ತಮಿಳು ಚಿತ್ರರಂಗದಲ್ಲಿ ನಟ ರವಿ ಮೋಹನ್ (ಜಯಂ ರವಿ) ಅವರ ಪತ್ನಿ ಆರತಿ ರವಿ ಹಾಗೂ ಗಾಯಕಿ ಕೆನಿಶಾ ಫ್ರಾನ್ಸಿಸ್ ನಡುವಿನ ವೈಯಕ್ತಿಕ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿರುವ ನಡುವೆಯೇ, ನಟಿ ಖುಷ್ಬು ಸುಂದರ್ ಹಂಚಿಕೊಂಡ ಒಂದು ಫೋಟೋ ಇದೀಗ ಸಿನಿ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.
ಖುಷ್ಬು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರತಿ ರವಿ ಮತ್ತು ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡಿದ್ದು, “ಮೈ ಫ್ಯಾಮಿಲಿ” ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಖುಷ್ಬು ಪುತ್ರಿಯರಾದ ಅವಂತಿಕಾ ಮತ್ತು ಆನಂದಿತಾ, ಆರತಿ ರವಿ, ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಹಾಗೂ ಆರತಿ ಮಕ್ಕಳಾದ ಆರವ್ ಮತ್ತು ಅಯಾನ್ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಪೋಸ್ಟ್ ವೈರಲ್ ಆದ ಬಳಿಕ, ಖುಷ್ಬು ಪರೋಕ್ಷವಾಗಿ ಆರತಿ ರವಿಗೆ ಬೆಂಬಲ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆ ರವಿ ಮೋಹನ್, ಆರತಿ ರವಿ ಮತ್ತು ಕೆನಿಶಾ ಫ್ರಾನ್ಸಿಸ್ ನಡುವಿನ ವೈಯಕ್ತಿಕ ವಿವಾದದಲ್ಲಿ ಖುಷ್ಬು ಹೆಸರು ಕೂಡ ಕೇಳಿಬಂದಿತ್ತು. ಇದನ್ನೂ ಓದಿ: ಮೊದಲ ಬಾರಿ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕ ಉಪೇಂದ್ರ
ರವಿ ಮೋಹನ್ ಮತ್ತು ಆರತಿ ರವಿ 2009 ರಲ್ಲಿ ವಿವಾಹವಾಗಿದ್ದರು. ಆದರೆ 2024 ರಲ್ಲಿ ಇಬ್ಬರೂ ಪ್ರತ್ಯೇಕವಾಗುತ್ತಿರುವುದಾಗಿ ರವಿ ಘೋಷಿಸಿದ್ದರು. ಬಳಿಕ ರವಿ ಮತ್ತು ಕೆನಿಶಾ ಫ್ರಾನ್ಸಿಸ್ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಹರಿದಾಡಿದ್ದವು. 2025 ರಲ್ಲಿ ಇಬ್ಬರೂ ಒಂದೇ ಮದುವೆ ಸಮಾರಂಭದಲ್ಲಿ ಒಂದೇ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡ ಬಳಿಕ ಈ ಚರ್ಚೆ ಮತ್ತಷ್ಟು ಜೋರಾಗಿತ್ತು.

ಇತ್ತೀಚೆಗೆ ಕೆನಿಶಾ ಇನ್‌ಸ್ಟಾಗ್ರಾಂ ಖಾತೆಯಿಂದ ಆರತಿ ವಿರುದ್ಧ ಕಾಮೆಂಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ತನ್ನ ಖಾತೆ ಹ್ಯಾಕ್ ಆಗಿತ್ತು ಎಂದು ಕೆನಿಶಾ ಸ್ಪಷ್ಟನೆ ನೀಡಿದ್ದರು. ಜೊತೆಗೆ ರವಿ ಮತ್ತು ಆರ್ತಿ ವಿಚ್ಛೇದನಕ್ಕೆ ನಾನು ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಕೆನಿಶಾ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಸಂಗೀತ ಕ್ಷೇತ್ರ ತೊರೆದು, ಚೆನ್ನೈ ಬಿಡುವುದಾಗಿ ಹಾಗೂ ರವಿ ಮೋಹನ್‌ನಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಕೆಟ್ಟ ಕೆಲಸಗಳಿಗೆ AI ಬಳಸಬೇಡಿ – ಬಿಕಿನಿ ಫೋಟೋ ವೈರಲ್ ಬಗ್ಗೆ ರುಕ್ಮಿಣಿ ವಸಂತ್ ರಿಯಾಕ್ಷನ್

ಅದೇ ಸಮಯದಲ್ಲಿ ಆರತಿ ರವಿ ಕೂಡ ತಮ್ಮ ಮಕ್ಕಳ ಹಾಗೂ ಸ್ವಾಭಿಮಾನಕ್ಕಾಗಿ ಬೇಕಾದರೆ ಮಾತನಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಖುಷ್ಬು, ತಾಯಿಯೊಂದಿಗೆ ಆಟ ಆಡಬೇಡಿ. ನೀನು ನಿನ್ನ ಮಕ್ಕಳಿಗಾಗಿ ಹೋರಾಡುವ ಸಿಂಹಿಣಿ ಎಂದು ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: AI ವಿಡಿಯೋ ಹಲ್‌ಚಲ್, ದುರುಳರಿಗೆ ಎಚ್ಚರಿಕೆ ಕೊಟ್ಟ ʻಕನಕವತಿʼ – ಹಿಂದಿರುವ ಸೂತ್ರಧಾರ ಯಾರು?
ಇದಾದ ಕೆಲವೇ ದಿನಗಳಲ್ಲಿ ಚೆನ್ನೈನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದ ರವಿ ಮೋಹನ್, ಕೆಲವು ಹೊಸ ಆರೋಪಗಳನ್ನು ಮಾಡಿದ್ದು, ಖುಷ್ಬು ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಜೊತೆಗೆ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಿನಿಮಾಗಳಿಂದ ದೂರ ಉಳಿಯುವುದಾಗಿ ಜಯಂ ರವಿ ತಿಳಿಸಿದ್ದರು.
