ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮರು ಮತದಾನ ನಡೆದಿದ್ದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ (Debangshu Panda) ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಟಿಎಂಸಿಯ (TMC) ಭದ್ರಕೋಟೆಯಾಗಿದ್ದ ಫಾಲ್ಟಾದಲ್ಲಿ ಈ ಬಾರಿ ಬಿಜೆಪಿಯ (BJP) ದೆಭಾಂಶು ಪಾಂಡಾ ಅವರು 1,09,021 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದನ್ನೂ ಓದಿ: Falta Election Result| 30 ಸಾವಿರ ಮತಗಳ ಮುನ್ನಡೆಯಲ್ಲಿ ಬಿಜೆಪಿ, 4ನೇ ಸ್ಥಾನಕ್ಕೆ ಜಾರಿದ ಟಿಎಂಸಿ
ಪಾಂಡಾ ಅವರು 1 ಲಕ್ಷ 49 ಸಾವಿರದ 666 ಮತ ಪಡೆದರೆ, ಪ್ರತಿಸ್ಪರ್ಧಿ ಸಿಪಿಐಎಂ ಅಭ್ಯರ್ಥಿ ಶಂಭುನಾಥ್ ಕುರ್ಮಿ 40,645 ವೋಟ್ ಪಡೆದು ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ರಜಾಕ್ ಮೊಲ್ಲಾ ಅವರಿಗೆ 10,084 ಮತಗಳು ಲಭಿಸಿದೆ.

ಇನ್ನು, ಮರುಮತದಾನಕ್ಕಿಂತ 2 ದಿನಗಳ ಮೊದಲೇ ಸ್ಪರ್ಧಾ ಕಣದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ಹಿಂದೆ ಸರಿದಿದ್ದರು. ಇದನ್ನೂ ಓದಿ: ತೈಲ ದರ ಮತ್ತೆ ಏರಿಕೆಗೆ ವಿಪಕ್ಷಗಳ ಆಕ್ರೋಶ – `ಮೋದಿ ಹಣದುಬ್ಬರ ಮನುಷ್ಯ’ ಅಂತ ಕಾಂಗ್ರೆಸ್ ಕಿಡಿ
ಬಂಗಾಳದಲ್ಲಿ 2ನೇ ಹಂತದ ಮತದಾನದ ವೇಳೆ ಇವಿಎಂ (EVM) ಯಂತ್ರಗಳಲ್ಲಿ ಅಕ್ರಮ ಅಥವಾ ತಿರುಚುವಿಕೆ ಕಂಡುಬಂದ ಹಿನ್ನೆಲೆ ಫಾಲ್ಟಾದ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಭಾರತೀಯ ಚುನಾವಣಾ ಆಯೋಗ ಆದೇಶ ಮಾಡಿತ್ತು.
