ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಸಮಂತಾ (Samantha) ಸದ್ಯಕ್ಕಂತೂ ಬೇಬಿ ಬಂಪ್ ಲುಕ್‌ನೊಂದಿಗೆ ಕಂಗೊಳಿಸುತ್ತಿದ್ದಾರೆ.
ಗರ್ಭಿಣಿಯಾಗಿದ್ದರೂ ಸಹಜ ಜೀವನ ನಡೆಸುತ್ತಿರುವ ಸಮಂತಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫಾಲೋವರ್ಸ್‌ಗಳೊಂದಿಗೆ ಖುಷಿಯ ಕ್ಷಣ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪತಿ ರಾಜ್ ನಿಧಿಮೋರು ಜೊತೆ ಬೇಬಿಮೂನ್ (Babymoon) ಪ್ರವಾಸದಲ್ಲಿರುವ ಸಮಂತಾ ಸುಂದರ ಕ್ಷಣಗಳ ಒಂದಷ್ಟು ಫೋಟೋ, ವೀಡಿಯೋಗಳನ್ನ ಹಂಚಿಕೊಂಡಿದ್ದಾರೆ. `ಜಸ್ಟ್ ಅಸ್’ ಎಂದು ಹೇಳುವ ಮೂಲಕ ಪೋಸ್ಟ್ ಹಾಕಿದ್ದಾರೆ.

ಕೆಲವೇ ತಿಂಗಳಲ್ಲಿ ಸಮಂತಾ ಮಡಿಲಿಗೆ ಮಗು ಆಗಮಿಸಲಿದೆ. ಹೀಗಾಗಿ ಇತ್ತೀಚೆಗೆ ಟ್ರೆಂಡ್ ಆಗಿರೋ ಬೇಬಿಮೂನ್ ಪ್ರವಾಸ ಮಾಡಿದ್ದಾರೆ ಸಮಂತಾ. ಪತಿ ಹಾಗೂ ಗರ್ಭಿಣಿ ಪತ್ನಿಯ ಖಾಸಗಿ ಕ್ಷಣದ ಪ್ರವಾಸವೇ ಬೇಬಿಮೂನ್ ಆಗಿದ್ದು, ಎರಡನೇ ತ್ರೈಮಾಸಿಕದಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಪ್ರವಾಸದಲ್ಲಿ ಹೆಚ್ಚಾಗಿ ರೆಸ್ಟೋರೆಂಟ್‌ನ್ನೇ ಕೇಂದ್ರೀಕರಿಸಿರುವಂತಿರೋ ಸಮಂತಾ ವಿಭಿನ್ನ ಖಾದ್ಯದ ಫೋಟೋ ಹಂಚಿಕೊಂಡಿದ್ದಾರೆ. ಸರಳ, ಫ್ಯಾಂಟಸಿ ಅಡ್ವೆಂಚರ್‌ನ್ನು ಅನುಭವಿಸಿದ್ದಾರೆ. ಜೊತೆಗೆ ಬೇಬಿ ಬಂಪ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.

ಸಮಂತಾ ಖುಷಿಯ ಕ್ಷಣಗಳಿಗೆ ಸೋಶಿಯಲ್ ಮೀಡಿಯಾದಲ್ಲಿ 1.6 ಮಿಲಿಯನ್ ಲೈಕ್ಸ್ ಬಂದಿರೋದು ವಿಶೇಷ. ಸಮಂತಾ ಮುಖದಲ್ಲಿ ಭರ್ಜರಿ ನಗು ಮೂಡಿದ್ದು, ತಮನ್ನಾ ಭಾಟಿಯಾ, ಕಿಯಾರಾ ಅಡ್ವಾನಿ, ಹನ್ಸಿಕಾ ಮೋಟ್ವಾನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.


