ಪ್ರೀತಿ ಪ್ರೇಮದ ಜತೆ, ಒಬ್ಬ ಮಗಳು ತಂದೆಗೋಸ್ಕರ ಏನಾದರೂ ಮಾಡಲು ಸಿದ್ದವಾದರೆ ಏನಾಗಬಹುದು ಎಂಬ ಅದ್ಭುತ ಕಥಾಹಂದರ ಇಟ್ಟುಕೊಂಡು ತೆರೆಗೆ ಬರುತ್ತಿರುವ ಚಿತ್ರ ಪ್ಯಾರ್. ಎಸ್.ಎಂ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್.ಎಸ್.ನಾಗಶ್ರೀ ಅವರ ನಿರ್ಮಾಣದ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಈ ಚಿತ್ರದ ಟ್ಯಾಬ್ಲೋ ಪ್ರಚಾರ ವಾಹನಕ್ಕೆ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ಗಣಪತಿ ದೇವಾಲಯದ ಮುಂದೆ ಚಾಲನೆ ನೀಡಲಾಯಿತು. ದೇವಸ್ಥಾನದ ಎದುರು ಸಿನಿಮಾ ಪ್ರಚಾರದ ಟ್ಯಾಬ್ಲೋ ವಾಹನಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ನಿರ್ಮಾಪಕಿ ಹೆಚ್.ಎಸ್.ನಾಗಶ್ರೀ ಒಂದೊಳ್ಳೆ ಚಿತ್ರವನ್ನು ಜನರಿಗೆ ತಲುಪಿಸಬೇಕು ಎಂದರೆ ರಾಜ್ಯಾದ್ಯಂತ ಸಂಚರಿಸಿ ಅದರ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡಬೇಕಿದೆ. ನಮ್ಮ ಚಿತ್ರದಲ್ಲಿ ಒಳ್ಳೆಯ ಫ್ಯಾಮಿಲಿ ಕಂಟೆಂಟ್ ಇದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ, ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂದರು. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ತೆಲುಗು ನಟ ನಾಗ ಮಹೇಶ್
ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಿಶ್ವಿನ್, ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ನಟಿಸಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.

