ಸೂಪರ್‌ಸ್ಟಾರ್ ರಜನಿಕಾಂತ್(Rajinikanth) ಅಭಿನಯದ 173ನೇ ಸಿನಿಮಾದ ಟೈಟಲ್(Cinema Title) ಮತ್ತು ಫಸ್ಟ್ ಲುಕ್ ಇಂದು ಅನಾವರಣಗೊಂಡಿದೆ. ಕಮಲ್ ಹಾಸನ್(Kamal Hassan) ನಿರ್ಮಾಣದ ಈ ಬಹುನಿರೀಕ್ಷಿತ ಚಿತ್ರಕ್ಕೆ ‘ಧರ್ಮನ್’ ಎಂದು ಹೆಸರಿಡಲಾಗಿದೆ.
ಚೆನ್ನೈನಲ್ಲಿ(Chennai) ನಡೆದ ಪೂಜಾ ಸಮಾರಂಭದಲ್ಲಿ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್(First Look) ಬಿಡುಗಡೆ ಮಾಡಲಾಯಿತು. ಈ ವೇಳೆ ಚಿತ್ರತಂಡದ ಜೊತೆಗೆ ತಮಿಳು ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.
ಬಿಡುಗಡೆಯಾದ ಫಸ್ಟ್ ಲುಕ್‌ನಲ್ಲಿ ರಜನಿಕಾಂತ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಕ್ಟರ್ ಉಡುಪಿನಲ್ಲಿ, ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು, ರಕ್ತದ ಕಲೆಗಳಿರುವ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಈ ಚಿತ್ರವನ್ನು ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿದೆ. ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ನಿರ್ಮಾಪಕರಾಗಿದ್ದಾರೆ.ಇದನ್ನೂ ಓದಿ: ತಪ್ಪು ತಿಳುವಳಿಕೆಯಿಂದ ವಿಡಿಯೋ ಮಾಡಿದ್ದೇವೆ – ಕ್ಷಮೆ ಕೇಳಿದ ನಿವೇದಿತಾ ಗೌಡ
ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಯರಾದ ಸಿಮ್ರಾನ್ ಹಾಗೂ ರಾಶಿ ಖನ್ನಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ‘ಓ ಮೈ ಕಡವುಲೆ’ ಮತ್ತು ‘ಡ್ರ್ಯಾಗನ್’ ಖ್ಯಾತಿಯ ಅಶ್ವಥ್ ಮಾರಿಮುತ್ತು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ‘ಧರ್ಮನ್’ ಸಿನಿಮಾ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಲೈವಾ ಅವರ ಹೊಸ ಅವತಾರ ನೋಡಿದ ಅಭಿಮಾನಿಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.ಇದನ್ನೂ ಓದಿ: ‘ಎಲ್ಲವನ್ನೂ ಅರ್ಥಪೂರ್ಣವಾಗಿಸುವ ವ್ಯಕ್ತಿ’ – ಸಿಎಂ ವಿಜಯ್‌ಗೆ ತ್ರಿಷಾ ಸ್ಪೆಷಲ್ ಬರ್ತ್‌ಡೇ ವಿಶ್
