– `ಸ್ವಯಂ-ಗಡೀಪಾರು’ ಸಂದೇಶದ ಮೂಲಕ ವಲಸಿಗರಿಗೆ ಟ್ರಂಪ್ ಸರ್ಕಾರ ಎಚ್ಚರಿಕೆ
– ಸಿಖ್ ಸಂಘಟನೆಗಳಿಂದ ತೀವ್ರ ಖಂಡನೆ
ವಾಷಿಂಗ್ಟನ್: ಅಮೆರಿಕದ ಟ್ರಂಪ್ ಆಡಳಿತದ ವಲಸೆ ನೀತಿಯ ಭಾಗವಾಗಿ ನಡೆಸಲಾಗುತ್ತಿರುವ ‘Self-Deport’ (ಸ್ವಯಂ ಗಡೀಪಾರು) ಅಭಿಯಾನ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ AI- ರಚಿತ ಪೋಸ್ಟರ್‌ವೊಂದು ಭಾರತೀಯ ಟ್ರಕ್ ಚಾಲಕರನ್ನ, ಅದ್ರಲ್ಲೂ ಸಿಖ್ ಸಮುದಾಯವನ್ನ ಗುರಿಯಾಗಿಸಿಕೊಂಡಿದೆ ಅನ್ನೋ ಆರೋಪ ಕೇಳಿಬಂದಿದೆ.
If you approach this nation with hostile intent, know this. We will defend ourselves. We will defend Americanism. We will defend our home.
Report Illegal Aliens on American Roads: 866-347-2423 pic.twitter.com/gJcDPA4CTH
— Homeland Security (@DHSgov) September 9, 2026
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟರ್ ಅನ್ನು, ಸಿನಿಮಾ ಪೋಸ್ಟರ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ‘Transformers: Age of Deportations’ ಎಂಬ ಶೀರ್ಷಿಕೆಯಿರುವ ಚಿತ್ರದಲ್ಲಿ ಡಿಹೆಚ್‌ಎಸ್ ಬ್ಯಾಡ್ಜ್ ಧರಿಸಿರುವ AI-ಸೃಷ್ಟಿತ ರೋಬೋಟ್‌ವೊಂದು ಗಡ್ಡಧಾರಿ ವ್ಯಕ್ತಿಯ ಎದುರು ನಿಂತಿರುವಂತೆ ತೋರಿಸಲಾಗಿದೆ.
ಪೋಸ್ಟರ್‌ನ ಮಧ್ಯಭಾಗದಲ್ಲಿʻAmerica for Americans. Get off our roads; you don’t know how to drive, Mr Singhʼ ಎಂಬ ಸಂದೇಶ ನೀಡಲಾಗಿದೆ. ಅಂದ್ರೆ ʻಅಮೆರಿಕ ಅಮೆರಿಕನ್ನರಿಗಾಗಿ. ನಮ್ಮ ರಸ್ತೆಯಿಂದ ತೊಲಗಿ, ಮಿಸ್ಟರ್ ಸಿಂಗ್. ನಿಮಗೆ ವಾಹನ ಚಾಲನೆ ಮಾಡಲು ಗೊತ್ತಿಲ್ಲʼ ಎಂಬ ರೀತಿಯ ಸಂದೇಶ ನೀಡಲಾಗಿದೆ.
ಇದರೊಂದಿಗೆ, ದಾಖಲೆಗಳಿಲ್ಲದೇ ಮೆರಿಕದಲ್ಲಿ ನೆಲೆಸಿರುವ ವಾಣಿಜ್ಯ ವಾಹನ ಚಾಲಕರಿಗೆ ‘Self-deport or find out’ (ಸ್ವಯಂ-ಗಡೀಪಾರು ಅಥವಾ ಕಂಡುಹಿಡಿಯಿರಿ) ಎಂಬ ಎಚ್ಚರಿಕೆಯನ್ನೂ ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ನೀಡಿದೆ. ‘ಅಮೆರಿಕದ ರಸ್ತೆಗಳಲ್ಲಿ ಅಕ್ರಮ ವಲಸಿಗರಿದ್ದಾರೆ’ ಎಂದು ವರದಿ ಮಾಡಲು ಫೆಡರಲ್ ಹಾಟ್‌ಲೈನ್ ಮಾಹಿತಿಯನ್ನೂ ಪೋಸ್ಟರ್‌ನಲ್ಲಿ ಸೇರಿಸಲಾಗಿದೆ.
https://t.co/Klx1oLLjM6 pic.twitter.com/PfmZp21bxr
— Homeland Security (@DHSgov) September 9, 2026
ಸಿಖ್ ಸಂಘಟನೆಗಳ ಆಕ್ರೋಶ
ಪೋಸ್ಟರ್‌ನಲ್ಲಿ ಬಳಸಿರುವ ‘ಮಿಸ್ಟರ್ ಸಿಂಗ್ʼ ಎಂಬ ಉಲ್ಲೇಖವೇ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಿಖ್ ಅಮೆರಿಕನ್ನರ ಪರವಾಗಿ ಹೋರಾಡುತ್ತಿರುವ ಅಮೆರಿಕದ ನಾಗರಿಕ ಹಕ್ಕುಗಳ ಸಂಘಟನೆ ʻSikh Coalitionʼ, ಭದ್ರತಾ ಇಲಾಖೆಯ ಈ ಅಭಿಯಾನವನ್ನ ತೀವ್ರವಾಗಿ ಖಂಡಿಸಿದೆ.
‘Singh’ (ಸಿಂಗ್) ಎಂಬುದು ಅಮೆರಿಕದಲ್ಲಿರುವ ಲಕ್ಷಾಂತರ ಸಿಖ್ಖರ ಕೊನೆಯ ಹೆಸರು. ಇದರ ಅರ್ಥ ‘ಸಿಂಹ’. ಸರ್ಕಾರವೇ ನಮ್ಮನ್ನು ಶತ್ರುಗಳಂತೆ ಬಿಂಬಿಸುತ್ತಿದ್ದರೂ, ಸಿಖ್ಖರು ಅಂತ ಗುರುತಿಸಿಕೊಳ್ಳೋದ್ರಲ್ಲಿ ಹೆಮ್ಮೆ ಪಡುತ್ತೇವೆ, ಎಂದಿಗೂ ನಾವು ಧೈರ್ಯ ಕಳೆದುಕೊಳ್ಳೋದಿಲ್ಲ ಎಂದು ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದೆ.
ಅಮೆರಿಕದ ಟ್ರಕ್ಕಿಂಗ್ ಉದ್ಯಮದಲ್ಲಿಯೂ ಸಿಖ್ ಸಮುದಾಯದವರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ದೇಶದ ದೂರದ ಪ್ರಯಾಣದ ಟ್ರಕ್ ಚಾಲಕರ ಪೈಕಿ ಸಿಖ್ ಚಾಲಕರ ಪ್ರಮಾಣವೂ ಹೆಚ್ಚಿದೆ ಎಂದು ಸಂಘಟನೆ ಹೇಳಿಕೊಂಡಿದೆ.
ಅಲ್ಲದೇ ಹಿಂದೂ ಅಮೆರಿಕನ್ ಫೌಂಡೇಷನ್ ಕೂಡ ಹೋಮ್‌ಲ್ಯಾಂಡ್ ಭದ್ರತಾ ಇಲಾಖೆಯ ಪೋಸ್ಟರ್‌ಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ವಿಚಾರದ ಬಗ್ಗೆ ತನಿಖೆಗೆ ಆಗ್ರಹಿಸಿದೆ.

ಟ್ರಂಪ್ ಸರ್ಕಾರ ʻಸ್ವಯಂ ಗಡೀಪಾರುʼ ಅಭಿಯಾನವೇನು?
ಅಕ್ರಮ ವಲಸಿಗರು ಸ್ವಯಂಪ್ರೇರಣೆಯಿಂದ ಅಮೆರಿಕ ತೊರೆಯುವಂತೆ ಪ್ರೋತ್ಸಾಹಿಸುವುದು ಟ್ರಂಪ್ ಆಡಳಿತದ ವಲಸೆ ನೀತಿಯ ಪ್ರಮುಖ ಭಾಗವಾಗಿದೆ. ಇದಕ್ಕಾಗಿ ಆಡಳಿತವು ಸಿಬಿಪಿ ಹೋಮ್ ಕಾರ್ಯಕ್ರಮವನ್ನ ಪ್ರಚಾರ ಮಾಡುತ್ತಿದೆ. ಅರ್ಹ ವಲಸಿಗರು ಈ ಕಾರ್ಯಕ್ರಮದ ಮೂಲಕ ಸ್ವಯಂಪ್ರೇರಿತವಾಗಿ ಅಮೆರಿಕ ತೊರೆಯಲು ವ್ಯವಸ್ಥೆ ಮಾಡಿಕೊಳ್ಳಬಹುದು. ಪ್ರಯಾಣಕ್ಕೆ ನೆರವು ನೀಡುವುದರ ಜೊತೆಗೆ, ಸ್ವಯಂಪ್ರೇರಿತವಾಗಿ ದೇಶ ತೊರೆಯುವವರಿಗೆ 2,600 ಡಾಲರ್ ಹಣಕಾಸು ನೆರವು ನೀಡುವ ವ್ಯವಸ್ಥೆಯನ್ನೂ ಕಾರ್ಯಕ್ರಮ ಹೊಂದಿದೆ.
ಈ ಅಭಿಯಾನದ ಪ್ರಚಾರಕ್ಕೆ ಭದ್ರತಾ ಇಲಾಖೆ ತನ್ನ ಸೋಷಿಯಲ್ ಮೀಡಿಯಾದಲ್ಲಿ ಸಿನಿಮೀಯ ಮಾದರಿಯ ವಿಡಿಯೋ ಹಾಗೂ ಪಾಪ್ ಕಲ್ಚರ್ ಮತ್ತು ವೈರಲ್ ವಿಷಯಗಳನ್ನ ಬಳಸುತ್ತಿದೆ. ಇದೇ ಅಭಿಯಾನದ ಭಾಗವಾಗಿ ವಾಣಿಜ್ಯ ವಾಹನಗಳ ಅಪಘಾತಗಳನ್ನ ಉಲ್ಲೇಖಿಸುವ ವಿಡಿಯೋಗಳು ಹಾಗೂ ಅಮೆರಿಕದತ್ತ ಬರುತ್ತಿರುವವರನ್ನ ‘hostile intent’ ಹೊಂದಿರುವವರಂತೆ ಎಚ್ಚರಿಸುವ ಸಂದೇಶಗಳನ್ನೂ ಇಲಾಖೆ ಹಂಚಿಕೊಂಡಿದೆ.

