ಬೆಂಗಳೂರು: ಮುಂಬರುವ ಓಣಂ ಹಬ್ಬದ (Onam Festival) ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ರೈಲ್ವೆ ಮಂಡಳಿಯು ರೈಲು ಸಂಖ್ಯೆ 06567/06568 ಬೆಂಗಳೂರು ಕಂಟೋನ್ಮೆಂಟ್–ಕಣ್ಣೂರು–ಬೆಂಗಳೂರು ಕಂಟೋನ್ಮೆಂಟ್ (Bengaluru Cantonment-Kannur) ವಿಶೇಷ ಎಕ್ಸ್‌ಪ್ರೆಸ್ ರೈಲಿನ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 06567 ಬೆಂಗಳೂರು ಕಂಟೋನ್ಮೆಂಟ್–ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಆ.20 ರಂದು ರಾತ್ರಿ 22:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಮರುದಿನ (ಆ.21) ಮಧ್ಯಾಹ್ನ 12:50 ಗಂಟೆಗೆ ಕಣ್ಣೂರು ತಲುಪಲಿದೆ. ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06568 ಕಣ್ಣೂರು–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಆ.21 ರಂದು ಸಾಯಂಕಾಲ 16:10 ಗಂಟೆಗೆ ಕಣ್ಣೂರಿನಿಂದ ಹೊರಟು, ಆ.22 ರಂದು ಬೆಳಗ್ಗೆ 06:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಆಗಮಿಸಲಿದೆ. ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್ – ಪುಗ್ಸಟ್ಟೆ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್
ಈ ವಿಶೇಷ ರೈಲು ಮಾರ್ಗ ಮಧ್ಯೆ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರ್, ಪಾಲಕ್ಕಾಡ್, ಶೋರನೂರ್, ತಿರೂರ್, ಪರಪನಂಗಡಿ, ಕೋಝಿಕ್ಕೋಡ್, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ವಿಶೇಷ ರೈಲು ಒಟ್ಟು 23 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ 16 ಸ್ಲೀಪರ್ ಕ್ಲಾಸ್, 5 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ. ಇದನ್ನೂ ಓದಿ: ಕರ್ನಾಟಕ ಬಂದ್ ಹಿಂಪಡೆದ ಎಲ್ಲಾ ಸಂಘಟನೆಗಳಿಗೆ ಸಿಎಂ ಡಿಕೆಶಿ ಕೃತಜ್ಞತೆ

