ನವದೆಹಲಿ: ದೆಹಲಿ ಮತ್ತು ಎನ್‌ಸಿಆರ್ (Delhi-NCR Rain) ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ರಾತ್ರಿಯಿಂದ ಸುರಿದ ಮಳೆಯಿಂದಾಗಿ ಹಲವು ಕಡೆ ನೀರು ತುಂಬಿ, ಮರಗಳು ಉರುಳಿ, ರಸ್ತೆಗಳು ಸ್ಥಗಿತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನೋಯ್ಡಾ, ಘಾಜಿಯಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗಿದೆ.
ಬೆಳಗ್ಗಿನಿಂದಲೇ ನೋಯ್ಡಾದಲ್ಲಿ ಮಳೆಯಿಂದಾಗಿ ಜನರು ಕಚೇರಿಗೆ ತಲುಪುವಲ್ಲಿ ತೊಂದರೆ ಎದುರಿಸಿದರು. ಘಾಜಿಯಾಬಾದ್‌ನ ಪಂಚಶೀಲ್ ವೆಲ್ಲಿಂಗ್ಟನ್ ಬಾಹ್ಯ ಗೋಡೆ ಉರುಳಿಬಿದ್ದಿದೆ. ಶಾಲಿಮಾರ್ ಗಾರ್ಡನ್‌ನಲ್ಲಿ ಜಿಮ್ ಮೇಲಿನ ಅರ್ಸಿಸ್ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಕರಣ್ ಗೇಟ್ ಚೌಕಿಯ ಸಮೀಪ ರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಕೋಝಿಕ್ಕೋಡ್ ರೈಲು ನಿಲ್ದಾಣದ 137 ವರ್ಷ ಹಳೆಯ ಗಡಿಯಾರ ಗೋಪುರ ಕುಸಿತ
ಲೋನಿ ಪ್ರದೇಶದ ಅಂಕುರ್ ವಿಹಾರ್ ಎಸಿಪಿ ಕಚೇರಿ ಹೊರಗೆ ಅಜ್ಞಾತ ವ್ಯಕ್ತಿಯ ಶವ ನೀರಿನಲ್ಲಿ ತೇಲುತ್ತಿದ್ದುದು ಕಂಡುಬಂದಿದೆ. ಮಳೆಯಿಂದಾಗಿ ನೀರಿನ ಪ್ರವಾಹದಲ್ಲಿ ಶವ ತೇಲಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ವಿದ್ಯುತ್ ಸರಬರಾಜು ನಿಲ್ಲಿಸಲಾಗಿದೆ. ನಂದಗ್ರಾಮದ ಪುಸ್ತಕಾಲಯದಲ್ಲೂ ನೀರು ತುಂಬಿದೆ. ಮಸೂರಿ ಎಂಜಿ ರೋಡ್ ಸಮೀಪ ಹಲವು ಮನೆಗಳಲ್ಲಿ ನೀರು ತುಂಬಿದೆ.
ನೋಯ್ಡಾದ ವಸುಂಧರಾ ಸೆಕ್ಟರ್ 13ರಲ್ಲಿ ರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿದೆ. ಸುಮಾರು 20 ಅಡಿ ಆಳದ ಗುಂಡಿಗೆ ಕಾರು ಮತ್ತು ಸ್ಕೂಟಿ ಬಿದ್ದವು. ವಿದ್ಯುತ್ ಕಂಬವೂ 10 ಅಡಿ ಆಳಕ್ಕೆ ಕುಸಿದಿದೆ. ಸ್ಥಳೀಯರು ಕ್ರೇನ್ ಸಹಾಯದಿಂದ ವಾಹನಗಳನ್ನು ಎತ್ತಿ ತೆಗೆದಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಗೆ 1.40 ಲಕ್ಷ ಕ್ಯೂಸೆಕ್ ನೀರಿನ ಹರಿವು; ಕುಡಚಿ-ಉಗಾರ ಸೇತುವೆ ಮುಳುಗಡೆ ಹಂತಕ್ಕೆ
ದೆಹಲಿಯ ಈಸ್ಟ್ ಆಫ್ ಕೈಲಾಶ್‌ನ ಇಸ್ಕಾನ್ ದೇವಾಲಯ ಸಮೀಪ ಮುಖ್ಯ ರಸ್ತೆಯಲ್ಲಿ ಮರ ಉರುಳಿ ಟ್ರಾಫಿಕ್ ಜಾಮ್ ಉಂಟಾಗಿತು. ಗೋವಿಂದಪುರಿ, ತುಗಲಕಾಬಾದ್, ವಿಕಾಸ್ ಮಾರ್ಗ್, ಮಹರೌಲಿ-ಬದರಪುರ ರಸ್ತೆ, ಸಂಗಮ್ ವಿಹಾರ್‌ನಲ್ಲಿ ನೀರು ತುಂಬಿದೆ. ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ರೋಹಿಣಿ ಸೆಕ್ಟರ್-16ರಲ್ಲಿ ನಿರ್ಮಾಣದಲ್ಲಿದ್ದ ಕಟ್ಟಡ ಧ್ವಂಸವಾಗಿ ಮೂವರು ಮೃತಪಟ್ಟಿದ್ದಾರೆ.
