ವಿಜಯಪುರ: ಜಿಲ್ಲೆಯಲ್ಲಿ ಈ ಬಾರಿ ಬರ ಭೀಕರವಾಗಿದೆ. ಇಲ್ಲಿನ ಹಲವು ಕೆರೆಗಳು ಖಾಲಿ ಆಗಿದ್ದು, ಆಲಮಟ್ಟಿ ಜಲಾಶಯ ತುಂಬಿದ್ರೂ ಕಾಲುವೆಗಳಿಗೆ ನೀರು ಬಿಟ್ಟಿಲ್ಲ ಎಂದು ರೈತರು ಕೆರೆಗಳಿಗೆ ಇಳಿದು ಹೋರಾಟ ಮಾಡಿದ್ದಾರೆ.

ವರುಣನ ಅವಕೃಪೆಯಿಂದ ಈ ಬಾರಿ ವಿಜಯಪುರ (Vijayapura) ಜಿಲ್ಲೆಯಾದ್ಯಂತ ಭೀಕರ ಬರ ಮನೆ ಮಾಡಿದೆ. ಮಳೆ ಇಲ್ಲದೆ ಜಿಲ್ಲೆಯ ಕೆರೆಗಳು ಬತ್ತಿ ಹೋಗಿವೆ. ಜನ, ಜಾನುವಾರುಗಳೂ ಕೂಡ ಹನಿ ನೀರಿಗೂ ಪರಿತಪಿಸುವಂತಾಗಿದೆ. ಹೀಗಾಗಿ ಕೂಡಲೇ ಕೂಡಲೇ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿ ರೈತರು ಕೆರೆಗೆ ಇಳಿದು ಹೋರಾಟ ನಡೆಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸುರಂಗಕ್ಕೆ ಏಕಾಏಕಿ ನುಗ್ಗಿದ ನೀರು – 7 ಮಂದಿ ಬಲಿ, ಇಬ್ಬರಿಗಾಗಿ ಮುಂದುವರಿದ ಶೋಧಕಾರ್ಯ
ಈ ಬಾರಿ ವಿಜಯಪುರ ಭಾಗರದಲ್ಲಿ ಮಳೆಯಾಗಿದ್ದರೂ ಕೂಡ ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟದಲ್ಲಿ ಸುರಿದ ಮಳೆಯಿಂದ ಕೃಷ್ಣಾ ನದಿಗೆ ನೀರು ಹರಿದುಬಂದಿದ್ದು, ಆಲಮಟ್ಟಿ ಜಲಾಶಯ (Almatti Dam) ಭರ್ತಿಯಾಗಿದೆ. ಆದರೆ ಜಿಲ್ಲೆಯ ಸುತ್ತಮುತ್ತಲಿನ ಕೆಲವು ಕೆರೆಗಳಲ್ಲಿ ನೀರಿಲ್ಲದೇ ರೈತರು ಪರದಾಡುವಂತಾಗಿದೆ. ಜಿಲ್ಲೆಯ ಇಟ್ಟಂಗಿಹಾಳ ಗ್ರಾಮದ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಹತ್ತಾರು ಹಳ್ಳಿಯ ಜನರು ಹನಿ ನೀರಿಗೂ ಪರದಾಡುವಂತಾಗಿದೆ. ಜಲಾಶಯ ಭರ್ತಿಯಾಗಿದೆ. ಈಗಾದರೂ ಕೆರೆಗಳಿಗೆ ನೀರು ಹರಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜನರ ಆಗ್ರಹಕ್ಕೆ ಜಿಲ್ಲಾಡಳಿತ ಕ್ಯಾರೆ ಎಂದಿದೆ. ಕಾರಣ ಆಕ್ರೋಶಗೊಂಡ ರೈತರು ಕೆರೆಯಲ್ಲಿ ಇಳಿದು ರಾಜ್ಯ ಸರ್ಕಾರ ಹಾಗೂ ಜಿಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಒಂದು ವಾರದಲ್ಲಿ ಕೆರೆ ತುಂಬದಿದ್ರೆ ಉಗ್ರ ಹೋರಾಟ ಎಚ್ಚರಿಕೆ ನೀಡಿದ್ದಾರೆ. ಅಂಗೈಯಲ್ಲೇ ನೀರಿದ್ರೂ ನಮಗೆ ಬಳಸಿಕೊಳ್ಳಲು ಆಗುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ 108 ಕುಂಭಾಭಿಷೇಕ
