ಪಂಚಾಂಗ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ
ವಾರ: ಮಂಗಳವಾರ, ತಿಥಿ: ಪಾಡ್ಯ
ನಕ್ಷತ್ರ: ಪೂರ್ವಾಷಾಡ
ರಾಹುಕಾಲ: 3.39 ರಿಂದ 5.15
ಗುಳಿಕಕಾಲ: 12.27 ರಿಂದ 2.03
ಯಮಗಂಡಕಾಲ: 9.15 ರಿಂದ 10.51
ಮೇಷ: ಈ ದಿನ ಅಧಿಕ ಖರ್ಚು, ಪರರಿಂದ ಮೋಸ, ಅಲ್ಪ ಕಾರ್ಯಸಿದ್ಧಿ, ಶತ್ರು ನಾಶ, ಉದ್ಯೋಗದಲ್ಲಿ ಕಿರಿಕಿರಿ.
ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬ ಸೌಖ್ಯ, ಸುಖ ಭೋಜನ, ಬಂಧುಗಳಿಂದ ನಿಂದನೆ, ವೈ ಮನಸ್ಸು.
ಮಿಥುನ: ಈ ದಿನ ಆಸ್ತಿ ವಿಚಾರದಲ್ಲಿ ಕಲಹ, ಸ್ವಯಂಕೃತ ಅಪರಾಧ, ಮನೋವ್ಯಥೆ, ವಾದ ವಿವಾದ.
ಕಟಕ: ಈ ದಿನ ಮನೆಯಲ್ಲಿ ಸಂತಸ, ಋಣಭಾದೆ, ಕೃಷಿಕರಿಗೆ ಲಾಭ, ಅನಾರೋಗ್ಯ, ದ್ರವ್ಯ ನಷ್ಟ, ಮನಸ್ಸಿಗೆ ನಾನಾ ರೀತಿಯ ಚಿಂತೆ.
ಸಿಂಹ: ಮಕ್ಕಳಿಂದ ನೋವು ದುಃಖ, ಸಾಲಭಾದೆ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕುಟುಂಬದಲ್ಲಿ ಪ್ರೀತಿ, ಆಕಸ್ಮಿಕ ಧನವ್ಯಯ.
ಕನ್ಯಾ: ಆರೋಗ್ಯದ ಕಡೆ ಗಮನ ಕೊಡಿ, ಸಹಾನುಭೂತಿ ತೋರುವಿರಿ, ಹಿರಿಯರಲ್ಲಿ ಭಕ್ತಿ ಗೌರವ.
ತುಲಾ: ಈ ದಿನ ಮಿತ್ರರ ಸಲಹೆ, ವಾಸ ಗೃಹದಲ್ಲಿ ತೊಂದರೆ, ತಾಳ್ಮೆಯಿಂದ ಇರಿ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.
ವೃಶ್ಚಿಕ: ಈ ದಿನ ಯಾರನ್ನು ನಂಬಬೇಡಿ, ಶೀತಸಂಬಂಧ ರೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧನ ನಷ್ಟ, ಮನಸ್ತಾಪ, ಅಕಾಲ ಭೋಜನ.
ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನೇಕ ವಿಷಯಗಳ ಚರ್ಚೆ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.
ಮಕರ: ಈ ದಿನ ದುಡುಕು ಸ್ವಭಾವ, ದುರಾಲೋಚನೆ, ಅಧಿಕ ಖರ್ಚು, ಮಾತಿನ ಮೇಲೆ ನಿಗಾ ಇರಲಿ, ಕೆಲಸದ ಒತ್ತಡ.
ಕುಂಭ: ಅನ್ಯ ಜನರಲ್ಲಿ ವೈಮನಸ್ಸು, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ಉತ್ತಮ ಬುದ್ಧಿ ಶಕ್ತಿ, ಅನಾರೋಗ್ಯ.
ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರು ಭಾದೆ, ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ತೊಂದರೆ.
