– ಕಾವ್ಯ ಅಭಿಮಾನಿಗಳ ಅತಿರೇಕದ ವರ್ತನೆಯಿಂದಲೇ ಅಚಾತುರ್ಯ
– ಆರೋಪಗಳನ್ನು ತಳ್ಳಿಹಾಕಿದ ಆಯೋಜಕರು
ಕಲಬುರಗಿ: ಇಲ್ಲಿನ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ (Bigg Boss) ಸ್ಪರ್ಧಿ ಕಾವ್ಯಾ (Kavya Shaiva) ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯಕ್ರಮದ ವೇಳೆ ಆಯೋಜಕರು ಅಭಿಮಾನಿಗಳ ಮೇಲೆ ಕೈ ಮಾಡಿದ ಹಿನ್ನೆಲೆಯಲ್ಲಿ ಬೇಸರಗೊಂಡ ಕಾವ್ಯಾ, ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ.
ಕಾವ್ಯಾ ಅವರು ನಟಿ ಹಾಗೂ ಕಿರುತರೆ ಕಲಾವಿದೆಯಾಗಿದ್ದು, ಬಿಗ್‌ಬಾಸ್ ಸೀಸನ್ 12ರ (Bigg Boss Season 12) ಬಳಿಕ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅವರನ್ನು ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿಸಲಾಗುತ್ತಿದೆ. ಇತ್ತೀಚೆಗೆ ಅವರು ಭಾಗವಹಿಸಿದ್ದ ಕಲಬುರಗಿಯ ಖಾಸಗಿ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಇದನ್ನೂ ಓದಿ: ಕೇನ್ಸ್ ರೆಡ್‌ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ರಾಯಲ್ ಲುಕ್ – ʻಲುಮಿನಾರಾʼದಲ್ಲಿ ಮಾಜಿ ವಿಶ್ವಸುಂದರಿ ಶೈನ್
ಕಾವ್ಯಾಗೆ ಅವಮಾನ ಆಗಿದ್ದೇಕೆ?
ಕಾರ್ಯಕ್ರಮದ ವೇಳೆ ಕಾವ್ಯಾ ಅಭಿಮಾನಿಗಳು ಸೆಲ್ಫಿ ಕೇಳಲು ಮುಂದಾದಾಗ, ವೇದಿಕೆ ಮೇಲೆಯೇ ಆಯೋಜಕರು ಕೆಲ ಅಭಿಮಾನಿಗಳನ್ನು ತಳ್ಳಿದ್ದಾರೆ. ಅಲ್ಲದೆ, ಕಾವ್ಯಾ ಅವರ ಕೈಯಿಂದ ಮೈಕ್ ಕಸಿದುಕೊಳ್ಳಲಾಗಿದೆ. ಈ ಘಟನೆ ಬಳಿಕ ಅವರ ಅಭಿಮಾನಿಗಳು ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಆರೋಪಗಳನ್ನು ಕಾರ್ಯಕ್ರಮ ಆಯೋಜಕರು ತಳ್ಳಿಹಾಕಿದ್ದಾರೆ. ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗುರು ಬಂಡಿ ಪ್ರತಿಕ್ರಿಯೆ ನೀಡಿ, ಕಾವ್ಯಾ ಅವರಿಗೆ ಯಾವುದೇ ಅವಮಾನ ಆಗಿಲ್ಲ ಎಂದು ಹೇಳಿದ್ದಾರೆ.
ಎರಡು ಗಂಟೆಯ ಕಾರ್ಯಕ್ರಮಕ್ಕಾಗಿ ಕಾವ್ಯಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಕೇವಲ ಐದು ನಿಮಿಷದಲ್ಲೇ ಕಾರ್ಯಕ್ರಮ ಬಿಟ್ಟು ಹೋಗಲು ಮುಂದಾದರು. ಅಭಿಮಾನಿಗಳು ಕೊಟ್ಟ ಫೋಟೋಗಳನ್ನು ಕೂಡ ಅಲ್ಲೇ ಬಿಸಾಡಿ ಹೋಗಿದ್ದಾರೆ. ಅವರಿಗೆ ನೀಡಬೇಕಿದ್ದ ಸಂಪೂರ್ಣ ಹಣವನ್ನು ನಾವು ಕೊಟ್ಟಿದ್ದೇವೆ. ಕಾರ್ಯಕ್ರಮ ಆಯೋಜಕರ ಕಡೆಯಿಂದ ಯಾವ ತಪ್ಪು ಆಗಿಲ್ಲ, ಕಾವ್ಯಾ ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಇಷ್ಟೇಲ್ಲಾ ಆಗಿದೆ ಎಂದು ಗುರು ಬಂಡಿ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಜಯಂ ರವಿ ದಾಂಪತ್ಯದಲ್ಲಿ ಬಿರುಕು – ಪತ್ನಿ ಆರತಿ ರವಿ ಬೆನ್ನಿಗೆ ನಿಂತ್ರಾ ಖುಷ್ಬು ಸುಂದರ್
