ಶ್ರೀನಗರ ಕಿಟ್ಟಿ (Srinagar Kitty) ಅವರ ಹುಟ್ಟುಹಬ್ಬದ ಸಲುವಾಗಿ, ಪತ್ರಕರ್ತ ರವಿ ಬೆಳಗೆರೆ ಅವರ ಜೋಗತಿಯರ ಜೀವನದ ಬಗ್ಗೆ ರಚಿಸಿದ ‘ವೇಷಗಳು’ (Veshagalu Movie) ಕಥೆಯನ್ನಾಧರಿಸಿ ನಿರ್ಮಾಣವಾಗುತ್ತಿರುವ ವೇಷಗಳು, ಲವ್ ಕೇಸ್ ಹಾಗೂ ಮದರ್ ಲವ್ ಈ ಮೂರೂ ಚಿತ್ರಗಳ ವಿಶೇಷ ಪತ್ರಿಕಾಗೋಷ್ಠಿ ಸಮಾರಂಭ ಜು.8 ರಂದು ನಡೆಯಿತು.
ಈ ವೇಳೆ ಕಿಟ್ಟಿ ಅವರ ಬಹುನಿರೀಕ್ಷಿತ ವೇಷಗಳು ಚಿತ್ರದಲ್ಲಿ ಕಿಟ್ಟಿ ಅವರೇ ದನಿಯಾಗಿರುವ ವಿಶೇಷ ಹಾಡನ್ನು ಬಿಡುಗಡೆ ಮಾಡಲಾಯಿತು. ಕಿಶನ್ ರಾವ್ ದಳವಿ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಗರ ಕಿಟ್ಟಿ ಅವರ ಕಳೆದ ಹುಟ್ಟುಹಬ್ಬದಂದು ವೇಷಗಳು ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿತ್ತು. ಈ ವರ್ಷದ ಅವರ ಬರ್ತ್ಡೇಗೆ ಕಿಟ್ಟಿ ಅವರೇ ಹಾಡಿರುವ ವಿಶೇಷ ಸಾಂಗ್ ರಿಲೀಸಾಗಿದೆ. ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ‘ವೇಷಗಳು’ ಚಿತ್ರಕ್ಕೆ ಕಿಶನ್ ರಾವ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರೀನಗರ ಕಿಟ್ಟಿ ಅವರು ಈ ಚಿತ್ರದಲ್ಲಿ ಬಸಪ್ಪ ಹಾಗೂ ಬಸಮ್ಮ ಜೋಗತಿ ಹೀಗೆ ಎರಡು ಶೇಡ್ ಇರುವ ಪಾತ್ರವನ್ನು ನಿರ್ವಹಿಸಿದ್ದಾರೆ. ಇದನ್ನೂ ಓದಿ: ಗೌರಿಗೆ ಕಾಸ್ಟ್ಲಿ ಉಂಗುರ ಗಿಫ್ಟ್ ಕೊಟ್ಟ ಆಮಿರ್ ಖಾನ್; ಮಾಣಿಕ್ಯದ ಹಿಂದಿದೆ 131 ಕುಶಲಕರ್ಮಿಗಳ 256 ಗಂಟೆಗಳ ಶ್ರಮ

ವೇಷಗಳು ಚಿತ್ರದಲ್ಲಿ ನಮ್ಮ ಜೋಗತಿಯರ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಕುರಿತಂತೆ ಹೇಳಲಾಗುತ್ತಿದೆ. ಇಲ್ಲಿ ನಟ ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 12 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.
ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಕಿಶನ್ ರಾವ್ ಸದ್ಯ ಒಂದು ಹಂತದ ಶೂಟಿಂಗ್ ಆಗಿದ್ದು, ಕಿಟ್ಟಣ್ಣನವರ ಭಾಗ ಇನ್ನೂ ಆರಂಭವಾಗಿಲ್ಲ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಹಾಗೂ ಉತ್ತರ ಭಾರತದ ಮಹಾಕಾಲೇಶ್ವರ ಇಲ್ಲೆಲ್ಲ ಹೋಗಬೇಕಾಗಿದೆ. ಚಿತ್ರದಲ್ಲಿ ಬಹುತೇಕ ಬಳ್ಳಾರಿ ಕನ್ನಡ ಭಾಷೆಯನ್ನು ಬಳಸಲಾಗಿದೆ ಎಂದು ಮಾಹಿತಿ ನೀಡಿದರು.
ಮೂರೂ ಚಿತ್ರತಂಡದವರು ಒಟ್ಟಿಗೇ ಸೇರಿ ತನ್ನ ಬರ್ತ್ಡೇ ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಬರ್ತ್ ಡೇ ಬಾಯ್ ನಟ ಶ್ರೀನಗರ ಕಿಟ್ಟಿ ಈ ಮೂರೂ ಚಿತ್ರಗಳು ತುಂಬಾ ಚೆನ್ನಾಗಿ ಮೂಡಿ ಬರ್ತಿವೆ. ಅದರಲ್ಲೂ ವೇಷಗಳು ತುಂಬಾ ವಿಶೇಷವಾದ ಚಿತ್ರ. ಎರಡನೇ ಹಂತದ ಚಿತ್ರೀಕರಣದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ನನ್ನ ಬರ್ತ್ ಡೇ ಒಂದು ರೀಸನ್ ಅಷ್ಟೇ. ಇಲ್ಲಿ 3 ಜನ ನಿರ್ದೇಶಕರಿದ್ದಾರೆ, ಅವ್ರಿಗೆಲ್ಲ ಒಳ್ಳೇದಾಗಬೇಕು. ಬರೀ ಬೇರೆ ಭಾಷೆಯ ಚಿತ್ರಗಳನ್ನು ಹೊಗಳುವುದಲ್ಲ, ಕನ್ನಡದಲ್ಲೂ ಒಳ್ಳೆಯ ನಿರ್ದೇಶಕರಿದ್ದಾರೆ. ರವಿ ಬೆಳಗೆರೆ ಅವರ ಉದ್ದೇಶ ಹಾಗೂ ಆಶಯಗಳನ್ನು ಇಟ್ಟುಕೊಂಡು ಸೌಜನ್ಯ ಹಾಗೂ ಕಿಶನ್ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದಾರೆ ಎನ್ನುತ್ತಾ ವೇಷಗಳು ನಿರ್ಮಾಪಕರನ್ನುದ್ದೇಶಿಸಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರ್ತಿದೆ. ಸುಮಾರು 5 ರಿಂದ 5.5 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ಮುಗಿಸಿಕೊಡುತ್ತೇವೆ. ಒಂದು ಅದ್ಭುತವಾದ ಸಿನಿಮಾ ಮಾಡಿದ ನಿರ್ಮಾಪಕ ನೀನಾಗ್ತೀಯ ಎಂದು ಅಭಯ ನೀಡಿದರು.
ಇಡೀ ಚಿತ್ರದಲ್ಲಿ ಬಸಪ್ಪ ಪಾತ್ರವೇ ಬಹುತೇಕ ಆವರಿಸಿಕೊಂಡಿದೆ. ಶ್ರೀನಗರ ಕಿಟ್ಟಿ ಅವರು ಜೋಗತಿ ಪಾತ್ರಕ್ಕಾಗಿ ಸಾಕಷ್ಟು ಮಾಹಿತಿ ಪಡೆದುಕೊಂಡು ಸಿದ್ದತೆ ಮಾಡಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡುತ್ತ ಅದೊಂದು ತತ್ವಪದ ಆಗಿರಬೇಕು. ಆದರೆ ಕಥೆಯನ್ನು ಹೇಳಬಾರದು ಎಂದುಕೊಂಡು ಮಾಡಿದ ಹಾಡಿದು. ಕಿಟ್ಟಿ ಅವರ ಕೇವಲ ೩ ಗಂಟೆಯೊಳಗೆ ಈ ಹಾಡನ್ನು ಹಾಡಿದರು ಎಂದು ಹೇಳಿದರು. ರಾಜ್ ಗುರು ದತ್ತರಾಜ್ ಅವರ ಸಂಭಾಷಣೆ, ಅಕ್ಷಯ್ ಪಿ.ರಾವ್ ಅವರ ಸಂಕಲನ ಈ ಚಿತ್ರಕ್ಕಿದೆ. ಇದನ್ನೂ ಓದಿ: ಮೇಲುಕೋಟೆಯಲ್ಲಿ ʼಸೆಲೆಬ್ರಿಟಿʼ ಸಾಂಗ್ ಶೂಟ್
