ಪ್ರೀತಿಯ ಹುಡುಗ
ನಮ್ಮೂರಿಗೆ ಬಂದ್ರೂ ಯಾಕೆ ನೀನು ನನ್ನನ್ನ ನೋಡೋಕೆ ಬರಲ್ಲ? ನಿನ್ನನ್ನ ನೋಡೋಕೆ ನನ್ನ ಮನಸ್ಸು ಚಡಪಡಿಸೋದು ಒಂಚೂರು ನಿನ್ನ ಹೃದಯಕ್ಕೆ ತಲಪಲ್ವಾ? ನನ್ನ ಪ್ರೀತಿ ನಿನಗೆ ಅರ್ಥ ಆಗದೇ ಇರೋ ಅಷ್ಟು ದಡ್ಡನ ನೀನು?
ಮಕ್ಕಳಿಗೆಲ್ಲ ಟೀಚರ್ ಪೆಟ್ಟು ಕೊಟ್ಟು ಪಾಠ ಕಲಿಸಿದಂಗೆ ಪ್ರೇಮ ಪಾಠ ಮಾಡ್ಬೇಕಾ ನಿನಗೆ ನಾನು? ಅದೇ ನೀನು ಯಾವಾಗಲೂ ಹೇಳ್ತಾ ಇರ್ತಿಯಲ್ಲ.. ಮುದ್ದಿನ ಪೆಟ್ಟು.. ಅದನ್ನೇ! ಇದನ್ನೂ ಓದಿ: ನನಗೀಗ ಜೀವನ ಅಂತ ಬೇರೆ ಏನಿಲ್ಲ ಆಶಾ..!
ಹೌದು, ಮೊನ್ನೆ ಜಾತ್ರೇಲಿ ನಡೆದ ಯಕ್ಷಗಾನದಲ್ಲಿ ನೀನೆಲ್ಲೋ ಸ್ತ್ರೀ ಪಾತ್ರ ಮಾಡ್ತಿಯಾ ಅಂದ್ಕೊಂಡಿದ್ದೆ ನಾನು. ಯಾಕೆ ಹಂಗೆ ಗಡ್ಡ ಮೀಸೆ ಬೋಳ ಮಾಡ್ಕೊಂಡು ಓಡಾಡ್ತಿದ್ದೆ. ನನಗಂತೂ ಕಲ್ಲಲ್ಲಿ ಹೊಡಿಬೇಕು ಅನ್ಸಿತ್ತು. ಗಡ್ಡ ತೆಗಿಬೇಡ ನೀನು. ಇನ್ನೊಂದ್ಸಲ ಗಡ್ಡ ಮೀಸೆ ತೆಕ್ಕೊಂಡು ಕಣ್ಣಿಗೆ ಬಿದ್ರೆ ಗೊತ್ತಲ್ಲ.. ಕಲ್ಲಲ್ಲಿ ಹೊಡಿಯೋದೆ.

ಕನಸಲ್ಲಿ ಅದೆಷ್ಟು ಕಾಡ್ತಿಯ ಗೊತ್ತಾ? ಆ ಗಡ್ಡ ಅದೆಷ್ಟು ಪ್ರೇಮ ಕಚಗುಳಿ ಕೊಡುತ್ತೆ ಗೊತ್ತಾ? ಹೀಗೆ ನೀನು ಬೋಳ ಮುಖ ತಗೊಂಡು ಬಂದ್ರೆ ನಂಗೊಂಚೂರು ಇಷ್ಟ ಆಗಲ್ಲ. ಮುಖದ ಮೇಲೆ ಪಟಪಟ ಹೊಡಿಬೇಕು ಅನ್ಸತ್ತೆ. ಇನ್ನೊಂದ್ಸಲ ಗಡ್ಡ – ಗಿಡ್ಡ ತೆಗಿದಿಯಾ ನೋಡು, ಸರಿ ಇರಲ್ಲ.. ಹುಷಾರ್! ಇದನ್ನೂ ಓದಿ: ನನ್ನನ್ನು ನಿನಗೊಪ್ಪಿಸಿದ ಮುಂಗಾರು ಮಿಂಚಿಗೊಂದು ಥ್ಯಾಂಕ್ಸ್!
ನನಗೆ ಇಷ್ಟೆಲ್ಲ ಆಸೆ, ಕನಸು.. ಮುದ್ದು ಕೋಪ ನಿನ್ನ ಮೇಲೆ. ನೀನೇ ನೆಟ್ಟಗೆ ಓಡಾಡ್ತೀಯ, ನಾನು ಎದುರಿಗೆ ಬಂದ್ರೂ ಚೂರು ನೋಡಲ್ಲ. ಏನಾಗಿದೆ ನಿನಗೆ..? ನಿನ್ನನ್ನ ನಾನು ತುಂಬಾ ಮಿಸ್ ಮಾಡ್ಕೊಳ್ತಾ ಇದಿನಿ ಕಣೋ. ನೀನಂದ್ರೆ ನನಗೆ ತುಂಬಾ ಇಷ್ಟ.. ನಿನಗೂ ನಾನಂದ್ರೆ ಇಷ್ಟ.. ನನಗೊತ್ತು. ಈ ಮಾತನ್ನ ಸುಳ್ಳು ಮಾಡ್ಬೇಡ.
ಒಮ್ಮೊಮ್ಮೆ ಭಯ ಆಗುತ್ತೆ ಕಣೋ.. ನಾನಿಲ್ಲಿ ಎಂತೆಂತ ಕನಸನ್ನೆಲ್ಲ ದೋಣಿಗೆ ತುಂಬೋದು.. ಅದೆಲ್ಲಿ ಮುಳುಗಿ ಬಿಡತ್ತೋ ಅಂತ. ಹೌದು ನನ್ನೆಲ್ಲ ಕನಸಲ್ಲೂ ಇದ್ದವನು ನೀನು. ನಿಜ ಬದುಕಿನಲ್ಲಿ ಸಿಕ್ತಿಯಾ ಅಲ್ವಾ? ನೀನಿಲ್ಲ ಅಂದ್ರೆ.. ಊಹಿಸಿಕೊಳ್ಳೋಕು ಕಷ್ಟ.. ಬಹುಶಃ ಸತ್ತೋಗ್ಬಿಡ್ತಿನೋ ಏನೋ..? ನನ್ನನ್ನ ಬಿಟ್ಟು ಎಲ್ಲೂ ಹೋಗ್ಬೇಡ ಪ್ಲೀಸ್. ನಿನ್ನ ಎದೆಗೆ ಈ ಪತ್ರ ತಲಪಿದ್ರೆ ನನ್ನನ್ನ ಬಂದು ನೋಡು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ನೀ ಬರುವ ದಾರಿ ಕಾಯುವ
ನಿನ್ನ ಮನದರಸಿ

