– ಸಭೆಯಿಂದ ಹೊರಬಂದು ಆಕ್ರೋಶ ಹೊರಹಾಕಿದ ಪಿಡಿಒಗಳು
ಬೆಳಗಾವಿ: ಎಸ್‌ಐಆರ್ (SIR) ವಿಚಾರಕ್ಕೆ ತಹಶೀಲ್ದಾರ್ ಹಾಗೂ ಪಿಡಿಒಗಳ (PDO) ಮಧ್ಯೆ ಗಲಾಟೆಯಾದ ಘಟನೆ ಖಾನಾಪುರದಲ್ಲಿ (Khanapur) ನಡೆದಿದೆ.
ಜಿಲ್ಲಾಧಿಕಾರಿ ಸೂಚನೆಯಂತೆ ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಎಸ್‌ಐಆರ್ ವಿಚಾರ ಚರ್ಚಿಸುವಾಗ ಪಿಡಿಒ ತಹಶೀಲ್ದಾರ್ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಪರಸ್ಪರ ಏಕವಚನದಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ – ರೈತರ ಹೋರಾಟಕ್ಕೆ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಬೆಂಬಲ
ತಕ್ಷಣವೇ ಸಭೆಯಿಂದ ಹೊರಬಂದ ಪಿಡಿಒಗಳು ತಹಶೀಲ್ದಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಹಶೀಲ್ದಾರ್ ದರ್ಪ ತೋರಿಸುತ್ತಿದ್ದಾರೆ ಎಂದು ಕೆಲ ಪಿಡಿಒಗಳು ಆರೋಪಿಸಿದ್ದಾರೆ.
ಈಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್, ಪಿಡಿಒಗಳು ಎಸ್‌ಐಆರ್ ಕರ್ತವ್ಯ ಹಾಗೂ ನಿಯಮಗಳನ್ನ ಅಚ್ಚುಕಟ್ಟಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ – ಸಚಿವ ಕೃಷ್ಣ ಬೈರೇಗೌಡ
