಸಿಗೆ ಆಸೆ ಪಡಬೇಕಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೇಲ್ಮನೆ ಅಡ್ಡ ಮತದಾನ ಬಗ್ಗೆ ಹೈಕಮಾಂಡ್‌ಗೆ ವರದಿ – ಅಶೋಕ್, ವಿಜಯೇಂದ್ರಗೆ ಕ್ಲಾಸ್
ಜೆಜೆಎಂ ಕಾಮಗಾರಿಯಲ್ಲಿ ಲೂಟಿ ಹೊಡೆದಿದ್ದಾರೆ. ಪಟ್ಟಣದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಯಲು ಶಾಸಕರಿಗೆ ತಾಕತ್ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಶಾಸಕರ ಆರೋಪಕ್ಕೆ ಶಾಸಕ ಸಿಮೆಂಟ್ ಮಂಜು ತಿರುಗೇಟು ನೀಡಿದ್ದಾರೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯಂತೆ ಮತ ಹಾಕಿದ್ದೇವೆ. ಅಡ್ಡ ಮತದಾನ ಮಾಡಿದವರು ಯಾರು ಅಂಥ ಗೊತ್ತಿದೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ವಿಚಾರ ಗೊತ್ತಿಲ್ಲದೆ ಆರೋಪ ಮಾಡುವವರಿಗೆ ಉತ್ತರ ಕೊಡಲು ಆಗಲ್ಲ ಎಂದಿದ್ದಾರೆ.
ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಅಡ್ಡಮತದಾನ ವಿಚಾರಕ್ಕೆ ತಲೆದಂಡ ಆಗುತ್ತೆ ಅಂತ ನನಗೆ ಅನ್ನಿಸ್ತಿಲ್ಲ. ಕಾಂಗ್ರೆಸ್ ಶಾಸಕರನ್ನು ದನಗಳ ಹಾಗೆ ಕೂಡಿ ಹಾಕಿ ಚುನಾವಣೆಗೆ ಕರ್ಕೊಂಡು ಬಂದಿದ್ದಾರೆ ಎಂದಿದ್ದಾರೆ.
