– ಮತ್ತೊಂದು ಹೋರಾಟಕ್ಕೆ ಬೀದಿಬದಿ ವ್ಯಾಪಾರ ಸಮಿತಿ ಸಜ್ಜು
ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಮತ್ತೆ ಶಾಕ್ ಕೊಟ್ಟಿದ್ದಾರೆ. ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲೋದಿಲ್ಲ, ಮುಂದುವರೆಸೋದಾಗಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಖಡಕ್ ಸೂಚನೆ ಕೊಟ್ಟಿದ್ದಾರೆ.
ಮತ್ತೊಂದು ಕಡೆ ಬೆಂಗಳೂರಿನ (Bengaluru) ಹಲವು ಕಡೆ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ವ್ಯಾಪಾರಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಂದು ಹೋರಾಟಕ್ಕೂ ಬೀದಿಬದಿ ವ್ಯಾಪಾರ ಸಮಿತಿ ಸಜ್ಜಾಗ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ – ವಾಕಿಂಗ್‌ಗೆ ಬಂದಿದ್ದವರಿಗೆ ದರ್ಶನ, ಪಾರ್ಕ್‌ನಿಂದ ಎದ್ನೋ ಬಿದ್ನೋ ಅಂತ ಓಡಿದ ಜನ

ಕಳೆದ 8 ದಿನಗಳಿಂದ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ (Footpath Encroachment) ತೆರವು ಕಾರ್ಯಾಚರಣೆ ನಡೆಯುತ್ತಾ ಇದೆ. ಸುಮಾರು 430 ಕಿಮೀ ಫುಟ್‌ಪಾತ್ ತೆರವು ಆಗಿದೆ. ಫುಟ್‌ಪಾತ್ ತೆರವಿಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಹೀಗಾಗಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಇಂದು ಬೀದಿಬದಿ ವ್ಯಾಪಾರಿಗಳ ಜೊತೆ ಸಭೆ ನಡೆದಿದೆ.
ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳ ಕೆಲವೊಂದು ಬೇಡಿಕೆಗಳನ್ನ ಈಡೇರಿಸುವುದರ ಬಗ್ಗೆ ಚರ್ಚೆ ಆಗಿದೆ. ಆದರೆ ಯಾವುದೇ ಕಾರಣಕ್ಕೂ ಫುಟ್‌ಪಾತ್ ತೆರವು ಕಾರ್ಯಾಚರಣೆ ಸ್ಥಗಿತ ಆಗಲ್ಲ, ಮುಂದುವರಿಯುತ್ತದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಗೆ ಅಲೀಪುರದಿಂದ ಗ್ರಾಮಸ್ಥರ ಪ್ರಯಾಣ; ಗ್ರಾಮದಲ್ಲಿ ನೇರ ಪ್ರಸಾರಕ್ಕೆ ಭಾರಿ ಸಿದ್ಧತೆ

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರವೇ ತೆರವು ಕಾರ್ಯಾಚರಣೆ ಆಗ್ತಿದೆ. 18 ಸಾವಿರ ರಸ್ತೆಗಳಲ್ಲಿ ಬರೀ ಒಂದೂವರೆ ಸಾವಿರ ರಸ್ತೆಗಳಲ್ಲಿ ಮಾತ್ರ ತೆರವು ಮಾಡ್ತಾ ಇದ್ದೇವೆ. ನಮ್ಮ ಕಾರ್ಯಾಚರಣೆ ಬೀದಿಬದಿ ವ್ಯಾಪಾರಿಗಳ ವಿರುದ್ಧ ಅಲ್ಲ, ನಮ್ಮ ಕಾರ್ಯಾಚರಣೆ ಸುರಕ್ಷತಾ ಪಾದಚಾರಿ ಮಾರ್ಗ ನಿರ್ಮಾಣದ ಗುರಿ ಅಂತಾ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಒಬ್ಬ ಲೀಡರ್ ಮಗನೂ RSS ನಲ್ಲಿ ಪೂರ್ಣ ಪ್ರಚಾರಕನಾಗಿಲ್ಲ: ಪ್ರಿಯಾಂಕ್ ಖರ್ಗೆ ಕಿಡಿ
ಇನ್ನೂ ಬೀದಿಬದಿ ವ್ಯಾಪಾರಿಗಳ ಸಮಿತಿ ಸಭೆ ಬಗ್ಗೆ ಪ್ರತಿಕ್ರಿಯಿಸಿ, ಸಚಿವರ ಜೊತೆಗಿನ ಸಭೆ ಸಕ್ಸಸ್ ಆಗಿಲ್ಲ . ಕೆಲವೊಂದು ಬೇಡಿಕೆಗಳನ್ನ ಈಡೇರಿಸುತ್ತೇವೆ ಅಂತಾ ಹೇಳಿದ್ದಾರೆ. ಕೆಲ ಬೇಡಿಕೆಗಳ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಬೀದಿ ಬದಿ ವ್ಯಾಪಾರ ತೆರವು ಪಟ್ಟಣ ಪಂಚಾಯಿತಿ ಸಮಿತಿಯಲ್ಲೇ ಚರ್ಚೆ ಆಗಬೇಕು. ಪಟ್ಟಣ ಪಂಚಾಯಿತಿ ಸಮಿತಿ ರಚನೆ ಮಾಡ್ತೆವೆ ಅಂತ ಹೇಳಿದ್ದಾರೆ. ಬೀದಿಬದಿ ವ್ಯಾಪಾರಿಗಳನ್ನ ಪರಿಶೀಲನೆ ಮಾಡಬೇಕು ಐಡಿ ಕೊಡಬೇಕು ಅಂತಾ ಒತ್ತಾಯ ಮಾಡಿದ್ದೇವೆ. ಫುಟ್‌ಪಾತ್ ಮೇಲೆ ಮಾಡೋದ್ರಿಂದ ಯಾರು ಸತ್ತಿಲ್ಲ. ಸತ್ತಿರೋ ದಾಖಲೆ ತೋರಿಸಿ ಅಂದರೆ ಇಲ್ಲ. ಕಾರ್ಯಾಚರಣೆ ಮುಂದುವರಿಸುತ್ತೇವೆ ಅಂತಾ ಇದ್ದಾರೆ. ಪ್ರಮುಖ ರಸ್ತೆಗಳಲ್ಲಿ ವ್ಯಾಪಾರದ ಬಗ್ಗೆ ಸರಿಯಾಗಿ ಚರ್ಚೆ ಆಗಿಲ್ಲ. ಬೀದಿಬದಿ ವ್ಯಾಪಾರಿಗಳ ಸಮಿತಿ ಮತ್ತೆ ಸಭೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಅಂತಾ ತಿಳಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳ ಆಕ್ರೋಶ
ಮತ್ತೊಂದು ಕಡೆ ಇವತ್ತು ಸಿದ್ದಾಪುರ ಪೊಲೀಸ್ ಠಾಣೆ ಮುಖ್ಯ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು. ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆರು ಜೆಸಿಬಿಗೆ ಅಡ್ಡ ಹೋಗಿ ಕಾರ್ಯಾಚರಣೆ ತಡೆದಿದ್ದಾರೆ.
