ರಾಜ್ಯದಾದ್ಯಂತ ಮಳೆ ಮುಂದುವರಿಯಲಿದ್ದು, ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ದಕ್ಷಿಣ, ಉತ್ತರ ಒಳನಾಡು ಪ್ರದೇಶಗಳ ಬಹುತೇಕ ಕಡೆ ಮಳೆಯಾಗುವ ಸಂಭವವಿದೆ. ಹಲವು ಕಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿಗೂ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 24ರಂದು ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತಗೊ0ಡ ಪರಿಣಾಮ ಬಾಗಲಕೋಟೆ, ಗದಗ, ಧಾರವಾಡದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 32-22
ಮಂಗಳೂರು: 32-27
ಶಿವಮೊಗ್ಗ: 33-24
ಬೆಳಗಾವಿ: 33-24
ಮೈಸೂರು: 33-23

ಮಂಡ್ಯ: 33-22
ಮಡಿಕೇರಿ: 28-21
ರಾಮನಗರ: 33-22
ಹಾಸನ: 31-22
ಚಾಮರಾಜನಗರ: 33-23
ಚಿಕ್ಕಬಳ್ಳಾಪುರ: 33-22

ಕೋಲಾರ: 33-22
ತುಮಕೂರು: 33-22
ಉಡುಪಿ: 33-27
ಕಾರವಾರ: 32-29
ಚಿಕ್ಕಮಗಳೂರು: 29-21
ದಾವಣಗೆರೆ: 34-24

ಹುಬ್ಬಳ್ಳಿ: 33-24
ಚಿತ್ರದುರ್ಗ: 33-23
ಹಾವೇರಿ: 33-24
ಬಳ್ಳಾರಿ: 37-25
ಗದಗ: 34-23
ಕೊಪ್ಪಳ: 36-24

ರಾಯಚೂರು: 38-27
ಯಾದಗಿರಿ: 39-27
ವಿಜಯಪುರ: 38-26
ಕಲಬುರಗಿ: 39-27
ಬಾಗಲಕೋಟೆ: 36-25
