ನವದೆಹಲಿ: ದೇಶಾದ್ಯಂತ ಕಳೆದ 10 ದಿನಗಳಲ್ಲಿ 3ನೇ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ (Petrol, Diesel Price Hike). ಶನಿವಾರ ಮತ್ತೆ ಪೆಟ್ರೋಲ್ ದರ 87 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 91 ಪೈಸೆ ಹೆಚ್ಚಳ ಆಗಿದೆ. ಈ ಹಿನ್ನೆಲೆ ಕಾಂಗ್ರೆಸ್ (Congress), ಟಿಎಂಸಿ ಹಾಗೂ ಆಮ್ ಆದ್ಮಿ ಪಾರ್ಟಿಯ ನಾಯಕರು ಕೇಂದ್ರದ ವಿರುದ್ಧ ಮುಗಿ ಬಿದ್ದಿದ್ದಾರೆ.
पेट्रोल अब हुआ ₹100 पार,
अबकी बार…
जनता की कमाई पर किश्तों में लूटमार !पेट्रोल-डीज़ल पर रोज़ाना ₹1000 करोड़ का केंद्रीय टैक्स लगाकर भाजपा का पेट नहीं भरा…
अंतर्राष्ट्रीय दाम जब कम थे तब जनता को फ़ायदा नहीं पहुँचाया, उन्हें जमकर लूटा।जब Crisis आई तो, चुनाव में जुट गए,… pic.twitter.com/EjkikgGzFK
— Mallikarjun Kharge (@kharge) May 23, 2026
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರತಿಕ್ರಿಯಿಸಿ, ಈ ಬಾರಿ ಪೆಟ್ರೋಲ್ ದರ 100 ರೂ. ದಾಟಿದೆ. ಸಾರ್ವಜನಿಕರ ಗಳಿಕೆಯನ್ನು ಕಂತುಗಳಲ್ಲಿ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ. ಪೆಟ್ರೋಲ್ – ಡೀಸೆಲ್ ಮೇಲೆ ದಿನಕ್ಕೆ 1,000 ಕೋಟಿ ರೂ. ತೆರಿಗೆ ವಿಧಿಸಿದ ನಂತರವೂ ಬಿಜೆಪಿಯ ಹಸಿವು ಕಡಿಮೆಯಾಗಿಲ್ಲ. ಅಂತಾರಾಷ್ಟ್ರೀಯ ಬೆಲೆಗಳು ಕಡಿಮೆಯಾದಾಗ, ಸರ್ಕಾರ ದರ ಕಡಿಮೆ ಮಾಡಿ ಜನರಿಗೆ ಪ್ರಯೋಜನವಾಗುವ ಕೆಲಸ ಮಾಡುವುದಿಲ್ಲ. ಬದಲಾಗಿ ಜನರ ದುಡ್ಡನ್ನ ಲೂಟಿ ಹೊಡೆಯುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಬಿಕ್ಕಟ್ಟು ಎದುರಾದಾಗ ಬಿಜೆಪಿಯವರು ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು. ಅದಾದ ಬಳಿಕ ಮಿತವ್ಯಯದ ಬೋಧನೆ ಮಾಡಿದರು. ಕೇವಲ 8 ದಿನಗಳಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆಯನ್ನ ಮೂರು ಬಾರಿ ಹೆಚ್ಚಿಸಿದ್ದಾರೆ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ ಎಂದು ಹೇಳುತ್ತಾರೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದಾಗ ಪ್ರಧಾನಿ ಮೋದಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿ ನಿದ್ದೆ ಮಾಡುತ್ತಿದ್ದರು. ಆಗ ಇತರ ದೇಶಗಳು ತಮ್ಮ ನಾಗರಿಕರಿಗೆ ಪರಿಹಾರ ಒದಗಿಸುತ್ತಿದ್ದವು ಎಂದು ಕಿಡಿಕಾರಿದ್ದಾರೆ.
भारत की जनता से @ArvindKejriwal जी का सवाल 🇮🇳
पूरे देश में तेल-गैस की बढ़ती कीमतों और किल्लत से लोग परेशान हैं। रूस और ईरान भारत को सस्ते दामों पर तेल और गैस देने को तैयार हैं। क्या भारत सरकार को सस्ता तेल और गैस खरीदकर जनता को राहत देनी चाहिए?#KejriwalOnFuelCrisis pic.twitter.com/fdFNnFThLr
— AAP (@AamAadmiParty) May 23, 2026
ಮುಂದುವರಿದು… ಇಟಲಿ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ, ತನ್ನ ನಾಗರಿಕರಿಗೆ ಪರಿಹಾರ ನೀಡಿದೆ. ಆಸ್ಟ್ರೇಲಿಯಾ ಅಬಕಾರಿ ಸುಂಕ ಕಡಿಮೆ ಮಾಡಿ, ನಾಗರಿಕರಿಗೆ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ಸುಮಾರು 17 ರೂ.ಗಳಷ್ಟು ಕಡಿಮೆ ಮಾಡಿದೆ. ಜರ್ಮನಿ ಕೂಡ ತೈಲದ ಮೇಲಿನ ತೆರಿಗೆ ಕಡಿಮೆ ಮೇಡಿ ಇಂಧನ ಬೆಲೆಯನ್ನು ಲೀಟರ್‌ಗೆ 17 ರಿಂದ 19 ರೂ.ಗಳಷ್ಟು ಕಡಿಮೆ ಮಾಡಿದೆ. ಯುಕೆ ಕೂಡ ಮನೆಗಳಿಗೆ 100 ಪೌಂಡ್ (ಸುಮಾರು 12,875 ರೂ.) ತೈಲ ಸಬ್ಸಿಡಿ ನೀಡಿದೆ, ಜೊತೆಗೆ ಇಂಧನ ಮತ್ತು ವಿದ್ಯುತ್ ಮೇಲಿನ ತೆರಿಗೆ ಕಡಿಮೆ ಮಾಡಿತು. ಐರ್ಲೆಂಡ್ ಕೂಡ 250 ಮಿಲಿಯನ್ ಯೂರೋ (ಸುಮಾರು 27 ಸಾವಿರ ಕೋಟಿ) ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯನ್ನ ಸುಮಾರು 17 ರಿಂದ 22 ರೂಪಾಯಿಗಳಷ್ಟು ಕಡಿತಗೊಳಿಸಿದೆ.
ನರೇಂದ್ರ ಮೋದಿ ಜಿ, ನಮಗೆ ಹೇಳಿ, ಈ ಕಂತು ಆಧಾರಿತ ಲೂಟಿಯಲ್ಲಿ ಯಾರೆಲ್ಲಾ ಪಾಲು ಪಡೆಯುತ್ತಿದ್ದಾರೆ? ಯಾಕೆ ಇಷ್ಟೊಂದು ರಾಜಿ ಮಾಡಿಕೊಂಡಿದ್ದೀರಿ? ಈ ಸರ್ಕಾರದಲ್ಲಿ ನಿಜವಾದ ಬಿಕ್ಕಟ್ಟು ಎಂದರೆ ಅದು ನಾಯಕತ್ವ ಬಿಕ್ಕಟ್ಟು ಅದನ್ನು 140 ಕೋಟಿ ಭಾರತೀಯರು ಈಗ ಅರ್ಥ ಮಾಡಿಕೊಂಡಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.

ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ – ಟಿಎಂಸಿ
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಗೆ ಟಿಎಂಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕೇವಲ 10 ದಿನಗಳಲ್ಲಿ 3ನೇ ಬಾರಿಗೆ ಬೆಲೆ ಏರಿಕೆ ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಪೆಟ್ರೋಲ್ ಬಂಕ್‌ಗಳನ್ನು ಜನರಿಂದ ಹಣ ವಸೂಲಿ ಮಾಡುವ ಕೇಂದ್ರಗಳನ್ನಾಗಿ ಮಾಡಿಕೊಂಡು ಬಿಟ್ಟಿದೆ. ಇವರ ಭಾಷಣಗಳು ಹಾಗೂ ಪ್ರಚಾರದ ಹಿಂದೆ ಜನರ ಸಮಸ್ಯೆಗಳು ಮರೆಮಾಚುತ್ತಿವೆ. ಸಾರಿಗೆ ವೆಚ್ಚ ಹಾಗೂ ದಿನನಿತ್ಯದ ಬದುಕಿನ ಖರ್ಚು ಕೂಡ ಹೆಚ್ಚಾಗುತ್ತದೆ. ಶ್ರೀಮಂತರಿಗೆ ಇದರಿಂದ ಹೆಚ್ಚು ತೊಂದರೆ ಆಗುವುದಿಲ್ಲ. ಆದರೆ ಬಡವರು ಮತ್ತು ಮಧ್ಯಮ ವರ್ಗದವರು ಈ ರೀತಿಯ ಆರ್ಥಿಕ ಒತ್ತಡದಿಂದ ಬೇಸತ್ತಿದ್ದಾರೆ ಎಂದು ಆರೋಪಿಸಿದೆ.
ತೈಲಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ – ಕೇಜ್ರಿವಾಲ್
ದೇಶಾದ್ಯಂತ ಜನರು ತೈಲ ಮತ್ತು ಗ್ಯಾಸ್ ಬೆಲೆ ಏರಿಕೆ ಹಾಗೂ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಷ್ಯಾ ಮತ್ತು ಇರಾನ್ ಭಾರತಕ್ಕೆ ಕಡಿಮೆ ದರದಲ್ಲಿ ತೈಲ ಹಾಗೂ ಗ್ಯಾಸ್ ನೀಡಲು ಸಿದ್ಧವಾಗಿವೆ. ಸರ್ಕಾರ ಕೆಡಿಮೆ ಬೆಲೆಗೆ ಖರೀದಿಸಿ ಜನರಿಗೆ ನೆಮ್ಮದಿ ನೀಡಬೇಕೇ? ಎಂದು ಪ್ರಶ್ನಿಸಿದ್ದಾರೆ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಎಷ್ಟಿದೆ?
ದೆಹಲಿ: 99.51 (+0.87)
ಕೋಲ್ಕತ್ತಾ: 110.64 (+0.94)
ಮುಂಬೈ: 108.49 (+0.90)
ಚೆನ್ನೈ: 105.31 (+0.82)
ಡೀಸೆಲ್
ದೆಹಲಿ: 92.49 (+0.91)
ಕೋಲ್ಕತ್ತಾ: 97.02 (+0.95)
ಮುಂಬೈ: 95.02 (+0.94)
ಚೆನ್ನೈ: 96.98 (+0.87)
