ಇತ್ತೀಚೆಗಷ್ಟೇ ಬಾಲಿವುಡ್‌ನ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್(Aamir Khan) ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಮದುವೆಯಾಗಿದ್ದು, ಪತ್ನಿಗೆ ನೀಡಿದ ಅಮೂಲ್ಯ ಉಂಗುರ ಇದೀಗ ಭಾರೀ ವೈರಲ್ ಆಗಿದೆ.
ಆಮಿರ್ ಖಾನ್ ನಿವಾಸದಲ್ಲೇ ನಡೆದ ಸರಳ ಸಮಾರಂಭದಲ್ಲಿ ಆಮಿರ್-ಗೌರಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದು, ಬಳಿಕ ಉಂಗುರ ಬದಲಿಸಿಕೊಂಡಿದ್ದಾರೆ. ಮದುವೆ ಸರಳವಾಗಿದ್ದರೂ, ಆಮಿರ್ ಖಾನ್ ಪತ್ನಿಗೆ ತೊಡಿಸಿದ ಉಂಗುರದ ಬೆಲೆ ಮದುವೆಯ ಸಂಪೂರ್ಣ ಖರ್ಚಿಗಿಂತಲೂ ಹೆಚ್ಚಾಗಿದೆ ಎನ್ನುವ ಮಾಹಿತಿ ಇದೀಗ ಹೊರಬಂದಿದೆ.
ಆಮಿರ್ ಖಾನ್ ತಮ್ಮ ಪತ್ನಿ ಗೌರಿಗಾಗಿ ಅತ್ಯಂತ ಬೆಲೆಬಾಳುವ ಉಂಗುರ ಮಾಡಿಸಿದ್ದರು. ಅಪ್ಪಟ ಮಡಗಾಸ್ಕರ್ ಮಾಣಿಕ್ಯವನ್ನು ಹೊಂದಿರುವ ಈ ಉಂಗುರ ಇದೀಗ ಎಲ್ಲರ ಗಮನ ಸೆಳೆದಿದೆ.
ಉಂಗುರದ ವಿಶೇಷತೆ
ಹಿಂದಿನ ಕಾಲದ ರಾಜಮನೆತನದ ರಾಣಿಯರು ಧರಿಸುವ ಶೈಲಿಯಲ್ಲಿ ಈ ಉಂಗುರವನ್ನು ಡಿಸೈನ್ ಮಾಡಲಾಗಿದೆ. ಈ ಆ್ಯಂಟಿಕ್ ವಿನ್ಯಾಸದ ಉಂಗುರವನ್ನು ಖುದ್ದು ಆಮಿರ್ ಖಾನ್ ಹೇಳಿ ಮಾಡಿಸಿದ್ದಾರಂತೆ. ಶುದ್ಧ ಮಡಗಾಸ್ಕರ್ ಮಾಣಿಕ್ಯವನ್ನು ಪಡೆಯಲು ಮಾತ್ರವೇ ಸುಮಾರು ಮೂರು ತಿಂಗಳು ಸಮಯ ಹಿಡಿದಿದೆ ಎನ್ನಲಾಗಿದೆ.
ಆಮಿರ್ ಖಾನ್ ಪತ್ನಿಯ ಕೈ ಸೇರಿದ ಈ ಶುದ್ಧ ಮಡಗಾಸ್ಕರ್ ಮಾಣಿಕ್ಯದ (Madagascar Ruby) ರೂಬಿ ಹರಳಿನ ಉಂಗುರ ತಯಾರಿಸಲು 256 ಗಂಟೆಗಳ ಸಮಯ ಹಿಡಿದಿದ್ದು, 131 ಕುಶಲಕರ್ಮಿಗಳು ಇದರ ನಿರ್ಮಾಣದಲ್ಲಿ ಕೆಲಸ ಮಾಡಿದ್ದಾರೆ. ಉಂಗುರದ ಮಧ್ಯದಲ್ಲಿರುವ ಮಾಣಿಕ್ಯದ ಸುತ್ತ 40 ಪುಟ್ಟ ವಜ್ರದ ಹರಳುಗಳನ್ನು ಅಳವಡಿಸಲಾಗಿದ್ದು, ಸಂಪೂರ್ಣ ಉಂಗುರವನ್ನು ಬಂಗಾರದಲ್ಲಿ ತಯಾರಿಸಲಾಗಿದೆ. ಈ ಉಂಗುರದ ಬೆಲೆ 25 ಲಕ್ಷ ರೂ.ಗಿಂತಲೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ಕೆಲಸಕ್ಕಾಗಿ ಕುಶಲಕರ್ಮಿಗಳಿಗೆ ಆಮಿರ್ ಖಾನ್ ಭಾರೀ ಸಂಭಾವನೆ ನೀಡಿದ್ದಾರಂತೆ. ಹೀಗಾಗಿ ಈ ಉಂಗುರದ ಬೆಲೆ ಮದುವೆಯ ಒಟ್ಟು ಖರ್ಚನ್ನೂ ಮೀರಿದೆ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಶಿವಾಜಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ – ನಟ ರಿಷಬ್ ಶೆಟ್ಟಿ
ಅಂದಹಾಗೆ, ಸುಮಾರು 1800 ಕೋಟಿ ರೂಪಾಯಿ ಆಸ್ತಿಯ ಒಡೆಯ ಆಮಿರ್ ಖಾನ್ ಮದುವೆಯನ್ನು ಸರಳವಾಗಿ ಮಾಡಿಕೊಂಡಿದ್ದರು. ಆದರೆ ಪತ್ನಿಗೆ ಅವರು ನೀಡಿದ ಈ ದುಬಾರಿ ಉಂಗುರ ಇದೀಗ ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ಮೇಲುಕೋಟೆಯಲ್ಲಿ ʼಸೆಲೆಬ್ರಿಟಿʼ ಸಾಂಗ್ ಶೂಟ್
