ಟಾಕ್ಸಿಕ್ ಚಿತ್ರದ ಬಿಡುಗಡೆಯ ಬ್ಯುಸಿಯಲ್ಲಿರೋ ಯಶ್ ಯಾರ ಕೈಗೂ ಸಿಗುತ್ತಿಲ್ಲ, ಆದರೆ ಆಪ್ತನಿಗೆ ಸಮಯ ಕೊಟ್ಟಿದ್ದು ವಿಶೇಷ. ಹೌದು ಚಿಕ್ಕಣ್ಣ ಹಾಗೂ ಯಶ್ ಬಹಳ ಹಿಂದಿನಿಂದಲೂ ಆಪ್ತರು. ಯಶ್ ಅವರ ಕಿರಾತಕ , ಮಾಸ್ಟರ್‌ಪೀಸ್ ಚಿತ್ರದಲ್ಲಿ ಯಶ್ ಜೊತೆ ಚಿಕ್ಕಣ್ಣ ಕಾಂಬಿನೇಷನ್‌ನ್ನು ಜನ ಇಷ್ಟಪಟ್ಟಿದ್ದರು. ಇದೀಗ ಯಶ್ ಹಾಗೂ ಚಿಕ್ಕಣ್ಣ ಸ್ನೇಹ ಇಂದಿಗೂ ಗಟ್ಟಿಯಾಗಿದೆ ಅನ್ನೋದನ್ನ ಒಂದು ಫೋಟೋ ರಿವೀಲ್ ಮಾಡಿದೆ.
ಇದೇ ತಿಂಗಳು 30, 31ರಂದು ಚಿಕ್ಕಣ್ಣ ಮದುವೆ ದಿನಾಂಕ ಫಿಕ್ಸ್ ಆಗಿದ್ದು ಇಂಡಸ್ಟಿçಯ ಆಪ್ತರನ್ನೆಲ್ಲಾ ಆಹ್ವಾನಿಸಿದ್ದಾರೆ. ಹಾಗೆಯೇ ಚಿಕ್ಕಣ್ಣ ಇದೀಗ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ದಂಪತಿಗೆ ಆಮಂತ್ರಣ ಪತ್ರಿಕೆ ಕೊಟ್ಟು ಮದುವೆಗೆ ಆಹ್ವಾನಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಪ್ರಸಕ್ತ ಸಾಲಿನ ಎಲ್ಲಾ ಸ್ಟಾರ್ ನಟರ ಜೊತೆ ಚಿಕ್ಕಣ್ಣ ತೆರೆ ಹಂಚಿಕೊಂಡಿದ್ದಾರೆ. ಯಶ್ ಜೊತೆಯೂ ಚಿಕ್ಕಣ್ಣ ಕಾಂಬೋ ಫೇಮಸ್ ಆಗಿದೆ. ಯಶ್ ಸೇರಿದಂತೆ ಉಪೇಂದ್ರ ನಿವಾಸಕ್ಕೂ ತೆರಳಿ ಉಪೇಂದ್ರ, ಪ್ರಿಯಾಂಕಾ ದಂಪತಿಗೆ ಮದುವೆ ಆಮಂತ್ರಣ ಕೊಟ್ಟು ಆಹ್ವಾನಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಟಾಕ್ಸಿಕ್ ಚಿತ್ರ ತೆರೆಗೆ ಬರುತ್ತದೆ. ಈ ಒತ್ತಡದ ನಡುವೆಯೂ ಚಿಕ್ಕಣ್ಣನಿಗೋಸ್ಕರ ಯಶ್ ಸಮಯ ಮಾಡಿಕೊಂಡು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಚಿಕ್ಕಣ್ಣ ಮದುವೆಗೆ ಯಶ್ ಬರ್ತಾರಾ ಇಲ್ವಾ ಅಂತ ಕಾದುನೋಡಬೇಕಿದೆ.

