ಇತ್ತೀಚೆಗೆ ಕಂಗನಾ ರಣಾವತ್ (Kangana Ranaut) ಮಂಗಳಸೂತ್ರ ಹಾಗೂ ಹಸಿರು ಬಳೆ ಧರಿಸಿದ್ದ ಫೋಟೋಗಳು ವೈರಲ್ ಆದ ಬಳಿಕ, ಅವರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೀಗ ಈ ವಿಚಾರಕ್ಕೆ ಸ್ವತಃ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿದ ಕಂಗನಾ, ನಾನು ಪ್ರತಿದಿನ ನಗರದ ಸುತ್ತಮುತ್ತ ಶೂಟಿಂಗ್ ತೆರಳುತ್ತೇನೆ. ಈ ವೇಳೆ ನಾನು ಪಾತ್ರಕ್ಕಾಗಿ ಮಂಗಳಸೂತ್ರ ಮತ್ತು ಬಳೆ ಧರಿಸಿದ್ದಾಗ ಯಾರೋ ತೆಗೆದ ಫೋಟೋ ಈಗ ವೈರಲ್ ಆಗಿದೆ. ಇದರಿಂದ ನನಗೆ ಅನೇಕ ಫೋನ್ ಕರೆಗಳು ಬರುತ್ತಿವೆ. ಆದರೆ ಮದುವೆಯಾದ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡರೆ ಅದರಲ್ಲಿ ದೊಡ್ಡ ವಿಷಯ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 2.1 ಲಕ್ಷದ ಬ್ಯಾಗ್, 1.78 ಲಕ್ಷ ಮೌಲ್ಯದ ಬೂಟ್ಸ್ ಧರಿಸಿದ ಐಶ್ವರ್ಯ ರೈ – ಕೇನ್ಸ್‌ಗೂ ಮುನ್ನವೇ ಏರ್‌ಪೋರ್ಟ್ ಲುಕ್ ವೈರಲ್

ಇದೇ ವೇಳೆ ನಾನು ರಹಸ್ಯವಾಗಿ ಮದುವೆಯಾಗುವುದಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ ಅವರು, ನಟರು ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಾನು ಮದುವೆಯಾದರೆ ಅದನ್ನು ರಹಸ್ಯವಾಗಿ ಇಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಜೊತೆಗಿನ ಸಂಬಂಧದ ವದಂತಿಗಳನ್ನೂ ಕಂಗನಾ ತಳ್ಳಿಹಾಕಿದ್ದರು. ಚಿರಾಗ್ ನನ್ನ ಒಳ್ಳೆಯ ಸ್ನೇಹಿತ ಮಾತ್ರ. ನಮ್ಮಿಬ್ಬರ ನಡುವೆ ಯಾವುದೇ ಪ್ರೇಮ ಸಂಬಂಧ ಇಲ್ಲ ಎಂದು ಅವರು ಹೇಳಿದ್ದರು.
ಕಂಗನಾ ಮತ್ತು ಚಿರಾಗ್ ಪಾಸ್ವಾನ್ 2011ರಲ್ಲಿ ಬಿಡುಗಡೆಯಾದ ಮಿಲೇ ನಾ ಮಿಲೇ ಹಮ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಚಿರಾಗ್ ಅವರ ಮೊದಲ ಸಿನಿಮಾ ಆಗಿತ್ತು. ವೃತ್ತಿಜೀವನದ ವಿಚಾರಕ್ಕೆ ಬಂದರೆ, ಕಂಗನಾ ಕೊನೆಯದಾಗಿ ಎಮರ್ಜೆನ್ಸಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ್ದರು. ಇದನ್ನೂ ಓದಿ: ಕಾವ್ಯಾ ಮಾರನ್‌ಗೆ ಕೂಡಿಬಂತು ಕಂಕಣ ಭಾಗ್ಯ – ವರ್ಷಾಂತ್ಯದಲ್ಲೇ ಹಸೆಮಣೆ ಏರುವ ಸಾಧ್ಯತೆ!

