ಕಲಬುರಗಿ: ಚಿತ್ತಾಪುರದಿಂದ ಸನ್ನತಿಗೆ ಹೊರಟಿದ್ದ ಕೆಕೆಆರ್‌ಟಿಸಿ ಬಸ್‌ಗೆ ಬೊಮ್ಮನಳ್ಳಿ ಕಡೆಯಿಂದ ಚಿತ್ತಾಪುರ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರ ಮೇಲೆ ಬಸ್ ಚಕ್ರಗಳು ಹರಿದ ಸ್ಥಳದಲ್ಲೇ ಯುವಕರು ಮೃತಪಟ್ಟಿದ್ದಾರೆ.
ಬೊಮ್ಮನಹಳ್ಳಿ ಗ್ರಾಮದ ದೇವರಾಜ ತಂ. ಅಯ್ಯಪ್ಪ (19), ಮುಡಬೂಳ ಗ್ರಾಮದ ಲಕ್ಷ್ಮಿಕಾಂತ (20) ಹಾಗೂ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದ ಪ್ರಕಾಶ ತಂ. ಬಸಪ್ಪ (23) ಮೃತ ದುರ್ದೈವಿಗಳಾಗಿದ್ದಾರೆ. ಸದ್ಯ ಪೊಲೀಸರ ಕಲೆಹಾಕಿರುವ ಮಾಹಿತಿ ಪ್ರಕಾರ ಕೆಕೆಆರ್‌ಟಿಸಿ ಬಸ್‌ಗೆ ಮುಂಬದಿಯಿಂದ ಬೈಕ್ ರಭಸವಾಗಿ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಚಿತ್ತಾಪುರ ಸಿಪಿಐ ಎಸ್.ಬಿ ಪಾಟೀಲ್ ಮತ್ತು ಪಿಎಸ್ಐ ಮಂಜುನಾಥರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಚಿತ್ತಾಪುರ ತಾಲ್ಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
