ಕಾಂತಾರ ನಟಿ ರುಕ್ಮಿಣಿ ವಸಂತ್ ಅವರು ಸಿನಿಮಾ ಒಂದರ ಚಿತ್ರೀಕರಣಕ್ಕೆ ಬಿಕಿನಿ ಧರಿಸಿದ್ದಾರೆ ಎನ್ನಲಾದ ಫೇಕ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
From the desk of #RukminiVasanth pic.twitter.com/fwcSGL4OBd
— Rukmini Vasanth (@RukminiVasantFP) May 23, 2026
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ಇದು ಎಐ ಬಳಸಿ ಮಾಡಿದ ನಕಲಿ ಫೋಟೋ ಎಂದು ಸ್ಪಷ್ಟನೆ ನೀಡಿದ್ದಾರೆ. ದಯವಿಟ್ಟು ಇಂತಹ ಸುಳ್ಳು ಊಹಾಪೋಹಾಗಳಿಗೆ ಕಿವಿಗೊಡಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಸೈಬರ್ ಠಾಣೆಗೂ ದೂರು ಕೊಡಲು ನಿರ್ಧಾರಿಸಿದ್ದಾರೆ. ಇದನ್ನೂ ಓದಿ: ಕಂಗನಾ ತಾಳಿ, ಹಸಿರು ಬಳೆ ಧರಿಸಿದ್ದ ಫೋಟೋ ವೈರಲ್ – ರಹಸ್ಯ ಮದುವೆ ವದಂತಿಗೆ ಕೊನೆಗೂ ಸಿಕ್ತು ಸ್ಪಷ್ಟನೆ
ಬಿಕಿನಿ ಧರಿಸಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವರು ಇದರ ಸತ್ಯಾಸತ್ಯತೆ ತಿಳಿಯದೆ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬೇಸರ ಹೊರಹಾಕಿರುವ ನಟಿ, ಇದು ಖಾಸಗಿತನಕ್ಕೆ ಧಕ್ಕೆ ತರುವಂತಹ ನಡೆ. ಇದನ್ನು ಗಂಭಿರವಾಗಿ ಪರಿಗಣಿಸಿ, ಯಾರು ಈ ಕೃತ್ಯ ಎಸಗಿದ್ದಾರೆ, ಯಾರೆಲ್ಲ ಹಂಚಿಕೊಳ್ಳುತ್ತಿದ್ದಾರೆ ಅವರ ವಿರುದ್ಧ ದೂರು ನೀಡಲಾಗುವುದು ಎಂದು ಪೋಸ್ಟ್ ಮಾಡಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: 2.1 ಲಕ್ಷದ ಬ್ಯಾಗ್, 1.78 ಲಕ್ಷ ಮೌಲ್ಯದ ಬೂಟ್ಸ್ ಧರಿಸಿದ ಐಶ್ವರ್ಯ ರೈ – ಕೇನ್ಸ್‌ಗೂ ಮುನ್ನವೇ ಏರ್‌ಪೋರ್ಟ್ ಲುಕ್ ವೈರಲ್
