ನಮ್ಮ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ (Rocking Star yash) ಹವಾ ಈಗ ಕೇವಲ ಸ್ಯಾಂಡಲ್‌ವುಡ್‌ಗಷ್ಟೇ (Sandalwood) ಸೀಮಿತವಾಗಿಲ್ಲ. ದೇಶ-ವಿದೇಶಗಳಲ್ಲಿ ತಮ್ಮದೇ ಕ್ರೇಜ್ ಸೃಷ್ಟಿಸಿರುವ ಯಶ್ ಹೆಸರು ಇದೀಗ ಬಾಲಿವುಡ್‌ನ (Bollywood) ಬಿಗ್‌ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕ್ವಿಜ್ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಸೀಸನ್ 18ರಲ್ಲೂ ಕೇಳಿಬಂದಿದೆ.
ಕೆಬಿಸಿಯ ಹಾಟ್‌ಸೀಟ್‌ನಲ್ಲಿ ಕುಳಿತಿದ್ದ ಸ್ಪರ್ಧಿ ಡಾ. ಗಣೇಶ್ ಅವರಿಗೆ ಯಶ್ ಕುರಿತು ಪ್ರಶ್ನೆ ಕೇಳಲಾಯಿತು. ʼರಜನಿಕಾಂತ್‌ಗೆ ಸೂಪರ್‌ಸ್ಟಾರ್, ಚಿರಂಜೀವಿಗೆ ಮೆಗಾಸ್ಟಾರ್, ಪವನ್ ಕಲ್ಯಾಣ್‌ಗೆ ಪವರ್‌ಸ್ಟಾರ್ ಎಂಬ ಬಿರುದುಗಳಿದ್ದರೆ, ಯಶ್ ಅವರನ್ನು ಏನೆಂದು ಕರೆಯುತ್ತಾರೆ ಎಂಬ ಪ್ರಶ್ನೆ ಎದುರಾಯಿತು.
ಈ ಪ್ರಶ್ನೆಗೆ ಡಾ. ಗಣೇಶ್ ಯಾವುದೇ ಗೊಂದಲವಿಲ್ಲದೆ ‘ರಾಕಿಂಗ್ ಸ್ಟಾರ್’ ಎಂಬ ಉತ್ತರವನ್ನು ಆಯ್ಕೆ ಮಾಡಿ ಲಾಕ್ ಮಾಡಿದರು. ಉತ್ತರ ಸರಿಯಾಗುತ್ತಿದ್ದಂತೆ ಅಮಿತಾಬ್ ಬಚ್ಚನ್ ಕೂಡ ಸ್ಪರ್ಧಿಯನ್ನು ಮೆಚ್ಚಿ ಮುಂದಿನ ಪ್ರಶ್ನೆಗೆ ಸಾಗಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸವನ್ನು ದೇಶದ ಜನತೆಗೆ ವಿವರಿಸಲಿ: ಪ್ರಿಯಾಂಕ್
ಯಶ್ ಸದ್ಯ ‘ರಾಮಾಯಣ’ ಹಾಗೂ ‘ಟಾಕ್ಸಿಕ್’ ಸಿನಿಮಾಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅವರ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ನಡುವೆ ಕೆಬಿಸಿಯಂತಹ ಜನಪ್ರಿಯ ಕಾರ್ಯಕ್ರಮದಲ್ಲಿ ಯಶ್ ಕುರಿತು ಪ್ರಶ್ನೆ ಕೇಳಿಬಂದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಒಟ್ಟಿನಲ್ಲಿ, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಹೆಸರು ಇದೀಗ ಬಿಗ್‌ಬಿ ಅಮಿತಾಬ್ ಬಚ್ಚನ್ ಅವರ ಕೆಬಿಸಿ ವೇದಿಕೆಯಲ್ಲೂ ಮೊಳಗಿದ್ದು, ಅಭಿಮಾನಿಗಳಿಗೆ ಇದು ಮತ್ತೊಂದು ಖುಷಿಯ ವಿಚಾರವಾಗಿದೆ.ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಟ್ವಿಸ್ಟ್ – ಗೆಳೆಯನಿಂದಲೇ ನಟಿಗೆ ಬಿಗ್ ಶಾಕ್

