ದರ್ಶನ್‌ಗೆ (Darshan) ಕೋರ್ಟ್‌ನಲ್ಲಿ ಪದೇ ಪದೆ ಹಿನ್ನಡೆಯಾಗುತ್ತಿದೆ. ಮಾಫಿ ಸಾಕ್ಷಿಗೆ ಆಕ್ಷೇಪಿಸಿ ದರ್ಶನ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಒಂದ್ಕಡೆ ದರ್ಶನ್ ಜೈಲಲ್ಲಿ ಈ ಬೆಳವಣಿಗೆಯಿಂದ ಸಂಕಟದಲ್ಲಿ ಒದ್ದಾಡುತ್ತಿದ್ದರೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಎಲ್ಲಾ ವಿಚಾರಗಳು ದೇವರಿಗೆ ಗೊತ್ತು ಅನ್ನೋ ರೀತಿಯಲ್ಲಿ ಮಾರ್ಮಿಕವಾಗಿ ಸೋಶಿಯಲ್ ಮೀಡಿಯಾ ಸರಣಿ ಪೋಸ್ಟ್ ಹಾಕಿದ್ದಾರೆ.
ವಿಜಯಲಕ್ಷ್ಮಿ ಕಾಮಾಕ್ಯದೇವಿಯ ಭಕ್ತೆ. ಹಲವು ಬಾರಿ ಭೇಟಿ ಕೊಟ್ಟಿದ್ದುಂಟು. ಇದೀಗ ಅದೇ ದೇವಿಯ ಫೋಟೋಗಳನ್ನ ಹಂಚಿಕೊಂಡು `ದೇವರಿಗೆ ಗೊತ್ತು’ ಎಂದು ನಿಗೂಢವಾಗಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ಗೆ `ಎಲ್ಲಿಗೆ ಓಡುವೆ ಓ ಮನುಜ ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆʼ ಎಂಬ ಹಾಡು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಇನ್ನೊಂದು ಭಾವನಾತ್ಮಕ ಬರಹದಲ್ಲಿ ದರ್ಶನ್ ಜೊತೆಗಿನ ಫೋಟೊ ಹಂಚಿಕೊಂಡು ಮತ್ತಷ್ಟು ಕುತೂಹಲದ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಹಿನ್ನೆಡೆಯಾದ ಬಳಿಕ ಬಂದಿರುವ ಸ್ಟೋರಿ ಪೋಸ್ಟ್ ಇದು. ಇದನ್ನೂ ಓದಿ: ಹೈಕೋರ್ಟ್‌ನಲ್ಲೂ ದರ್ಶನ್‌ಗೆ ಹಿನ್ನಡೆ – ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದ ಕೋರ್ಟ್
ಗಾಯ ಇನ್ನೂ ವಾಸಿಯಾಗಿಲ್ಲ. ನೋವೂ ಇನ್ನೂ ಅಸಹನೀಯವಾಗಿಯೇ ಇದೆ. ಅರ್ಥವಾಗದ ವಿಷಯಗಳನ್ನು ಜಗತ್ತು ತನ್ನ ರೀತಿಯಲ್ಲಿ ತೀರ್ಪು ನೀಡಬಹುದು. ಆದರೆ, ನಾನು ನನ್ನನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಈಗ ನಾನು ಕೇವಲ ನಗುತ್ತೇನೆ. ಉಳಿದುದ್ದನ್ನು ಕಾಲಕ್ಕೂ ಹಾಗೂ ದೇವರಿಗೂ ಬಿಟ್ಟಿದ್ದೇನೆ. ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಬಿರುಸಿನ ಟ್ರಯಲ್ ನಡೆಯುತ್ತಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಪ್ರದೋಷ್ ಮಾಫಿ ಸಾಕ್ಷಿ ಈ ಪ್ರಕರಣದಲ್ಲಿ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೆಲ್ಲಾ ಬೆಳವಣಿಗೆ ಕುರಿತೇ ವಿಜಯಲಕ್ಷ್ಮಿ ಮಾರ್ಮಿಕ ಪೋಸ್ಟ್ ಹಾಕಿರಬಹುದೇ ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ಆಗ್ತಿರೋ ಚರ್ಚೆ. ಇದನ್ನೂ ಓದಿ: ದರ್ಶನ್‌ಗೆ ತಾತ್ಕಾಲಿಕ ರಿಲೀಫ್ – ಒಂದು ವಾರ ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸದಂತೆ ಕೋರ್ಟ್ ಸೂಚನೆ

