ಟಾಕ್ಸಿಕ್ ನಟಿ ರುಕ್ಮಿಣಿ ವಸಂತ್‌ಗೆ (Rukmini Vasanth) ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ ದುರುಳರು. AI ಬಿಕಿನಿ ಫೋಟೋ ವಿಡಿಯೋವೊಂದನ್ನ ಹರಿಬಿಟ್ಟು ನಟಿಯ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ರುಕ್ಮಿಣಿ ವಸಂತ್‌ಗೆ ಕಾನೂನು ಪಾಠವನ್ನೂ ಮಾಡಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ನಟಿ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: AI ವಿಡಿಯೋ ಹಲ್‌ಚಲ್, ದುರುಳರಿಗೆ ಎಚ್ಚರಿಕೆ ಕೊಟ್ಟ ʻಕನಕವತಿʼ – ಹಿಂದಿರುವ ಸೂತ್ರಧಾರ ಯಾರು?
From the desk of #RukminiVasanth pic.twitter.com/fwcSGL4OBd
— Rukmini Vasanth (@RukminiVasantFP) May 23, 2026
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿರುವ ಬಗ್ಗೆ ಈಗಾಗಲೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಎಐಯನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕೇ ಹೊರತು ಕೆಟ್ಟ ಕೆಲಸಗಳಿಗೆ ಅಲ್ಲ. ವಲ ನಟಿಯರಷ್ಟೇ ಅಲ್ಲ ಬೇರೆ ಹೆಣ್ಣು ಮಕ್ಕಳಿಗೂ ಸಹ ಇದರಿಂದ ಸಮಸ್ಯೆ ಆಗುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ತಿಳಿಸಿದ್ದಾರೆ.
South sensation Rukmini Vasanth surprised all the fans with first ever Bikini shoot 👙😍💦💦
You can’t ignore her thunder thighs 🤩😛#rukmini #rukminivasanth pic.twitter.com/DyiMwXxcPG
— Shivani Verma (@FilmiWoman) May 22, 2026
ಕಾಂತಾರ ಸಿನಿಮಾ (Kantara Cinema) ಮೂಲಕ ದೇಶದ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್‌ಗೆ ಶನಿವಾರ ಎಂದಿನಂತೆ ಇರಲಿಲ್ಲ. ಖುಷಿಯಾಗಿ ಎದ್ದವರ ಮುಂದಿತ್ತು ಅವರದ್ದೇ ನಕಲಿ ವಿಡಿಯೋ. ಬಿಕಿನಿ ತೊಟ್ಟು ಮಾದಕತೆ ಬೀರುವ ವಿಡಿಯೋ ಅದಾಗಿತ್ತು. ಅರೇ, ಇದು ನಾನೇನಾ? ಅನ್ನುವಷ್ಟರಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಅದು ವೈರಲ್ ಕೂಡ ಆಗಿತ್ತು. ಅನೇಕರು ಈ ವಿಡಿಯೋ (AI Video) ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲವರು ನಟಿಗೇ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಇದರಿಂದ ಬೇಸತ್ತು ಹೋದರು ರುಕ್ಮಿಣಿ ವಸಂತ್. ಇದನ್ನೂ ಓದಿ: ಕಾಂತಾರ ʻಕನಕವತಿʼ ಬಿಕಿನಿ ಫೋಟೋ ಹಲ್‌ಚಲ್ – ಕ್ರಮದ ಎಚ್ಚರಿಕೆ ಕೊಟ್ಟ ರುಕ್ಮಿಣಿ ವಸಂತ್

ಮೊದಲನೇ ಸಿನಿಮಾದಿಂದ ಈವರೆಗೂ ಒಂದೇ ಒಂದು ಬಾರಿಯೂ ಸ್ಕಿನ್ ಶೋ ಮಾಡಿದವರಲ್ಲ ರುಕ್ಮಿಣಿ ವಸಂತ್. ಮಾದಕ ಉಡುಗೆಗಳನ್ನೂ ಅವರು ತೊಟ್ಟವರಲ್ಲ. ಸಾಂಪ್ರದಾಯಿಕ ಉಡುಗೆಯ ಮೂಲಕವೇ ಗಮನ ಸೆಳೆದಿರುವ ನಟಿ ಅವರು. ಹಾಗಾಗಿ ಸಹವಾಗಿಯೇ ವಿಡಿಯೋ ನೋಡಿದ್ದ ಅಭಿಮಾನಿಗಳಿಗೆ ಪಿತ್ತ ನೆತ್ತಿಗೇರಿತ್ತು. ಇದು ನಮ್ ನಟಿನಾ? ಅಂತ ಕೆಲವರು ಗರಂ ಆಗಿದ್ದರು. ಇದು ಎಐ ನಿರ್ಮಿತ ವಿಡಿಯೋ ಅಂತ ಕೆಲವರು ಹೇಳಿದ್ದರೂ ಸಮಾಧಾನ ಆಗಲಿಲ್ಲ ರುಕ್ಮಿಣಿ ಫ್ಯಾನ್ಸ್‌ಗೆ. ಆಗ ಸ್ವತಃ ರುಕ್ಮಿಣಿ ಅವರೇ ಅಖಾಡಕ್ಕೆ ಇಳಿಯಬೇಕಾಯಿತು. ಅದು ನನ್ನ ವಿಡಿಯೋ ಅಲ್ಲ ಅಂತ ಹೇಳಬೇಕಾಯಿತು. ಕೊನೆಗೆ ಈ ರೀತಿ ಮಾಡಿದ ದುರುಳರ ವಿರುದ್ಧ ಕಾನೂನು ಹೋರಾಟ ಮಾಡುವೆ ಅನ್ನಬೇಕಾಯಿತು.
ಇತ್ತೀಚಿನ ದಿನಗಳಲ್ಲಿ ಅನೇಕ ನಟಿಯರಿಗೆ ಈ ರೀತಿಯ ಅನುಭವ ಆಗಿದೆ. ಅದರಲ್ಲೂ ಕನ್ನಡದ ಸ್ಟಾರ್ ನಟಿಯರೇ ಟಾರ್ಗೆಟ್ ಆಗುತ್ತಿದ್ದಾರೆ. ಈ ಹಿಂದೆಯೂ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗಳು ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ದೀಪಿಕಾ ಪಡುಕೋಣೆ ಕೂಡ ಈ ರಾಕ್ಷಸರಿಂದ ತೊಂದರೆ ಅನುಭವಿಸಬೇಕಾಯಿತು. ಆದರೂ, ಈ ಕಿಡಿಗೇಡಿಗಳ ಕಾಟ ನಿಲ್ಲುತ್ತಿಲ್ಲ.

ರುಕ್ಮಿಣಿ ವಸಂತ್ ಅವರು ಈಗಾಗಲೇ ಅದು ತಮ್ಮ ವಿಡಿಯೋ ಅಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಆ ವಿಡಿಯೋಗಳನ್ನು ತಯಾರು ಮಾಡಿದವರ ಮತ್ತು ಹಂಚಿಕೊಂಡವರ ವಿರುದ್ಧವೂ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಯಾರೂ ನಕಲಿ ವಿಡಿಯೋ ಹಂಚಿಕೊಳ್ಳಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಇಂತಹ ಸಂಗತಿಗಳನ್ನು ಗಂಭೀರವಾಗಿ ತಗೆದುಕೊಳ್ಳಬೇಕಿದೆ. ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ನಟಿಯರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕಿದೆ. ಇದನ್ನೂ ಓದಿ: ಕಾವ್ಯಾ ಮಾರನ್‌ಗೆ ಕೂಡಿಬಂತು ಕಂಕಣ ಭಾಗ್ಯ – ವರ್ಷಾಂತ್ಯದಲ್ಲೇ ಹಸೆಮಣೆ ಏರುವ ಸಾಧ್ಯತೆ!
